ತ. ನಾಡಿನಲ್ಲಿ ಡಿಎಂಕೆ ಅಲೆ ಎರಡೆಲೆ ಧೂಳೀಪಟ

ಚೆನ್ನೈ, ಮೇ.೨- ತೀವ್ರ ಜಿದ್ದಾಜಿದ್ದಿ ನಿಂದ ಕೂಡಿದ್ದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ೧೦ ವರ್ಷಗಳ ಡಿಎಂಕೆ ಪಕ್ಷದ ” ಸೂರ್ಯ” ಉದಯಿಸಿದ್ದು, ಎಐಎಡಿಎಂಕೆಯ “ಎರಡು ಎಲೆ” ತರಗೆಲೆಯಂತೆ ಆಡಳಿತ ವಿರೋದಿ ಅಲೆಗೆ ಧೂಳೀಪಟವಾಗಿದೆ.

ಎಡಪ್ಪಾಡಿ ಪಳನಿಸ್ವಾಮಿ – ಒ ಪನ್ನೀರ ಸೆಲ್ವಂ ಜೋಡೆತ್ತಿನ ನೇತೃತ್ವದ ಆಡಳಿತರೂಢ ಎಐಎಡಿಎಂಕೆ ಪಕ್ಷ ನಿರೀಕ್ಷೆಯಂತೆ ಅಧಿಕಾರ ಕಳೆದುಕೊಳ್ಳುವುದು ಖಚಿತವಾಗಿದೆ. ಮೂರನೇ ಬಾರಿಗೆ ಅಧಿಕಾರ ಹಿಡಿಯಬೇಕು ಎನ್ನುವ ಕನಸು ನುಚ್ಚುನೂರಾಗಿದೆ.ಈ ಮೂಲಕ ಹಿಂಬದಿಯಿಂದ ಅಧಿಕಾರ ಚಲಾಯಿಸಬೇಕು ಎನ್ನುವ ಬಿಜೆಪಿ ಕನಸು ಕೂಡ ಛಿದ್ರವಾಗಿದೆ

ಎಂ.ಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷ ಈ ಬಾರಿ ತಮಿಳುನಾಡಿನಲ್ಲಿ ಅಧಿಕಾರ ಹಿಡಿಯುವತ್ತ ದಾಪುಗಾಲು ಹಾಕಿದೆ. ಇದೇ ಮೊದಲ ಬಾರಿಗೆ ಡಿಎಂಕೆಯ ಎಂ.ಕೆ ಸ್ಟಾಲಿನ್ ಅವರು ಮುಖ್ಯಮಂತ್ರಿ ಗದ್ದುಗೆ ಏರಲು ವೇದಿಕೆ ಸಿದ್ಧವಾಗಿದೆ

೨೩೪ ವಿಧಾನಸಭಾ ಕ್ಷೇತ್ರಗಳ ಪೈಕಿ ಅಧಿಕಾರ ಹಿಡಿಯಲು ೧೧೮ ಸಂಖ್ಯೆಗಳ ಅಗತ್ಯವಿದ್ದು ಎಂ.ಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ನೇತೃತ್ವದ ಮಿತ್ರ ಕೂಪಕ್ಷ ಮ್ಯಾಜಿಕ್ ಸಂಖ್ಯೆ ದಾಟಿ ಮುನ್ನಡೆ ಗಳಿಸಿದೆ.
ಡಿಎಂಕೆ ಮೈತ್ರಿಕೂಟ ೧೩೪ ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು ೨೦೧೬ರ ವಿಧಾನಸಭಾ ಚುನಾವಣೆ ಫಲಿತಾಂಶಕ್ಕಿಂತ ೩೫ ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುಂದಿದೆ.

ಆಡಳಿತರೂಢ ಎಐಎಡಿಎಂಕೆ ಪಕ್ಷ ಕೇವಲ ೧೦೦ ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು ಕಳೆದ ಬಾರಿಯ ವಿಧಾನಸಭಾ ಫಲಿತಾಂಶಕ್ಕಿಂತ ೩೫ ಹೆಚ್ಚು ಸ್ಥಾನಗಳಲ್ಲಿ ಹಿನ್ನೆಡೆ ಹೊಂದಿದೆ.

ದ್ರಾವಿಡ ಪಕ್ಷಕ್ಕೆ ಅಧಿಕಾರ ಸಿಗಬಾರದು ಎನ್ನುವ ತಂತ್ರ-ಪ್ರತಿತಂತ್ರ ರೂಪಿಸಿದ ಬಿಜೆಪಿಯ ಕೆಲಸ ಯಾವುದೇ ಕಾರ್ಯಯೋಜನೆಗೆ ಬಂದಿಲ್ಲ.

