‘ದಂಡತೀರ್ಥ’  ಶೀರ್ಷಿಕೆ ಅನಾವರಣ

ವೈಕುಂಠ ಏಕಾದಶಿ ಶುಭದಿನದಂದು “ದಂಡ ತೀರ್ಥ ಚಿತ್ರದ ಶೀರ್ಷಿಕೆ ಅನಾವರಣವಾಗಿದೆ. ಹರಿಪ್ರಾಣ ‘ಪ್ರಾಣ ಪೆÇ್ರಡಕ್ಷನ್’ ಸಂಸ್ಥೆ ಹುಟ್ಟುಹಾಕಿ ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಆಕ್ಷನ್ ಕಟ್ ಹೇಳುತ್ತಿದ್ದಾರೆ.ಉಮೇಶ್ ಬಂಡವಾಳ ಹೂಡುತ್ತಿದ್ದಾರೆ.

ನಿರ್ದೇಶಕರು ಪ್ರತಿಕ್ರಿಯೆ ನೀಡಿ ದಂಡ ಎಂದರೆ ಶಿಕ್ಷೆ. ತೀರ್ಥಕ್ಕೆ ಪ್ರಸಾದ ಎನ್ನುವುದುಂಟು. ಆಂಜನೇಯನ ಭಕ್ತನಿಗೆ ಮತ್ತು ಮಾರುತಿಗೆ ಮತ್ತೊಂದು ಹೆಸರು.ಮೊದಲರ್ಧ ನೈಜ ಘಟನೆಯಲ್ಲಿ ಕಾಮಿಡಿ, ಉಳಿದದ್ದು ಕಾಲ್ಪನಿಕವಾಗಿ ರಿವೆಂಜ್ ಸ್ಟೋರಿಯಲ್ಲಿ ಸಾಗುತ್ತದೆ.

ಮಾಧ್ಯಮದವರು ಸ್ಟಿಂಗ್ ಆಪರೇಶನ್ ನಡೆಸುವಂತೆ, ಸಿನಿಮಾದಲ್ಲೂ ಇದೇ ರೀತಿಯ ಹೋಲಿಕೆ ಇರುತ್ತದೆ. ನಾಲ್ಕು ಹಾಸ್ಯ ನಟರಿಗೆ ಗಂಭಿರವಾದ ಪಾತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಬೆಂಗಳೂರು, ಮೈಸೂರು ಕಡೆಗಳಲ್ಲಿ ಚಿತ್ರೀಕರಣವನ್ನು ನೂತನ ವರ್ಷದಿಂದ ಹೊಸತನದಲ್ಲಿ ನಡೆಸಲು ಯೋಜನೆ ಹಾಕಲಾಗಿದೆ.

 ಅಲ್ಲದೆ ‘ಪ್ರಾಣ ಆಡಿಯೋ’ ಮುಂದಿನ ದಿನಗಳಲ್ಲಿ ಶುರು ಮಾಡಲಾಗುತ್ತಿದೆ. ಹಾಗೂ ‘ಪ್ರಾಣ ಎಂಟರ್ಟೈನ್ಮೆಂಟ್’ ಮೂಲಕ ರಾಜ್ಯದಾದ್ಯಂತ ಡ್ಯಾನ್ಸರ್, ಗಾಯಕರುಗಳಿಗೆ ವೇದಿಕೆ ಕಲ್ಪಿಸಲು ರಿಯಾಲಿಟಿ ಷೋ ನಡೆಸಲಾಗುವುದು. ಇದರಲ್ಲಿ ಗೆದ್ದ ಮೂವರಿಗೆ ಬಹುಮಾನ ನೀಡಿ, ಚಿತ್ರಗಳಿಗೆ ಇವರುಗಳ ಹೆಸರುಗಳನ್ನು ಶಿಪಾರಸ್ಸು ಮಾಡಲಾಗುತ್ತದೆ ಎಂಬುದರ ಮಾಹಿತಿ ನೀಡಿದರು.

ತಾರಾಗಣದಲ್ಲಿ ಅವಿನಾಶ್(ಜ್ಯೂ.ದರ್ಶನ್), ರಜನಿಕಾಂತ್, ರೇಣುಕಪ್ರಸಾದ್, ಕುರಿಪ್ರತಾಪ್, ಚಂದ್ರಪ್ರಭ, ಜ್ಯೋತಿ, ದೇವು ಸಕಲೇಶಪುರ, ಖಳನಾಗಿ ಪುನೀತ್ ಮತ್ತು ಶರಣ್, ಬೇಬಿ ಶಾನ್ವಿ ನಾಯಕಿಯರುಗಳಾಗಿ ಮಾನಸಗೌಡ, ಪೂಜರಾಮಚಂದ್ರ ಮುಂತಾದವರು ನಟಿಸುತ್ತಿದ್ದಾರೆ. ಛಾಯಾಗ್ರಹಣ ಜಿ.ರಂಗಸ್ವಾಮಿ, ನೃತ್ಯ ಜಿ.ಪಿ.ಆರಾಧ್ಯ, ಕಾರ್ಯಕಾರಿ ನಿರ್ಮಾಪಕ ವಿಜಯ್ ಚಿತ್ರಕ್ಕಿದೆ.