ತ್ರಿಮೂರ್ತಿಗಳ  ಹೊಸ ಗೀತೆ ದೇವ್ಲೇ… ದೇವ್ಲೇ…ಗೆ ಫಿಧಾ..

* ಚಿ.ಗೋ ರಮೇಶ್

ನಿರ್ದೇಶಕ ಯೋಗರಾಜ್ ಭಟ್, ಅರ್ಜುನ್ ಜನ್ಯ ಹಾಗು ವಿಜಯ ಪ್ರಕಾಶ್ ಕಾಂಬಿನೇಷನ್ ಅಂದರೆ ಅಲ್ಲಿ ಗೆಲುವು ಖಾತ್ರಿ ಎನ್ನುವುದನ್ನು  ತ್ರಿಮೂರ್ತಿಗಳು ನಿರೂಪಿಸುತ್ತಲೇ ಬಂದಿದ್ದಾರೆ.

ಅದರ ಸಾಲಿಗೆ “ಗಾಳಿಪಟ-2” ಚಿತ್ರದ  “ದೇವ್ಲೆ ದೇವ್ಲೆ ” ಹಾಡು ಹೊಸ ಸೇರ್ಪಡೆ. ಯೋಗರಾಜ್ ಭಟ್ ಬರೆದಿರುವ ಗೀತೆಗೆ ವಿಜಯ್ ಪ್ರಕಾಶ್ ಧ್ವನಿಯಾಗಿದ್ದು. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.ಈ ಹಾಡು ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.

ಈ ವೇಳೆ ಮಾತಿಗಿಳಿದ ನಿರ್ದೇಶಕ ಯೋಗರಾಜ ಭಟ್, ಮೊದಲು “ದೇವ್ರೆ ದೇವ್ರೆ” ಎಂದು ಬರೆಯಲಾಗಿತ್ತು  ಅರ್ಜುನ್ ಜನ್ಯ ಸಲಹೆಯಂತೆ  ರ ಕಾರ ತೆಗೆದು ಲ‌ ಕಾರ ಬಳಲಾಗಿದೆ. ವಿಜಯ್ ಪ್ರಕಾಶ್ ಸುಶ್ರಾವ್ಯವಾಗಿ ಹಾಡಿದ್ದಾರೆ. ಮೂರು ಮಂದಿಯ ಕಾಂಬಿನೇಷನ್ ಹಾಡುಗಳು ಗೆದ್ದಿವೆ. ಈ ಹಾಡು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಿಮ ಬೇಕಾಗಿದ್ದರಿಂದ ಹಾಡಿನ ಚಿತ್ರೀಕರಣಕ್ಕೆ ಕಜಾಕಿಸ್ತಾನಕ್ಕೆ ಹೋಗಿದ್ದೆವು ಕೊನೆಗೆ ಏಕಾದರೂ ಬಂದೆವೊ  ಅನ್ನಿಸಿತ್ತು ಕಷ್ಟಗಳ ನಡುವೆ ಇಷ್ಟವಾಗುವ ಹಾಡು ಚಿತ್ರೀಕರಣ ಮಾಡಿದ್ದೇವೆ ಇದನ್ನು ಸಾದ್ಯವಾಗಿಸಿದ್ದು ನಿರ್ಮಾಪಕ ರಮೇಶ್ ರೆಡ್ಡಿ ಎಂದು ಮಾಹಿತಿ ಹಂಚಕೊಂಡರು.

ನಟ ಗಣೇಶ್ ,ಲ ಕಾರದ ಹಾಡನ್ನು ಕೇಳುತ್ತಾ ಪದೇ ಪದೇ ಗುನುಗುವಂತೆ ಮಾಡಿದೆ. ಹಾಡಿನ ಬಗ್ಗೆ  ಇದ್ದ  ಆತಂಕ ಈಗ ಇಲ್ಲ. “ದೇವ್ಲೆ ದೇವ್ಲೆ” ಹಾಡನ್ನು ಒಪ್ಪಿಕೊಂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ,ವಿಜಯ್ ಪ್ರಕಾಶ್ ಗಾಯನ, ಪಾತಾಜೆ ಛಾಯಾಗ್ರಹಣ,  ಧನು ಮಾಸ್ಟರ್  ನೃತ್ಯ ಜೊತೆಗೆ  ಎಲ್ಲರ ಅಭಿನಯ ಹಾಡನ್ನು  ಶ್ರೀಮಂತಗೊಳಿಸಿದೆ ಎಂದರು.

ನಿರ್ಮಾಪಕ ರಮೇಶ್ ರೆಡ್ಡಿ.ಹಾಡಿನ‌ ಚಿತ್ರೀಕರಣ ನೋಡಲು ಕಜಾಕಿಸ್ತಾನಕ್ಕೆ ಹೋಗಿದ್ದೆ. ಮೊದಲ ಬಾರಿಗೆ ಅಂತರರಾಷ್ಟ್ರೀಯ ವಿಮಾನ ಹತ್ತಿದ್ದು, ಅಂತಹ ಚಳಿಯಲ್ಲಿ ಕೆಲಸ ಮಾಡಿದ್ದ ಚಿತ್ರ ತಂಡಕ್ಕೆ ಧನ್ಯವಾದ ಎಂದರು.

ಗಾಯಕ ವಿಜಯ್ ಪ್ರಕಾಶ್,  ಲ ಕಾರದ ಹಾಡು ಹಾಡುವುದು ಕಷ್ಟ ಅಂದುಕೊಂಡೆ. ಅಭ್ಯಾಸ ಮಾಡಿದ್ದೆ. ಅರ್ಧ ಗಂಟೆಯಲ್ಲಿ “ದೇವ್ಲೆ ದೇವ್ಲೆ” ಹಾಡು ಹಾಡಿದೆ. ಈ ಹಿಂದೆ ಕೂಡ ನನ್ನ ಹಾಗೂ ಭಟ್ಟರ ಕಾಂಬಿನೇಶನಲ್ಲಿ ಸಾಕಷ್ಟು ಗೀತೆಗಳು ಜನಪ್ರಿಯವಾಗಿದೆ ಎಂದರೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ರ ಕಾರದ ಹಾಡು ಅಷ್ಟು ಮಜಾ ಇರಲ್ಲ. ಆಗ ಯೋಗರಾಜ್ ಸರ್, ರ ಕಾರಗಳನ್ನು ತೆಗೆದು ಲ ಕಾರ ಮಾಡಿದರು. ಹಾಡು ತುಂಬಾ ಹಿಡಿಸಿತು. ವಿಜಯ್ ಪ್ರಕಾಶ್ ಇಂಪಾಗಿ ಹಾಡಿದ್ದಾರೆ ಎಂದರು

ನಾಯಕರಾದ ದಿಗಂತ್, ಪವನ್ ಕುಮಾರ್, ನಾಯಕಿ ಶರ್ಮಿಳಾ ಮಾಂಡ್ರೆ, ನಟಿ ಸುಧಾ ಬೆಳವಾಡಿ, ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ, ನೃತ್ಯ ನಿರ್ದೇಶಕ ಧನು ಮಾಸ್ಟರ್ ಹಾಗೂ ಆನಂದ್ ಆಡಿಯೋ ಶ್ಯಾಮ್ “ದೇವ್ಲೆ ದೇವ್ಲೆ” ಹಾಡಿನ ಬಗ್ಗೆ ಹಾಗೂ ಚಿತ್ರದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.