
ಬೆಂಗಳೂರು,ಮೇ.೨೧- ಬನಶಂಕರಿ, ಜಯನಗರ ಸೇರಿದಂತೆ ನಗರದ ದಕ್ಷಿಣ ಭಾಗಗಳಲ್ಲಿ ಅಪರಾಧ ಕೃತ್ಯಗಳನ್ನು ನಡೆಸುತ್ತ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದ್ದ ಕುಖ್ಯಾತ ರೌಡಿ ಬಾಬು ಅಲಿಯಾಸ್ ಅಲ್ಯೂಮಿನಿಯಂ ಬಾಬು ಶವ ತಮಿಳುನಾಡಿನ ತಳಿ – ಡೆಂಕಣಿಕೋಟೆ ಬಳಿಯ ಅರಣ್ಯದಲ್ಲಿ ಪತ್ತೆಯಾಗಿದೆ.
ಪ್ಲಾಸ್ಟಿಕ್ ಚೀಲದಲ್ಲಿ ಅರೆಸುಟ್ಟ ಅಲ್ಯೂಮಿನಿಯಂ ಬಾಬು ಶವವನ್ನು ತಾಳೆ ಪೊದೆಯಲ್ಲಿ ಬಚ್ಚಿಟ್ಟು ಕೊಲೆಗಾರರು ಪರಾರಿಯಾಗಿದ್ದಾರೆ.
ಜಯನಗರ ಠಾಣೆಯ ರೌಡಿ ಪಟ್ಟಿಯಲ್ಲಿದ್ದ ಬಾಬುವನ್ನು ಕಾರಿನಲ್ಲೇ ಅಪಹರಿಸಿ ಮಾಡಿದ್ದಾರೆಯೇ ಅಥವಾ ಬಾಬುವಿನ ಬೈಕ್ ಅಪಘಾತ ಮಾಡಿ ಕೊಲೆ ಮಾಡಿದರಾ ಎಂಬುದನ್ನು ಪೊಲೀಸರೇ ಪತ್ತೆ ಹಚ್ಚಬೇಕಿದೆ.
ಕೊಲೆ, ಸುಲಿಗೆ, ಬೆದರಿಕೆ, ದರೋಡೆ ಸೇರಿ ಹಲವು ಪ್ರಕರಣಗಳಲ್ಲಿ ಅಲ್ಯೂಮಿನಿಯಂ ಬಾಬು ಭಾಗಿಯಾಗಿದ್ದ. ಇತ್ತೀಚೆಗೆ ಬೆಂಗಳೂರಿನಿಂದ ತಮಿಳುನಾಡಿಗೆ ರೌಡಿಶೀಟರ್ ಬಾಬು ವಾಸ್ತವ್ಯ ಬದಲಿಸಿದ್ದ. ಇದೀಗ ಕೃಷ್ಣಗಿರಿ ತಾಲೂಕಿನ ಡೆಂಕಣಕೋಟೆ ಅರಣ್ಯ ಪ್ರದೇಶದಲ್ಲಿ ಆತನ ಶವ ಪತ್ತೆಯಾಗಿದೆ.
ನಗರದ ಪಾತಕ ಲೋಕದ ಅರಸಯ್ಯ – ಜಲ್ಲಿ ವೆಂಕಟೇಶ್ ಸಿಂಡಿಕೇಟ್‌ನಲ್ಲಿ ಗುರುತಿಸಿಕೊಂಡಿದ್ದ ಬಾಬು ಅಲ್ಯೂಮಿನಿಯಂ ರೌಡಿ ಎಂದೇ ಕುಖ್ಯಾತಿ ಪಡೆದಿದ್ದ. ಈಗ ಅರಸಯ್ಯ-ಜಲ್ಲಿ ವೆಂಕಟೇಶ್ ಇಲ್ಲವಾಗಿದ್ದರಿಂದ ಐದಾರು ವರ್ಷಗಳಿಂದ ಕೊತ್ತನೂರು ದಿನ್ನೆಯಲ್ಲಿ ಸಿಮೆಂಟ್ ಹಾಲೋ ಬ್ಲಾಕ್ ಇಟ್ಟಿಗೆ ಕಾರ್ಖಾನೆ ನಡೆಸುತ್ತಾ ಬದುಕು ಸಾಗಿಸುತ್ತಿದ್ದ.ಆತನ ಶವ ತಮಿಳುನಾಡು ತಳಿ ಪೊಲೀಸರಿಗೆ ಕಾಡಿನಲ್ಲಿ ಅರೆ ಸುಟ್ಟ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿರುವ ಕುರಿತು ಮಾಹಿತಿ ದೊರಕಿದ್ದರಿಂದ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.
ಬೈಕ್‌ನಲ್ಲಿ ಬಾಬು ಹೋಗುವ ವೇಳೆ ಕಾರಿನಲ್ಲಿ ಹಿಂಬದಿಯಿಂದ ಡಿಕ್ಕಿ ಹೊಡೆದು ಕೊಲೆ ಮಾಡಿ ತಮಿಳುನಾಡಿನ ಕಾಡಿನಲ್ಲಿ ತಂದು ಸಾಕ್ಷ ನಾಶ ಮಾಡಿ ಸುಳಿವಿಲ್ಲದಂತೆ ಮಾಡಲು ಸುಟ್ಟಿರುವ ಶಂಕೆ ಶಂಕೆ ವ್ಯಕ್ತವಾಗಿದೆ.
ಬಾಬು ಸಹಚರ ವಲಯದಲ್ಲಿ ಬೆಂಗಳೂರಿನ ಶಾಸಕರೊಬ್ಬರ ಕೈವಾಡ ಕೊಲೆಯ ಹಿಂದಿದೆ ಎಂಬ ಗುಸು-ಗುಸು ಸಹ ಕೇಳಿ ಬರುತ್ತಿದೆ. ಕೊಲೆಯನ್ನು ತಮಿಳುನಾಡು ತಳಿ ಪೊಲೀಸರು ಪ್ರಕರಣ ಬೇಧಿಸಿ ಸತ್ಯ ಹೊರಹಾಕಬೇಕಿದೆ.