ದಂಡಗುಂಡ ಬಸವಣ್ಣನ ಜಾತ್ರಾ ಮಹೋತ್ಸವ

ಕಲಬುರಗಿ,ಸೆ.2-ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಕ್ಷೇತ್ರ ದಂಡಗುಂಡದ ಬಸವಣ್ಣನ ಜಾತ್ರಾ ಮಹೋತ್ಸವ 3 ದಿವಸಗಳ ಪರ್ಯಂತ ಸೆ.3 ರಿಂದ 5 ದಿನಗಳವರೆಗೆ ಅದ್ದೂರಿಯಿಂದ ಜರುಗುವುದು.
ಸೆ.3 ರಂದು ರವಿವಾರ ಗಂಗಸ್ಥಳ, 4 ರಂದು ಸೋಮವಾರ ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ಮಧ್ಯಾಹ್ನ 12.30 ನಿಮಿಷಕ್ಕೆ ಸಂಗನಬಸವ ಶಿವಾಚಾರ್ಯರಿಗೆ ಶಿವ ಭಕ್ತ ಸಂಪನ್ನರಾದ ಅಕ್ಕಲಕೋಟ ತಾಲ್ಲೂಕಿನ ದುಧನಿಯ ಲಲಿತಾಬಾಯಿ ಶಾಮರಾಯ ದೇವಣಿ ದಂಪತಿಗಳಿಂದ ತುಲಾಭಾರ ಸೇವೆ ನಡೆಯುವುದು. ನಂತರ ಸಂಜೆ 6 ಗಂಟೆಗೆ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶದ, ತೆಲಂಗಾಣ ರಾಜ್ಯದಿಂದ ಆಗಮಿಸಿದ ಭಕ್ತರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರುÀ ಹಾಗೂ ದಂಡಗುಂಡದ ಸಕಲ ಭಕ್ತರಿಂದ ಅದ್ದೂರಿಯಿಂದ ರಥೋತ್ಸವ ಕಾರ್ಯಕ್ರಮ ನಡೆಯುವುದು.
5 ರಂದು ಮಂಗಳವಾರ ಕೈ ಕುಸ್ತಿ ಕಾರ್ಯಕ್ರಮ ನಡೆಯುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಠದ ಪೀಠಾಧ್ಯಕ್ಷರಾದ ಸಂಗನಬಸವ ಶಿವಾಚಾರ್ಯರು ವಹಿಸುವರು.
ಜಾತ್ರಾಮಹೋತ್ಸವ ಅಂಗವಾಗಿ ಕಲಬುರಗಿಯಿಂದ, ಯಾದಗಿರಿಯಿಂದ, ಚಿತ್ತಾಪುರದಿಂದ, ಜೇವರ್ಗಿಯಿಂದ ಹೀಗೆ ಹಲವಾರು ತಾಲೂಕು ಜಿಲ್ಲೆಯಿಂದ ವಿಶೇಷ ಬಸ್ಸಿನ ವ್ಯವಸ್ಥೆ ಇರುತ್ತದೆ. ಕಾರಣ ಸದ್ಭಕ್ತರು ಈ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಗುರುಸಂಗಮೇಶ್ವರ ಹಾಗೂ ಬಸವಣ್ಣನ ದರ್ಶನ ಆಶೀರ್ವಾದ ಪಡೆದು ಪ್ರಸಾದ ಸೇವಿಸಿ ಪಾವನಾರಾಗಬೇಕೆಂದು ಜಾತ್ರಾ ಮಹೋತ್ಸವ ಕಮಿಟಿ ವತಿಯಿಂದ ಅಂಬಾರಾಯ ಎಂ.ಕೋಣೆ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.