ತ್ರಿವಿಧ ದಾಸೋಹದಿಂದ ಭಕ್ತರ ಕಷ್ಟಗಳಿಗೆ ನೆರವಾದ ಹಾಲಕೆರೆ ಶ್ರೀ


ದಾವಣಗೆರೆ ಡಿ,6;  ಹಾಲಕೆರೆ ಸಂಸ್ಥಾನ ಮಠದ ಜಗದ್ಗುರು ಡಾ.ಅಭಿನವ ಅನ್ನದಾನ ಮಹಾಸ್ವಾಮಿಗಳವರು ತ್ರಿವಿಧ ದಾಸೋಹದ ಮೂಲಕ ಭಕ್ತರ ಕಷ್ಟಗಳಿಗೆ ನೆರವಾದರು. ಗುರು ವಿರಕ್ತ ಎಂಬ ಭೇದ ಬೇಡ ಎಂಬ ನಿಲುವು ಹೊಂದಿದ್ದರು. ಅವರು ತ್ಯಾಗ ಜೀವನದ ಮೂಲಕ ಎಲ್ಲರ ಹೃದಯದಲ್ಲಿ ನೆಲೆಸಿದ್ದಾರೆ. ಒಂದು ವರ್ಷಗಳ ಕಾಲ ಬಸವ ಪುರಾಣವನ್ನು ಆರಂಭಿಸಿದವರು, ಶ್ರೀಗಳವರು ಒಂದೇ ಕಡೆ ಪ್ರವಚನ ಇರಬಾರದು ಎಂಬ ಕಾರಣಕ್ಕೆ ಪ್ರತಿ ದಿನ ಒಂದೊಂದು ಊರಿನಲ್ಲಿ ಪ್ರವಚನ ನಡೆಸಲು ನಿರ್ಧರಿಸಿ ಸಂಚಾರ ಬಸವ ಪುರಾಣವನ್ನು ಆರಂಭಿಸಿದರು. ಬಸವಾದಿ ಶರಣರ ತತ್ವಗಳನ್ನು ಇಟ್ಟುಕೊಂಡು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದರು  ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ನುಡಿ ನಮನ ಸಲ್ಲಿಸಿದರು.ಅನ್ನದಾನೀಶ್ವರ ಸಾರ್ವಜನಿಕ ಸೇವಾ ಟ್ರಸ್ಟ್ನಿಂದ ದೇವರಾಜ ಅರಸು ಬಡಾವಣೆ ಬಿ ಬ್ಲಾಕ್‌ನಲ್ಲಿರುವ ಅನ್ನದಾನೀಶ್ವರ ಶಾಖಾ ಮಠದ ಆವರಣದಲ್ಲಿ ಲಿಂಗೈಕ್ಯ ಹಿರಿಯ ಜಗದ್ಗುರು ಡಾ.ಅಭಿನವ ಅನ್ನದಾನ ಸ್ವಾಮಿಗಳವರ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಆವರಗೊಳ್ಳ ಪುರವರ್ಗ ಮಠದ ಶ್ರೀ.ಷ.ಬ್ರ.ಓಂಕಾರ ಶಿವಾಚಾರ್ಯ ಮಹಾಸ್ವಾಮೀಜಿಗಳವರು ಆರ್ಶಿವಚನ ನೀಡುತ್ತಾ ಗುರು-ವಿರಕ್ತ ಪರಂಪರೆಯನ್ನು ವೀರಶೈವ ಲಿಂಗಾಯತ ಸಮಾಜದ ಎರಡು ಕಣ್ಣುಗಳು ಎಂದು ಅನ್ನದಾನೀಶ್ವರ ಸ್ವಾಮೀಜಿ ಕಂಡಿದ್ದರು ಎಂದು ನುಡಿದರು.