ಥೈಲ್ಯಾಂಡ್‍ನಲ್ಲಿ ಹಂಪಿ ಮಕ್ಕಳ ಯೋಗ ಸಾಧನೆ ಸ್ವರ್ಣ-ರಜತ ಪದಕ ಗಳಿಸಿದ ಯೋಗ ಪಟುಗಳು

ಸಂಜೆವಾಣಿ ವಾರ್ತೆಹೊಸಪೇಟೆ, ಸೆ.12: ಹಂಪಿ ಬೀದಿ ಬದಿಯ ವ್ಯಾಪಾರಿಗಳ ಮಕ್ಕಳಿಬ್ಬರೂ ಥೈಲ್ಯಾಂಡ್‍ನಲ್ಲಿ ನಡೆದ ಯೋಗ ಚಾಂಪಿಯನ್ ಶಿಫ್ ಪಂದ್ಯಾವಳಿಯಲ್ಲಿ ಸ್ವರ್ಣ ಮತ್ತು ರಜತ ಪದಕಗಳನ್ನು ಗಳಿಸಿ, ಕೀರ್ತಿ ತಂದಿದ್ದಾರೆ.ಮಹಿಳಾ ವಿಭಾಗದಲ್ಲಿ ಹಂಪಿಯ ನಾಗಮ್ಮ ಪ್ರಥಮ ಸ್ಥಾನ ಪಡೆದು, ಚಿನ್ನದ ಪದಕ ಗಳಿಸಿದರೆ, ಪುರಷರ ವಿಭಾಗದಲ್ಲಿ ಗಣೇಶ್ ದ್ವೀತಿಯ ಸ್ಥಾನ ಪಡೆದು ಬೆಳ್ಳಿ ಪದಕ ಗಳಿಸಿದ್ದಾರೆ. ಯೋಗ ವ್ಯವಸ್ಥಾಪಕರಾದ ರಂಜಾನ್, ಕೋಚ್ ಬಿ ಪಿ, ಫಕ್ರುದ್ದೀನ್ ಇವರಿಬ್ಬರಿಗೆ ಅಭಿನಂದಿಸಿದ್ದಾರೆ.ಹಂಪಿಯ ರಂಜು ಆಟ್ರ್ಸ್ ಯೋಗ ಟ್ರಸ್ಟ್ ಈ ಇಬ್ಬರು ಯೋಗ ಪಟುಗಳನ್ನು ಅಣಿಗೊಳಿಸಿತ್ತು. ಇತ್ತೀಚಿಗೆ ಇವರು, ಬೆಂಗಳೂರಿನಲ್ಲಿ ರಾಷ್ಟ್ರೀಯ ಯೋಗ ಸ್ಪರ್ಧೆ ಭಾಗವಸಿ, ಉತ್ತಮ ಸಾಧನೆ ಮಾಡಿ ಥೈಲ್ಯಾಂಡ್‍ನಲ್ಲಿ ಯೋಗ ಪಂದ್ಯಾವಳಿಗೆ ಆಯ್ಕೆಯಾಗಿದ್ದರು.ಥೈಲ್ಯಾಂಡ್‍ಗೆ ತೆರಳಲು ಇಬ್ಬರಿಗೂ ಅನೇಕ ಸಹೃದಯಿರು ಆರ್ಥಿಕ ಸಹಾಯ ಮಾಡಿದ್ದರು.