ಥ್ಯಾಂಕ್ ಗಾಡ್ ಚಿತ್ರದಲ್ಲಿ ಹಿಂದೂ ದೇವತೆಗೆ ಅವಮಾನ

ಬೆಂಗಳೂರು, ಸೆ. ೧೬- ಬಾಲಿವುಡ್ ನಟ ಅಜೇಯ್ ದೇವಗನ್ ನಟಿಸಿರುವ ‘ಥ್ಯಾಂಕ್ ಗಾಡ್’ ಚಿತ್ರದಲ್ಲಿ ಹಿಂದೂ ದೇವತೆಗಳಿಗೆ ಅವಮಾನ ಮಾಡಲಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಆರೋಪಿಸಿದೆ.
ಈ ಕುರಿತು ಪತ್ರಿಕೆ ಹೇಳಿಕೆ ಬಿಡುಗಡೆ ಮಾಡಿರುವ ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಸ್ ಶಿಂಧೆ ಈ ಚಲನಚಿತ್ರದ ಟ್ರೇಲರ್ ಯೂ ಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ.
ಈ ಚಿತ್ರದಲ್ಲಿ ಹಿಂದೂ ಧರ್ಮದಲ್ಲಿ ಮೃತ್ಯುವಿನ ನಂತರ ಪ್ರತಿಯೊಬ್ಬರ ಪಾಪಪುಣ್ಯಗಳನ್ನು ಲೆಕ್ಕ ಹಾಕುವ ಚಿತ್ರಗುಪ್ತ ದೇವರು ಮತ್ತು ಮೃತ್ಯುವಿನ ನಂತರ ಆತ್ಮವನ್ನು ತೆಗೆದುಕೊಂಡು ಹೋಗುವ ಯಮ ದೇವತೆಯನ್ನು ಆಧಿಕರೂಪದಲ್ಲಿ ತೋರಿಸಲಾಗಿದೆ ಎಂದು ಹೇಳಿದ್ದಾರೆ.
ಈ ಚಿತ್ರದ ಟ್ರೇಲರ್ ಬಿಡುಗಡೆಯಾಗುವಾಗ ಸೆನ್ಸಾರ್ ಮಂಡಳಿ ನಿದ್ರೆ ಮಾಡುತ್ತಿತ್ತೆ ಎಂದು ಪ್ರಶ್ನಿಸಿರುವ ಯಾವುದೇ ಕಾರಣಕ್ಕೂ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಸರ್ಟಿಫಿಕೇಟ್ ನೀಡಬಾರದು. ಒಂದು ವೇಳೆ ನೀಡಿದರೇ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.