ತ.ನಾಡಿನ ಯುವಕರಲ್ಲಿ ಸೋಂಕು ಹೆಚ್ಚಳ

ಚೆನ್ನೈ, ಮಾ.೨೯- ಇತ್ತೀಚಿಗೆ ೧೮ ರಿಂದ ೪೫ ವಯೋಮಾನದ ಯುವ ಪೀಳಿಗೆಯಲ್ಲಿಯೇ ಕೋವಿಡ್ -೧೯ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದ್ದು, ಶೇಕಡ ೫೧ರಷ್ಟು ಹೆಚ್ಚಾಗಿದೆ ಎಂದು ತಮಿಳುನಾಡಿನ ಆರೋಗ್ಯ ಕಾರ್ಯದರ್ಶಿ ಜೆ.ರಾಧಾಕೃಷ್ಣನ್ ಹೇಳಿದ್ದಾರೆ.
ಇಲ್ಲಿನ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಹೆಚ್ಚುವರಿ ಕೋವಿಡ್ -೧೯ ಹಾಸಿಗೆಗಳನ್ನು ಪರಿಶೀಲಿಸಿದ ನಂತರ ಮಾತನಾಡಿದ ಅವರು, ರಾಜ್ಯ ಸರ್ಕಾರ ’ಪರೀಕ್ಷೆ, ಟ್ರ್ಯಾಕ್ ಮತ್ತು ಚಿಕಿತ್ಸೆ ಯೋಜನೆ ಮತ್ತು ಹರಡುವಿಕೆಯನ್ನು ಒಳಗೊಂಡಿರುವ ಮಾದರಿಗಳ ಪರೀಕ್ಷೆಯನ್ನು ಹೆಚ್ಚಿಸಿದೆ ಎಂದರು.
ಸೋಂಕಿತರಲ್ಲಿ ಶೇ.೪೨ರಷ್ಟು ಮಂದಿ ೪೫ ವರ್ಷಕ್ಕಿಂತ ಮೇಲ್ಪಟ್ಟವರಿದ್ದಾರೆ.ಅದೇ ರೀತಿಯಲ್ಲಿ, ೧೮ ರಿಂದ ೪೫ ವರ್ಷದೊಳಗಿನ ಸೋಂಕಿತರಿಂದ ವೃದ್ಧರಿಗೂ ಸೋಂಕು ಹರಡುವ ಭೀತಿ ಇದೆ.ಅಲ್ಲದೆ, ಕಾಲೇಜುಗಳು ಮುಚ್ಚಲ್ಪಟ್ಟಿದ್ದರೂ, ಕೆಲ ವಿದ್ಯಾರ್ಥಿಗಳಿಗೂ ಸೋಂಕು ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ ಎಂದರು.
ಇನ್ನು, ರಾಜ್ಯದ ಚೆನ್ನೈ, ಚೆಂಗಲ್‌ಪೇಟೆ, ಕೊಯಮತ್ತೂರು, ತಂಜಾವೂರು ಮತ್ತು ತಿರುವರೂರು ಜಿಲ್ಲೆಗಳಲ್ಲಿ ಮಾ.೫ ರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಹರಡಿದೆ.
ದಿನಕ್ಕೆ ೯೫,೦೦೦ ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಆರೋಗ್ಯ ಮತ್ತು ಕಂದಾಯ ಇಲಾಖೆಗಳು ಮತ್ತು ಸ್ಥಳೀಯ ಆಡಳಿತವು ಕೆಲವು ಬೂತ್ ಮಟ್ಟದ ಮೇಲ್ವಿಚಾರಣಾ ಅಧಿಕಾರಿಗಳು ಕಟ್ಟುನಿಟ್ಟಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಲಾಕ್‌ಡೌನ್ ಜಾರಿಗೊಳಿಸುವ ಪ್ರಶ್ನೆಗೆ ಉತ್ತರಿಸಿದ ಅವರು, ಹಿರಿಯ ಸರ್ಕಾರಿ ಅಧಿಕಾರಿಗಳನ್ನು ಒಳಗೊಂಡ ಕೋರ್ ಸಮಿತಿಯನ್ನು ರಚಿಸಲಾಗಿದೆ, ಇದು ವೈರಸ್‌ನ ಪ್ರಭಾವವನ್ನು ವಿಶ್ಲೇಷಿಸುತ್ತದೆ.
ಅಗತ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮಿತಿ ತನ್ನ ವರದಿಯನ್ನು ಮುಖ್ಯ ಕಾರ್ಯದರ್ಶಿ (ರಾಜೀವ್ ರಂಜನ್) ಗೆ ಸಲ್ಲಿಸುತ್ತದೆ. ಅಲ್ಲದೆ, ಕಂಪನಿಗಳು, ವಿಶೇಷವಾಗಿ ಸೇವಾ ವಲಯದಲ್ಲಿ, ಮನೆ ಯಿಂದ ಕೆಲಸ ನಿರ್ವಹಿಸಬೇಕೆಂದು ಅವರು ಸಲಹೆ ನೀಡಿದರು.
ಕಳೆದ ವರ್ಷ ಜುಲೈನಲ್ಲಿ ೬,೦೦೦ ದಿಂದ ಪ್ರಕರಣಗಳ ಸಂಖ್ಯೆ ೨,೦೦೦ ಕ್ಕೆ ಇಳಿದಿದೆ ಎಂದ ಅವರು, ಕಳೆದ ವರ್ಷ ಜುಲೈನಲ್ಲಿ ದಿನಕ್ಕೆ ಪರೀಕ್ಷಿಸಲ್ಪಟ್ಟ ಪ್ರಕರಣಗಳು ಮತ್ತು ಮಾದರಿಗಳ ಸಂಖ್ಯೆ ೬,೦೦೦ ಮತ್ತು ೬೦,೦೦೦ ದಿಂದ ಇಳಿದಿದೆ, ೨,೦೦೦ ಸೋಂಕುಗಳು ಮತ್ತು ಪ್ರಸ್ತುತ ೯೦,೦೦೦ ಮಾದರಿಗಳನ್ನು ಪರೀಕ್ಷಿಸಲಾಗುತ್ತಿದೆ.
ಆದರೆ, ಆತಂಕಕಾರಿ ಅಂಶವೆಂದರೆ ಈ ವರ್ಷ ಕೇವಲ ಮೂರು ತಿಂಗಳಲ್ಲಿ ಪ್ರಕರಣಗಳು ಶೀಘ್ರವಾಗಿ ಏರಿಕೆಯಾಗಿದ್ದು, ದಿನಕ್ಕೆ ೪೫೦ ರಿಂದ (ಜನವರಿಯಲ್ಲಿ) ಪ್ರಸ್ತುತ ೨,೦೦೦ ಕ್ಕಿಂತ ಹೆಚ್ಚಾಗಿದೆ ಎಂದು ರಾಧಾಕೃಷ್ಣ ಹೇಳಿದರು.