ತ.ನಾಡಿಗೆ ನೀರು ವಿರೋಧಿಸಿ ಪ್ರತಿಭಟನೆ

ಬೆಂಗಳೂರು.ಸೆ೨೨: ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಇಂದು ಕುರುಬರಹಳ್ಳಿ ಚಾಲುಕ್ಯ ವೃತ್ತದಲ್ಲಿ ಚಾಲುಕ್ಯ ಡಾ, ರಾಜಕುಮಾರ ಸಂಘ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಜೊತೆಗೂಡಿ ಇಂದು ವೃತ್ತದಲ್ಲಿ ಕಾವೇರಿ ನದಿ ನೀರು ಪ್ರಾಧಿಕಾರದ ತೀರ್ಮಾನದ ವಿರುದ್ಧ ಪ್ರತಿಭಟನೆ ನಡೆಸಿ ಪ್ರತಿಕೃತಿ ದಹನ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವರು ಹಾಗೂ ಸ್ಥಳೀಯ ಶಾಸಕರಾದ ಕೆ ಗೋಪಾಲಯ್ಯ ರವರು ಪಾಲ್ಗೊಂಡು ಸುಪ್ರೀಂ ಕೋರ್ಟ್ ತೀರ್ಪು ಕರ್ನಾಟಕಕ್ಕೆ ಮತ್ತೊಮ್ಮೆ ಹಿನ್ನೆಡೆ ಉಂಟಾಗಲು ಕಾರಣವಾಗಿದೆ.ಇದನ್ನ ಘನ ನ್ಯಾಯಾಲಯ ಮತ್ತೊಮ್ಮೆ ವಾಸ್ತವಾಂಶ ಪರಿಶೀಲನೆ ಮಾಡ್ಬೇಕು ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಜೊತೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಮರ್ಥ ರೀತಿಯಲ್ಲಿ ವಾದ ಮಂಡಿಸಬೇಕು ಎಂದು ಗೋಪಾಲಯ್ಯ ಹೇಳಿದರು.
ಈ ಪ್ರತಿಭಟನೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ, ಸ್ಥಳೀಯ ಮುಖಂಡರುಗಳಾದ ಎನ್ ಜಯರಾಂ , ವೆಂಕಟೇಶ್ ಮೂರ್ತಿ, ರೈಲ್ವೇ ನಾರಾಯಣ, ಶಿವಾನಂದ್ ಮೂರ್ತಿ, ರಘು ನಾಗರಾಜ್, ರಕ್ಷಣಾ ವೇದಿಕೆ ಮುಖಂಡರಾದ ಚಾಲುಕ್ಯ ರಮೇಶ, ಪುರುಷೋತ್ತಮ್, ಪುನೀತ್,
ಸೇರಿದಂತೆ ಹಲವು ಗಣ್ಯರು ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು ಕಾರ್ಯಕರ್ತರು