ತ್ರೋಬಾಲ್ ಕಬಡ್ಡಿ ಆಟಗಳಲ್ಲಿ ಮಕ್ಕಳಾದ ಶಿಕ್ಷಕರು.


ಸಂಜೆವಾಣಿ ವಾರ್ತೆ
ಸಿರಿಗೇರಿ ಸೆ.9. ಗ್ರಾಮದಲ್ಲಿ ಇಂದು ವಿವಿಧ ಸಂಘಟನೆಗಳ ಒಕ್ಕೂಟದಿಂದ ಆಯೋಜಿಸಲಾಗಿದ್ದ ಶಿಕ್ಷಕರಿಗಾಗಿ ಕಬಡ್ಡಿ ಮತ್ತು ತ್ರೋಬಾಲ್ ಆಟಗಳಲ್ಲಿ ಶಿಕ್ಷಕರು ಆಟವಾಡಿ ಮಕ್ಕಳಂತೆ ನಲಿದರು.  ಎಂ. ಸೂಗುರು ಮತ್ತು ಸಿರಿಗೇರಿ ಎರಡು ಕ್ಲಸ್ಟರ್ ಗಳ ಶಿಕ್ಷಕರನ್ನು ಒಳಗೊಂಡು ಶಿಕ್ಷಕರ ದಿನಾಚರಣೆ ಅಂಗವಾಗಿ ಆಯೋಜನೆ ಮಾಡಿದ್ದ  ಆಟಗಳಲ್ಲಿ ಶಿಕ್ಷಕರು ಮಕ್ಕಳಂತೆ ಸಂಪೂರ್ಣ ತೊಡಗಿಸಿಕೊಂಡು ಸೋಲು ಗೆಲುವಿನ ಹಮ್ಮು ಬಿಮ್ಮು ಇಲ್ಲದೆ ಆಟವಾಡಿ ಮನೋರಂಜನೆ ಪಡೆದರು. ಎರಡು ಗ್ರಾಮಗಳ ಗ್ರಾಮಸ್ಥರು ಉಭಯ ತಂಡಗಳನ್ನು ಪ್ರೇರೇಪಿಸಿ ಶಿಕ್ಷಕರಿಗೆ ಹೊರದುಂಬಿಸುತ್ತಿದ್ದು ಕಂಡು ಬಂತು.  ಶಿಕ್ಷಕರು ಮಕ್ಕಳಂತೆ ಆಟವಾಡಿ ಸಂಭ್ರಮಿಸಿದ್ದು ಕಂಡು ಬಂತು.