ಥ್ರೋಬಾಲ್ ರಾಷ್ಟ್ರಮಟ್ಟಕ್ಕೆ ಆಯ್ಕೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ: ನಗರದ ಎಸ್.ಇ.ಎಸ್. ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕರ್ನಾಟಕ ರಾಜ್ಯ ಥ್ರೋಬಾಲ್ ಅಸೋಸಿಯೇಷನ್ ನೊಂದಾಯಿತದ ಕಾರ್ಯದರ್ಶಿ ಹೆನ್ರಿ ಪ್ರಸನ್ನ ಕುಮಾರ್ ಆರ್. ಇವರು ದೃಢಪಡಿಸಿರುವ ಸಿರುಗುಪ್ಪ ಎಜುಕೇಶನ್ ಸೊಸೈಟಿ ಆಂಗ್ಲ ಮಾಧ್ಯಮ ಶಾಲೆಯ ಶಶಾಂಕ್, ಸಂತೋಷ ಕೋರಿ, ಖಾಜಾ ಬಂದೇ ನವಾಜ್, ಮತ್ತು ಅನುಷಾ ಈ ನಾಲ್ಕು ವಿದ್ಯಾರ್ಥಿಗಳು ರಾಜ್ಯಮಟ್ಟದ ಥ್ರೋಬಾಲ್ ಪಂದ್ಯಾವಳಿಗಳಿಗೆ ಆಯ್ಕೆಯಾಗಿದ್ದರೆ. ಆಗಸ್ಟ್ ತಿಂಗಳ ನಾಲ್ಕನೇ ತಾರೀಖಿನಿಂದ ಆರನೇ ತಾರೀಖಿನವರೆಗೂ ಪಾಂಡಿಚೆರಿಯಲ್ಲಿ ನಡೆಯುವ ಪಂದ್ಯಾವಳಿಗಳಲ್ಲಿ ಸ್ಪರ್ಧಿಸಲಿದ್ದಾರೆ.
ಸಂಸ್ಥೆಯ ಅಧ್ಯಕ್ಷರು, ಆಡಳಿತ ಮಂಡಳಿ, ಶಾಲೆಯ ಮುಖ್ಯ ಗುರು ಮತ್ತು ಶಿಕ್ಷಕರು ರಾಜ್ಯಮಟ್ಟಕ್ಕೆ ತೆರಳುವ ಈ ಕ್ರೀಡಾಪಟುಗಳನ್ನು ಇನ್ನೂ ಹೆಚ್ಚಿನ ಸಾಧನೆ ಮಾಡಿ ಶಾಲೆ, ಸಿರುಗುಪ್ಪ ತಾಲೂಕು ಮತ್ತು ಬಳ್ಳಾರಿ ಜಿಲ್ಲೆಗೂ ಹೆಸರು ತಂದು ಕೊಡಲಿ ಎಂದು ದೈಹಿಕ ಶಿಕ್ಷಕರಾದ ವೈ.ಡಿ ವೆಂಕಟೇಶ್ ಮತ್ತು ಖಾದರಭಾಷ ಅಭಿನಂದಿಸಿದ್ದಾರೆ.