ಚಿತ್ರನಟಿ ಹಾಗೂ ಕಾಂಗ್ರೆಸ್ ನಾಯಕಿ ಖುಷ್ಬು ಹಾಗೂ ಕರ್ನಾಟಕದಲ್ಲಿ ದಕ್ಷ ಪೊಲೀಸ್ ಅಧಿಕಾರಿಯಾಗಿ ಹೆಸರು ಮಾಡಿದ್ದ ಅಣ್ಣಾ ಮಲೈ ಅವರನ್ನು ಬಿಜೆಪಿ ತನ್ನ ಕಡೆ ಸೆಳೆದು ,ಟಿಕೆಟ್ ನೀಡುವ ಮೂಲಕ ದ್ರಾವಿಡ ನಾಡಿನಲ್ಲಿ ಕಮಲ ಅರಳಿಸಲು ಮುಂದಾಗಿತ್ತು.. ಅಧಿಕಾರದ ಆಸೆಗಾಗಿ ಬಿಜೆಪಿ ತೆರಳಿದ ಮಂದಿಗೆ ನಿರಾಸೆಯಾಗಿದೆ

ಆಡಳಿತರೂಢ ಎಐಎಡಿಎಂಕೆ ಜೊತೆಗೂಡಿ ಪ್ರತಿಪಕ್ಷ ಡಿಎಂಕೆ ನೇತೃತ್ವದ ಮೈತ್ರಿಕೂಟವನ್ನು ಬಗ್ಗುಬಡಿಯಲು ಇನ್ನಿಲ್ಲದ ಹರಸಾಹಸ ನಡೆಸಿತ್ತು ಚುನಾವಣೆಗೆ ಮುನ್ನ ಪ್ರತಿ ಪಕ್ಷಗಳ ಅಭ್ಯರ್ಥಿಗಳ ಮೇಲೆ ಆದಾಯ ತೆರಿಗೆ ದಾಳಿ ನಡೆಸಲಾಗಿತ್ತು. ಬಿಜೆಪಿಯ ತಂತ್ರಗಾರಿಕೆ ಇಲ್ಲಿ ಯಾವುದೇ ಉಪಯೋಗಕ್ಕೆ ಬಂದಿಲ್ಲ.

ಚಿತ್ರನಟ ಕಮಲಹಾಸನ್ ನೇತೃತ್ವದ ಎಂಎನ್ ಎಂ ಪಕ್ಷ ಒಂದು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ.

ಕಳೆದ ಎರಡು ಅವಧಿಯಿಂದ ಅಧಿಕಾರದಲ್ಲಿದ್ದ ಎಐಎಡಿಎಂಕೆ ಪಕ್ಷ ಸತತ ಮೂರನೇ ಬಾರಿಗೆ ಅಧಿಕಾರ ಹಿಡಿಯಬೇಕು ಎನ್ನುವ ಪಕ್ಷದ ಕಾರ್ಯತಂತ್ರಕ್ಕೆ ತಮಿಳುನಾಡಿನ ಮತದಾರ ಸೂಕ್ತ ತಿರುಗೇಟು ನೀಡಿದ ಮೈತ್ರಿಕೂಟವನ್ನು ಅಧಿಕಾರಕ್ಕೆ ತರುವುದು ಬಹುತೇಕ ಖಚಿತವಾಗಿದೆ.

ಆಡಳಿತ ವಿರೋಧಿ ಅಲೆ ಸೇರಿದಂತೆ ವಿವಿಧ ವಿಷಯಗಳು ಎಐಎಡಿಎಂಕೆ ಪಕ್ಷವನ್ನು ಅಧಿಕಾರದಿಂದ ದೂರವಿಡಲು ನೆರವಾಗಿದೆ

ಪುದುಚೆರಿಯಲ್ಲಿ ಎನ್ ಡಿ ಎ

೩೦ ವಿಧಾನಸಭಾ ಕ್ಷೇತ್ರ ಗಳಿರುವ ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ಎಂದು ಅಧಿಕಾರಿಗಳು ಖಚಿತವಾಗಿದೆ. ಎನ್ ಆರ್ ಸಿ ನಾರಾಯಣಸ್ವಾಮಿ ೧೧ ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಮುನ್ನೆಡೆ ಕಾಯ್ದುಕೊಂಡಿದೆ