
ರಾಯಚೂರು,ಏ.೧೬- ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಪಕ್ಷ ಕಡೆಗಣಿಸುತ್ತಲೇ ಬಂದಿದೆ ಎಂಬ ತ್ರಿವಿಕ್ರಮ ಜೋಶಿ ಅವರ ಹೇಳಿಕೆ ಖಂಡನೀಯ ಕೂಡಲೇ ಕ್ಷಮೆ ಕೇಳಬೇಕು ಎಂದು ಮಾಜಿ ನಗರಸಭೆ ಸದಸ್ಯ ಡಿಸಿಸಿ ಸಹ ಕಾರ್ಯದರ್ಶಿ ಕೆ.ಈ.ಕುಮಾರ ಆಗ್ರಹಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಚುನಾವಣೆ ವೇಳೆಯಲ್ಲಿ ತ್ರಿವಿಕ್ರಮ ಜೋಶಿ ಅವರು ಕಾಂಗ್ರೆಸ್ ಪಕ್ಷದ ಹಾಗೂ ಅಂಬೇಡ್ಕರ್ ಅವರ ಬಗ್ಗೆ ಸಾರ್ವಜನಿಕರಿಗೆ ಇಲ್ಲಸಲ್ಲದ ತಪ್ಪು ಮಾಹಿತಿ ನೀಡುತ್ತಿರುವುದು ಖಂಡನೀಯ.ಸಂಸದ ಅನಂತಕುಮಾರ ಹೆಗ್ಡೆ ಅವರು ಡಾ. ಬಿ.ಆರ್.ಅಂಬೇಡ್ಕರ್ ರವರ ಬರೆದ ಸಂವಿಧಾನವನ್ನು ಬದಲಾಯಿಸಬೇಕು ಹಾಗೂ ಸಿ.ಟಿ ರವಿ ಅವರು ಸಂವಿಧಾನವನ್ನು ಅಂಗೀಕರಿಸುವಾಗ ನಾವುಗಳು ಇಲ್ಲ.ಒಂದು ವೇಳೆ ನಾವು ಇದ್ದಿದ್ದರೆ ಅಂಬೇಡ್ಕರ್ ಬರೆದ ಸಂವಿಧಾನವನ್ನು ಒಪ್ಪುತ್ತಿರಲಿಲ್ಲವೆಂದು ಹೇಳುವ ಮೂಲಕ ಭಾರತ ಸಂವಿಧಾನವನ್ನು ಅವಮಾನ ಮಾಡಿದ್ದಾರೆ.ಡಾ. ಬಿ.ಆರ್.ಅಂಬೇಡ್ಕರ್ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿ ಪಕ್ಷಕ್ಕೆ ಇಲ್ಲ.ತ್ರಿವಿಕ್ರಮ ಜೋಶಿಯವರಿಗೆ ನೈತಿಕತೆ ಇದ್ದರೆ ನೇರ ಚರ್ಚೆಗೆ ಬರಬೇಕು ಎಂದು ಆಹ್ವಾನಿಸಿದರು.
ಭಾರತದ ಸಂವಿಧಾನ ಬಗ್ಗೆ ಗೌರವವನ್ನು ತೋರಿಸುವ ಪಕ್ಷ ಕಾಂಗ್ರೆಸ್ ಆಗಿದೆ. ಇಂದು ಭಾರತ ಸಂವಿಧಾನವನ್ನು ಎತ್ತಿ ಹಿಡಿದು ಸಂವಿಧಾನವನ್ನು ರಕ್ಷಣೆ ಮಾಡಿದೆ. ಅದರ ಫಲವಾಗಿ ನಿಮ್ಮ ಪಕ್ಷದ ನರೇಂದ್ರ ಮೋದಿಯವರು ದೇಶದ ಪ್ರಧಾನಿ ಆಗಲು ಸಾಧ್ಯವಾಗಿದೆ ಎನ್ನುವುದು ಅರ್ಥೈಸಿಕೊಳ್ಳಬೇಕು ಎಂದರು.
ಚುನಾವಣಾ ಸಂದರ್ಭದಲ್ಲಿ ಮತದಾರರಿಗೆ ತಮ್ಮ ಮನುವಾದದ ವಿಷ ಬೀಜವನ್ನು ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಸಂದರ್ಭವನ್ನು ಬಳಸಿಕೊಂಡು ಜನರ ದಾರಿ ತಪ್ಪಿಸುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ ನಿಮ್ಮ ಭ್ರಮೆ ಫಲಿಸದು. ನಿಮಗೆ ನಿಜವಾಗಿಯೂ ಮಕ್ಕಳನ್ನು ಮತಗಳನ್ನು ಕೇಳಬೇಕಾದರೆ ಡಬಲ್ ಇಂಜಿನ್ ಸರ್ಕಾರ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರ ಮುಂದೆ ವಿವರಿಸಿ ಮತವನ್ನು ಕೇಳಿ ಕಾಂಗ್ರೆಸ್ ಪಕ್ಷದ ಬಗ್ಗೆ ಹಗುರವಾಗಿ ಮಾತನಾಡಿದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾರರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಎಸ್.ಮಲ್ಲೇಶ ಕೊಲಿಮಿ, ಶಂಶವಲಿ,ಶಿವರಾಜ ರೆಡ್ಡಿ ಇದ್ದರು.