ಥ್ಯಾಂಕ್ಸ್ ಗೀವಿಂಗ್ ದಿನಾಚರಣೆ

ಇಂದು ಥ್ಯಾಂಕ್ಸ್ ಗೀವಿಂಗ್ ದಿನಾಚರಣೆ. ಥ್ಯಾಂಕ್ಸ್ ಗೀವಿಂಗ್ ಅನ್ನುವುದು ಒಂದು ಹಬ್ಬ. ಈ ಹಬ್ಬವನ್ನು ಅಮೇರಿಕಾ ಹಾಗೂ ಕೆನಡಾದಲ್ಲಿ ಆಚರಿಸುತ್ತಾರೆ. ಪ್ರತಿವರ್ಷ ನವಂಬರ್ ತಿಂಗಳಿನ ನಾಲ್ಕನೇ ವಾರದ ಗುರುವಾರದಂದು ಈ ಹಬ್ಬವನ್ನು ಆಚರಿಸಲಾಗುವುದು. ಈ ಹಬ್ಬಕ್ಕೆ ಮನೆಯಿಂದ ದೂರವಿರುವವರು ಕೂಡ ಮನೆಗೆ ಬರುತ್ತಾರೆ. ನಂತರ ಎಲ್ಲರು ಸೇರಿ ದೇವರಿಗೆ ಥ್ಯಾಂಕ್ಸ್ ಅನ್ನು ಹೇಳಲಾಗುವುದು.

ಥ್ಯಾಂಕ್ಸ್‌ಗಿವಿಂಗ್ ಅನ್ನು ಪ್ಲೈಮೌತ್‌ನ ಇಂಗ್ಲಿಷ್ ವಸಾಹತುಗಾರರು (ಪಿಲ್ಗ್ರಿಮ್ಸ್) ಮತ್ತು 1621 ರಲ್ಲಿ ವಾಂಪನಾಗ್ ಜನರು ಹಂಚಿಕೊಂಡ ಸುಗ್ಗಿಯ ಹಬ್ಬದ ಮಾದರಿಯಲ್ಲಿ ಎಂದು ನಂಬಲಾಗಿದೆ. ಅಕ್ಟೋಬರ್ 3, 1863 ರಂದು, ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರು ನವೆಂಬರ್ ೨೫ ರ ಗುರುವಾರದಂದು ಆಚರಿಸಲು ರಾಷ್ಟ್ರೀಯ ಥ್ಯಾಂಕ್ಸ್ಗಿವಿಂಗ್ ದಿನವನ್ನು ಘೋಷಿಸಿದರು. ಆದಾಗ್ಯೂ, 1941 ರಲ್ಲಿ ಕಾಂಗ್ರೆಸ್‌ನ ಜಂಟಿ ನಿರ್ಣಯದ ನಂತರ, ಅಧ್ಯಕ್ಷ ಫ್ರಾಂಕ್ಲಿನ್ ಡಿ ರೂಸ್‌ವೆಲ್ಟ್ 1942 ರಲ್ಲಿ ನವೆಂಬರ್‌ನಲ್ಲಿ ನಾಲ್ಕನೇ ಗುರುವಾರವನ್ನು (ಯಾವಾಗಲೂ ಕೊನೆಯ ಗುರುವಾರವಲ್ಲ) ಥ್ಯಾಂಕ್ಸ್‌ಗಿವಿಂಗ್ ಡೇ ಎಂದು ಗೊತ್ತುಪಡಿಸುವ ಘೋಷಣೆಯನ್ನು ಹೊರಡಿಸಿದರು.

ಈ ದಿನ ಕೆಲಸಕ್ಕೆ ಹೋಗುವುದಿಲ್ಲ. ಮನೆಯಲ್ಲಿ ವಿವಿಧ ಬಗೆಯ ಅಡುಗೆಗಳನ್ನು ತಯಾರಿಸಲಾಗುವುದು. ಅದರಲ್ಲೂ ಈ ದಿನದಂದೂ ಕೆಲವೊಂದು ಸ್ಪೆಷೆಲ್ ಆಹಾರಗಳು ಇರಲೇಬೇಕು. ಡಿನ್ನರ್ ಟೇಬಲ್ ಅನ್ನು ಮೇಣದ ಬತ್ತಿಗಳಿಂದ ಅಲಂಕರಿಸಲಾಗುವುದು.ಥ್ಯಾಂಕ್ಸ್ ಗೀವಿಂಗ್ ಹಬ್ಬದಲ್ಲಿ ಟರ್ಕಿ ಕೋಳಿ ಕಡ್ಡಾಯವಾಗಿರಬೇಕು. ಟರ್ಕಿ ಕೋಳಿಯ ಅಡುಗೆ ಮಾಡಲು ಕಾರಣವೇನು ಮತ್ತು ಈ ದಿನದಂದು ಡಿನ್ನರ್ ಟೇಬಲ್ ನಲ್ಲಿ ಇರಬೇಕಾದ ವಸ್ತುಗಳೇನು ಎಂದು ನೋಡೋಣ ಬನ್ನಿ:

