ತ.ನಾಡಿಗೆ ಕಾವೇರಿ ನೀರು ಕಣ್ಣಿಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ

ಮಂಡ್ಯ, ಆ.೨೮-ತಮಿಳುನಾಡಿಗೆ ಕಾವೇರಿ ನೀರು ಬಿಡಲು ಆದೇಶ ಖಂಡಿಸಿ ಬೃಹತ್ ಹೋರಾಟ ಕೈಗೊಂಡಿರುವ ರೈತ ನಾಯಕರು, ಕೆಆರ್‌ಎಸ್ ಡ್ಯಾಮ್ ಬಳಿ ಕಣ್ಣಿಗೆ ಕಪ್ಪು ಪಟ್ಟಿ ಧರಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ಮಂಡ್ಯದ ಕೆಆರ್‌ಎಸ್ ಜಲಾಶಯದ ಬಳಿ ಜಮಾಯಿಸಿದ ಭೂಮಿತಾಯಿ ಹೋರಾಟ ಸಮಿತಿ ಸದಸ್ಯರು, ರೈತ ನಾಯಕರು, ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಘೋಷಣೆ ಕೂಗಿದರು.
ಸರ್ಕಾರ ರೈತರೊಂದಿಗೆ ಚೆಲ್ಲಾಟ ಆಡುತ್ತಿದೆ. ಈಗಾಗಲೇ ತಮಿಳುನಾಡಿಗೆ ಒಂದುವರೆ ಲಕ್ಷ ಕ್ಯೂಸೆಕ್ ನೀರನ್ನು ಡ್ಯಾಮ್ ನಿಂದ ಹರಿ ಬಿಡಲಾಗಿದೆ. ಹೀಗಾದರೆ ನಮಗಿಲ್ಲಿ ಕುಡಿಯುವುದಕ್ಕೆ ನೀರಿಲ್ಲ ಆದರೆ ತಮಿಳುನಾಡಿಗೆ ಬೆಳೆ ಬೆಳೆಯಲು ನೀರು ಬಿಡುತ್ತೀರಾ ಎಂದು ರೈತರು ಖಾರವಾಗಿ ಪ್ರಶ್ನೆಸಿದರು.ಈ ವೇಳೆ ಮಾತನಾಡಿದ ಭೂಮಿತಾಯಿ ಹೋರಾಟ ಸಮಿತಿಯ ಅಧ್ಯಕ್ಷ ಕೃಷ್ಣೇಗೌಡ, ಈಗಾಗಲೇ ಹಲವಾರು ಬಾರಿ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ ಇದೀಗ ಮತ್ತೆ ಕಾವೇರಿ ನಿರ್ವಹಣಾ ಸಮಿತಿಯು ದಿನವೊಂದಕ್ಕೆ ೫,೦೦೦ ಕ್ಯೂ ಸೆಟ್ ನೀರಿನಂತೆ ಹದಿನೈದು ದಿನಗಳವರೆಗೆ ನೀರು ಬಿಡುವಂತೆ ಆದೇಶಿಸಿದೆ ಇದನ್ನು ನಾವು ಖಂಡಿಸುತ್ತೇವೆ ಎಮದರು.
ನಗರ ಪ್ರದೇಶಗಳಲ್ಲಿ ಸರಿಯಾಗಿ ಕುಡಿಯೋದಕ್ಕೆ ನೀರು ಸಿಗುತ್ತಿಲ್ಲ ಇನ್ನೂ ಗ್ರಾಮೀಣ ಭಾಗದಲ್ಲಿ ನಮ್ಮ ಪರಿಸ್ಥಿತಿ ಹೇಗಾಗಿರಬೇಡ ನಮಗೆ ಕುಡಿಯೋಕೆ ಇಲ್ಲಿ ನೀರಿಲ್ಲ ಇನ್ನೂ ತಮಿಳುನಾಡಿಗೆ ಬೆಳೆ ಬೆಳೆಯುವುದಕ್ಕೆ ನೀರು ಬಿಡಲು ಇವರು ಹೇಗೆ ಆದೇಶ ನೀಡಿದರು ಇದೇ ರೀತಿ ಮುಂದುವರಿದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.