ತ್ರಿವಿಧ ದಾಸೋಹಿ ಲಿಂಗೈಕ್ಯ ಡಾ.ಶಿವಕುಮಾರ ಶ್ರೀಗಳ 114ನೇ ಜನ್ಮದಿನಾಚರಣೆ

ವಾಡಿ: ಎ.2:ಅನ್ನ ಅಕ್ಷರ, ಜ್ಞಾನದ ಮುಲಕ ಸಹಾಯ ಬೇಡಿ ಬಂದ ಬಡ ಮಕ್ಕಳ ಬಾಳನ್ನು ಬೆಳಗಿ ಉದ್ದರಿಸಿದವರು ಲಿಂ. ಡಾ. ಶಿವಕುಮಾರ ಸ್ವಾಮೀಜಿ ಆಗಿದ್ದರು ಎಂದು ರಾವೂರ ಮಠದ ಉತ್ತರಾಧಿಕಾರಿ ಸಿದ್ದಲಿಂಗ ದೇವರು ಹೇಳಿದರು.

ಸಮೀಪದ ರಾವೂರ ಗ್ರಾಮದಲ್ಲಿ ಕರ್ನಾಟಕ ವಚನಸಾಹಿತ್ಯ ಅಕಾಡೆಮಿಯಿಂದ ಚಿತ್ತಾಪೂರ ತಾಲ್ಲೂಕ ಘಟಕದ ವತಿಯಿಂದ ನಡೆದಾಡುವ ದೇವರು ಲಿಂಗೈಕ್ಯ ಡಾ: ಶಿವಕುಮಾರ ಮಹಾಸ್ವಾಮಿಗಳ 114 ನೇ ಜನ್ಮದಿನದ ಅಂಗವಾಗಿ ರಾವೂರ ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದಲ್ಲಿ ಹಮ್ಮಿಕೊಂಡಿದ್ದ ಸಸಿನೆಡುವ, ಬಡಮಕ್ಕಳಿಗೆ ನೋಟಬುಕ್ ವಿತರಣೆ ಹಾಗೂ ಜಾನಪದ ಕಲಾವಿದರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಶೈಶಾವಸ್ಥೆಯಲ್ಲಿದ್ದ ಸಿದ್ಧಗಂಗಾ ಮಠವನ್ನು ಉತ್ತರೋತ್ತರವಾಗಿ ಬೆಳೆಸಿ ನಾಡು ಕಂಡ ಅಪರೂಪದ ಮಠನನ್ನಾಗಿಸಿದರು. 12 ನೇ ಶತಮಾನದ ಯುಗಪುರುಷ ಕ್ರಾಂತಿಕಾರಿ ಬಸವಣ್ಣನವರ ಕಾಯಕವೇ ಕೈಲಾಸ ಮತ್ತು ನಿತ್ಯ ದಾಸೋಹದ ಕೈಂಕರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಶ್ರೀಗಳ ಬದುಕೆ ನಮ್ಮಂತ ಸ್ವಾಮಿಗಳಾಗುವಂತವರಿಗೆ ಮಾದರಿಯಾಗಿ ಕಾಣುತ್ತಾರೆ.

ಯಾರೂ ಸ್ವಾರ್ಥಕ್ಕಾಗಿ ಬದುಕುವರೊ ಅವರು ಮಣ್ಣಲ್ಲಿ ಮಣ್ಣಾಗಿ ಹೋಗುವರು ಯಾರೂ ಸಮಜಕ್ಕಾಗಿ ಸರ್ವಸ್ವವನ್ನು ತ್ಯಾಗಮಾಡುವರೊ ಅವರು ಮಾತ್ರ ಎಲ್ಲರ ಮನಸ್ಸಿನಲ್ಲಿ ಅಜರಾಮರವಾಗಿ ಉಳಿಯುತ್ತಾರೆ. ಶಿವಕುಮಾರ ಶ್ರೀಗಳು ತಮಗಾಗಿ ಯಾವತ್ತು ಬದುಕಲಿಲ್ಲ ತಮ್ಮವರಿಗಾಗಿ ಬದುಕಿದರು ಎಂದು ಹೇಳಿದರು.

ವೇದಿಕೆ ಮೇಲೆ ಮುಖಂಡರಾದ ಅಣ್ಣಾರಾವ ಬಾಳಿ, ಗುರುನಾಥ ಗುದಗಲ್, ತಿಪ್ಪಣ್ಣ ವಗ್ಗರ, ಯುನುಸ್ ಪ್ಯಾರೆ,ಯೋಜನಾಧಿಕಾರಿ ಕೃಷ್ಣಮೂರ್ತಿ, ಶಿಕ್ಷಕ ಸಿದ್ದಲಿಂಗ ಬಾಳಿ ಉಪಸ್ಥಿತರಿದ್ದರು. ಜಾನಪದ ಕಲವಿದರಾದ ವೀರಭದ್ರಯ್ಯಸ್ವಾಮಿ ಸೂಲಹಳ್ಳಿ, ಸಾಬಯ್ಯ ಕಲಾಲ, ಸಿದ್ದಣ್ಣ ಜಡಿ, ಶರಣಮ್ಮ ಬಂದರವಾಡ, ಶಿವಲೀಲಾ ತಳವಾರ, ಚನ್ನಮ್ಮ ಫರತಾಬಾದ,ರತ್ನಮ್ಮ ಸಂಕನೂರ, ಹಣಮಂತ ಯರಗಲ್,ಮಲ್ಲಿಕಾರ್ಜುನ ಹಳ್ಳಿ, ಚನ್ನಬಸ್ಸು ನಡುವಿನಕೇರಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಈಶ್ವರ ದೊಡ್ಡಮನಿ, ರವಿ ನಡುವಿನಕೇರಿ, ಡಾ.ಮಲ್ಲಿನಾಥ ತಳವಾರ, ಮಹೇಶ ಬಾಳಿ, ಮನೋಹರ ಪಂಚಾಳ, ನಾಗೇಸ ಸಜ್ಜನ, ಶರಣು ಜ್ಯೋತಿ, ಶಾಂತು ಬಾಳಿ, ಅಶೋಕ ಗೋಳಾ, ದತ್ತು ಗುತ್ತೇದಾರ, ಬಸವರಾಜ ಕರದಳ್ಳಿ, ಸಿದ್ದು ಪಾಟೀಲ, ವಿರೇಶ ದಂಬತ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.