ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳ ಸ್ಮರಣೆ

ದಾವಣಗೆರೆ.ಏ.೧; ನಗರದಆರ್ ಟಿ ಓ ಕಚೇರಿಯ ಎದುರಿನಲ್ಲಿರುವ ಶ್ರೀ ಸಿದ್ದಗಂಗಾ ಸ್ವಾಮೀಜಿ ಸರ್ಕಲ್ ನಲ್ಲಿ ಶ್ರೀ ಸಿದ್ದಗಂಗಾ ಸ್ವಾಮೀಜಿಗಳ  4ನೇ ವರ್ಷದ ಪುಣ್ಯಸ್ಮರಣೆ ಹಮ್ಮಿಕೊಳ್ಳಲಾಗಿತ್ತು.ಈ ವೇಳೆ ಹಿಂದೂ ಜನ ಜಾಗೃತಿ ಸೇನಾ ಸಮಿತಿಯ ಮುಖಂಡ ಚೇತನ್ ಮಾತನಾಡಿ ತ್ರಿವಿಧ ದಾಸೋಹಿ,ನಡೆದಾಡುವ ದೇವರು, ಅನಾಥ ಮಕ್ಕಳಿಗೆ, ಬಡ ಮಕ್ಕಳಿಗೆ ವಿದ್ಯಾದಾನ ಮಾಡಿದ ಮಹಾನ್ ಶ್ರೀಗಳು ಸಿದ್ದಗಂಗಾ ಸ್ವಾಮೀಜಿ.ಶತಮಾನ ಕಂಡ ಶ್ರೇಷ್ಠ ಸಂತ ಸಿದ್ದಗಂಗೆಯ ಲಿಂಗೈಕ್ಯ ಪರಮಪೂಜ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ‌116 ನೇ ಜನ್ಮಸ್ಮರಣೆಯಂದು ಅವರನ್ನು ನೆನೆಯುವುದು ಪುಣ್ಯದ ಕೆಲಸ ಎಂದರು. ಶ್ರೀಗಳು ಕಾಯಕ, ಶಿಕ್ಷಣ ಹಾಗೂ ದಾಸೋಹಕ್ಕೆ ಮಹತ್ವ ನೀಡಿ, ಸಮಾಜವನ್ನು ಪರಿವರ್ತಿಸುವ ಹಾದಿಯಲ್ಲಿ  ರೂಪಿಸಿರುವ ಪರಂಪರೆ ಶತಶತಮಾನಗಳವರೆಗೆ ಮುಂದುವರೆಬೇಕಿದೆ ಎಂದರು.ಈ ವೇಳೆಶಂಕರ್, ಶಿವಾನಂದ, ರಂಗಸ್ವಾಮಿ, ಮಲ್ಲಿಕಾರ್ಜುನ್ ,ಮಂಜಣ್ಣ, ಶಿವಣ್ಣ, ಶಿವಪ್ರಕಾಶ್, ರಾಜಣ್ಣ ಮತ್ತಿತರರು ಭಾಗವಹಿಸಿದ್ದರು