ತ್ರಿವರ್ಣ ಧ್ವಜಕ್ಕೆ 20 ರೂ. ಶುಲ್ಕ ವಿವಾದಕ್ಕೆಡೆ

ಶ್ರೀನಗರ, ಜು.೨೫- ಸ್ವಾತಂತ್ರ್ಯ ದಿನಾಚರಣೆಯ ರಾಷ್ಟ್ರವ್ಯಾಪಿ ಕಾರ್ಯಕ್ರಮದ ಭಾಗವಾಗಿ, ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನಲ್ಲಿರುವ ಅಂಗಡಿಯವರಿಗೆ ತ್ರಿವರ್ಣ ಧ್ವಜಕ್ಕಾಗಿ “ಠೇವಣಿ ಶುಲ್ಕ” ೨೦ ರೂಪಾಯಿ ಪಾವತಿಸುವಂತೆ ಹೊರಡಿಸಿದ ಸುತ್ತೋಲೆ ವಿವಾದಕ್ಕೆ ಕಾರಣವಾಗಿದೆ.
ಕೇಂದ್ರಾಡಳಿತದ ಪ್ರದೇಶ ಸರ್ಕಾರದ ಹಣ ನೀಡಿ ರಾಷ್ಟ್ರ ಧ್ವಜ ಖರೀದಸದಿದ್ದರೆ ಕ್ರಮ ಎದುರಿಸಲು ಸಜ್ಜಾಗಿ ಎಂದು ಆದೇಶದಲ್ಲಿ ತಿಳಿಸಿದೆ.
ಜನರಿಂದ ತೀವ್ರ ವಿರೋದ ವ್ಯಕ್ತವಾದ ಹಿನ್ನೆಲೆಯಲ್ಲಿ ಧ್ವಜ ಅಭಿಯಾನ ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿದೆ ಎಂದು ಜಿಲ್ಲೆಯ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಅನಂತನಾಗ್ ಮುಖ್ಯ ಶಿಕ್ಷಣಾಧಿಕಾರಿ ಜಿಲ್ಲೆಯ ಶಾಲೆಗಳಿಗೆ ಸುತ್ತೋಲೆ ಹೊರಡಿಸಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ರೂ ೨೦ ಶುಲ್ಕ ಪಾವತಿಸುವಂತೆ ಸೂಚಿಸಿದ್ದಾರೆ. ಈ ಸುತ್ತೋಲೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ಎದುರಾದ ನಂತರ ಹಿಂಪಡೆಯಲಾಗಿದೆ.
ದಕ್ಷಿಣ ಕಾಶ್ಮೀರದ ಜಿಲ್ಲೆಯಲ್ಲಿ ಧ್ವನಿವರ್ಧಕ ಬಳಸಿಕೊಂಡು ಅಂಗಡಿ ಮಾಲೀಕರಿಗೆ ಘೋಷಣೆ ಹೊರಡಿಸಲಾಗಿತ್ತು.
ಅನಂತ್‌ನಾಗ್ ಜಿಲ್ಲಾಧಿಕಾರಿ ಡಾ ಪಿಯೂಷ್ ಸಿಂಗ್ಲಾ ಪ್ರತಿಕ್ರಿಯಿಸಿ ಅನುಮತಿಯಿಲ್ಲದೆ ನಡೆದಿದೆ ಮತ್ತು ಘೊಷಣೆ ಕೂಗಿದ ಮಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ರಾಷ್ಟ್ರವ್ಯಾಪಿ ‘ಹರ್ ಘರ್ ತಿರಂಗ’ ಅಭಿಯಾನ ಆಗಸ್ಟ್ ೧೩ ರಿಂದ ೧೫ ನಡೆಸಬೇಕು ಮತ್ತು ಆಗಸ್ಟ್ ೧೫ ರಂದು ರಾಷ್ಟ್ರಧ್ವಜವನ್ನು ಹಾರಿಸಲು ಜನರನ್ನು ಉತ್ತೇಜಿಸಲು ಪ್ರಯತ್ನಿಸಿದೆ.