ಮನೆ ಮಂದಿಯೆಲ್ಲಾ ಜೊತೆಗೆ ಸೇರಿದಾಗ ತಿನ್ನಲು ಅಧಿಕ ಆಹಾರ ಬೇಕಾಗುತ್ತದೆ. ಮೊದಲು ರೆಡ್ ಇಂಡಿಯನ್ ರು ಭೇಟೆ ಆಡಿ ಪ್ರಾಣಿಗಳನ್ನು ಕೊಂದು ತಿನ್ನುತ್ತಿದ್ದರು. ಒಂದು ಕಡೆ ನೆಲೆನಿಂತು ವ್ಯವಸಾಯ ಪ್ರಾರಂಭಿಸಿದ ಮೇಲೆ ಟರ್ಕಿ ಕೋಳಿಯನ್ನು ತಿನ್ನಲಾರಂಭಿಸಿದರು. ಈ ಹಬ್ಬದಲ್ಲಿ ಟರ್ಕಿ ಕೋಳಿ ಮಾಡಿದರೆ ಎಲ್ಲರಿಗೆ ಸಾಕಾಗುವಷ್ಟು ಇರುವುದಿಂದ ಇದರ ಆಹಾರವನ್ನು ತಯಾರಿಸುತ್ತಿದ್ದರು. ನಂತರ ಇದು ಪದ್ಧತಿಯಾಯಿತು.

ಟರ್ಕಿ ಕೋಳಿಯಿಂದ ಸಾರು, ರೋಸ್ಟ್, ಸ್ಟಫ್ಡ್ ಟರ್ಕಿ, ಕಟ್ಲೇಟ್ ಈ ರೀತಿ ಅನೇಕ ಬಗೆಯ ಖಾದ್ಯಗಳನ್ನು ತಯಾರಿಲಾಗುವುದು. ಈ ದಿನ ಟರ್ಕಿ ಕೋಳಿಯಿಂದ ತಯಾರಿಸಿದ ಅಡುಗೆ ಈ ಹಬ್ಬ ಆಚರಿಸುವವರ ಮನೆಯಲ್ಲಿ ಇದ್ದೇ ಇರುತ್ತದೆ.ಮಾಂಸ ಇದ್ದ ಮೇಲೆ ವೈನ್ ಇಲ್ಲದಿದ್ದರೆ ಹೇಗೆ? ಅದರಲ್ಲೂ ಟರ್ಕಿ ಕೋಳಿಯ ಅಡುಗೆ ಜೊತೆ ಕುಡಿಯಲು ವೈನ್ ಇದ್ದರೆ ಅಡುಗೆಯ ಘಮ್ಮತ್ತು ಹೆಚ್ಚಾಗುವುದು.

ಈ ಹಬ್ಬದಲ್ಲಿ ಡಿನ್ನರ್ ಟೇಬಲ್ ಅನ್ನು ತುಂಬಾ ವಿಶೇಷವಾಗಿ ಅಲಂಕರಿಸಲಾಗವುದು. ಆಕರ್ಷಕವಾದ ಮೇಣದ ಬತ್ತಿಗಳನ್ನು ಹಚ್ಚಿಡಲಾಗುವುದು. ಹೊಸ ಟೇಬಲ್ ಕ್ಲೋಥ್ ಹಾಕಿ ಹೊಸ ಸ್ಪೂನ್, ನೈಫ್ ಅಂತ ಟೇಬಲ್ ಅನ್ನು ಅಲಂಕರಿಸಲಾಗುವುದು.ಮನೆ ಮಂದಿಯೆಲ್ಲಾ ಜೊತೆ ಸೇರಿ ದೇವರಿಗೆ ಧನ್ಯವಾದಗಳನ್ನು ಅರ್ಪಿಸಿ ನಂತರ ಎಲ್ಲರೂ ಜೊತೆಯಲ್ಲಿ ಸೇರಿ ಹಬ್ಬದ ಅಡುಗೆಯನ್ನು ತಿನ್ನುತ್ತಾರೆ. ಇವು ಈ ಹಬ್ಬದ ವಿಶೇಷವಾಗಿವೆ.