ಕಲಬುರಗಿ,ಜು.17: ಗುಲ್ಬರ್ಗ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಪ್ರಾಂಶುಪಾಲ ಮತ್ತು ಸಂಯೋಜನಾಧಿಕಾರಿಯಾದ ಡಾ. ಎಚ್. ಎಸ್. ಜಂಗೆ ಅವರು ಥೈಲ್ಯಾಂಡ್ ದೇಶದ ಚುಲಾಂಕರ್ನ್ ವಿಶ್ವವಿದ್ಯಾಲಯ ಬ್ಯಾಂಕಾಕ್ ನಲ್ಲಿ ಜುಲೈ 22 ರಿಂದ 26 ವರೆಗೆ ನಡೆಯಲಿರುವ “ಇಂಟರ್ನ್ಯಾಷನಲ್ ಆರ್ಗನೈಝೇಶನ್ ಫಾರ್ ಹೆಲ್ಥ್ ಸ್ಪೋರ್ಟ್ಸ್ ಅಂಡ್ ಕಿನಿಸಿಯಾಲಜಿ” ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಸಂಪನ್ಮೂಲ ವ್ಯಕ್ತಿ ಆಗಿ ಪ್ರಬಂಧ ಮಂಡನೆ ಮಾಡಲಿದ್ದಾರೆ. ಇವರಿಗೆ ವಿಶ್ವವಿದ್ಯಾಲಯದ ಸ್ನೇಹಿತರು ಮತ್ತು ವಿದ್ಯಾರ್ಥಿಗಳು ಅಭಿನಂದನೆಗಳು ಸಲ್ಲಿಸಿದ್ದಾರೆ.