ಒಂದು ಮಹಾಮಠದ ಜತೆಗೆ ೩೦ ಶಾಖಾ ಮಠಗಳನ್ನು ಸ್ಥಾಪಿಸುವ ಮೂಲಕ ವಿದ್ಯೆ, ಅನ್ನಪ್ರಸಾದ ನೀಡಿದವರು. ಹಾನಗಲ್ ಶಿವಯೋಗ ಮಂದಿರದ ಮೂಲಕ ಅನೇಕ ಸ್ವಾಮೀಜಿಗಳನ್ನು ನೀಡಿದವರು. ಧ್ವನಿ ಇಲ್ಲದವರಿಗೆ ಧ್ವನಿಯಾದವರು. ರೈತರಿಗೆ ಪುನರ್ ಚೈತನ್ಯ ನೀಡಲು ಶ್ರಮಿಸಿದವರು. ಅವರ ಬದುಕೇ ಚೈತನ್ಯದ ಬೆಳಕು ಎಂದು ಬಣ್ಣಿಸಿದರು.ಶಿಕ್ಷಕ ಮಹಾಂತೇಶ್ ಶಾಸ್ತಿç ಉಪನ್ಯಾಸ ನೀಡುತ್ತಾ ಹಾಲಕೆರೆ ಪರಂಪರೆಯನ್ನು ವಿವರಿಸಿ ಡಾ||ಅಭಿನವ ಅನ್ನದಾನ ಮಹಾಸ್ವಾಮಿಗಳಂತವರನ್ನು ನಾವು ಮುಂದೆ ಎಂದಿಗೂ ಕಾಣಲಾರೆವು ಎಂದರು.ಆರAಭದಲ್ಲಿ ಮಠದ ಅರ್ಚಕರಿಂದ ವೇದಘೋಷ, ನಂತರ ಶ್ರೀಗುರು ಪಂಚಾಕ್ಷರಿ ಸಂಗೀತ ವಿದ್ಯಾಲಯದ ಟಿ.ಎಚ್.ಎಂ. ಶಿವಕುಮಾರಸ್ವಾಮಿವರು ಪ್ರಾರ್ಥಿಸಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ನಂತರ ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೀರಪÀ್ಪ.ಎಂ ಭಾವಿ ಸ್ವಾಗತಿಸಿದರು. ಶಿಕ್ಷಕಿಯರಾದ ಶ್ರೀಮತಿ ತನುಜಾ.ವಿ.ಬಿ, ಶ್ರೀಮತಿ ಸುಜಾತಾ  ಕಾರ್ಯಕ್ರಮ ನಿರೂಪಿಸಿದರು. ಅನ್ನದಾನೀಶ್ವರ ಶಾಖಾ ಮಠದ ಉಪಾಧ್ಯಕ್ಷರಾದ ಡಾ. ಎಚ್.ಬಿ. ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು.ವೇದಿಕೆ ಮೇಲೆ ಉಪಾಧ್ಯಕ್ಷ ಅಮರಯ್ಯ ಗುರುವಿನ ಮಠ,ಕರ‍್ಯದರ್ಶಿ ಎನ್. ಅಡಿವೆಪ್ಪ, ದಾವಣಗೆರೆ ಲಯನ್ಸ ಕ್ಲಬ್ ಅಧ್ಯಕ್ಷ ಓಂಕಾರಪ್ಪ, ಸ್ಪೂರ್ತಿ ಸೇವಾಸಂಘದ ಅಧ್ಯಕ್ಷ ಬಸವರಾಜ್, ನಾಗರಾಜ್ ಎರಗಲ್,ಸ್ಮಾರ್ಟ ಸಿಟಿ ಎಂ.ಡಿ.ರವೀAದ್ರ ಮಲ್ಲಾಪುರ್, ಹರಿಹರ ನಗರ ಸಭೆ ಇಂಜಿನಿಯರ್ ಎಸ್.ಎಸ್.ಬಿರಾದಾರ್ ಉಪಸ್ಥಿತರಿದ್ದರು.