” ತ್ರಿಭುಜ ಪ್ರಪಂಚ”ಕೃತಿ ಲೋಕಾರ್ಪಣೆ


ಧಾರವಾಡ, ನ11: ಸಾಧಕರ ಆದರ್ಶಗಳನ್ನು ಪ್ರತಿಯೊಬ್ಬರು ಸ್ಮರಿಸಿಕೊಳ್ಳಬೇಕು. ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ಕೆ.ಡಿ. ದೇವರಮನಿ ಅವರು ಕಠಿಣವಾದ ವಿಷಯವನ್ನು ಬಹಳ ಸರಳವಾಗಿ ವಿವರಿಸಿ ಇಡೀ ತ್ರಿಭುಜ ಪ್ರಪಂಚ ನೀಡಿ ಶೈಕ್ಷಣಿಕ ಪ್ರಪಂಚಕ್ಕೆ ಒಂದು ಹೊಸ ಕೊಡುಗೆಯನ್ನು ನೀಡಿದ್ದಾರೆ ಎಂದು ಜನತಾ ಶಿಕ್ಷಣ ಸಮಿತಿಯ ವಿತ್ತಾಧಿಕಾರಿಗಳಾದ ಡಾ.ಅಜಿತ ಪ್ರಸಾದ ಹೇಳಿದರು.
ಅವರು ಡಾ. ಎಚ್. ಎಫ್. ಕಟ್ಟಿಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನ- ಧಾರವಾಡ, ಜನತಾ ಶಿಕ್ಷಣ ಸಮಿತಿ-ವಿದ್ಯಾಗಿರಿ, ಧಾರವಾಡ, ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಧಾರವಾಡ ವತಿಯಿಂದ ಡಿ.ಆರ್.ಎಚ್. ಸಭಾಭವನ ಜೆ.ಎಸ್.ಎಸ್.ಕಾಲೇಜನಲ್ಲಿ ಕೆ. ಜಿ. ದೇವರಮನಿ ಇವರ ಪಠ್ಯ ಪೂರಕವಾದ ” ತ್ರಿಭುಜ ಪ್ರಪಂಚ”ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿ ಈ ರೀತಿ ತ್ರಿಭುಜಗಳ ಬೆಳವಣಿಗೆ ಕುರಿತು ಹಲವಾರು ರೋಚಕ ಐತಿಹಾಸಿಕ ಸಂಗತಿಗಳನ್ನು ಲೇಖಕರಾದ ಕೆ. ಜಿ. ದೇವರಮನಿ ಅವರು ಈ ಕೃತಿಯಲ್ಲಿ ಹಿಡಿದಿಡುವ ಕಾರ್ಯ ಮಾಡಿದ್ದಾರೆ. ತ್ರಿಭುಜಗಳ ವ್ಯಾಖ್ಯೆ, ತ್ರಿಭುಜಗಳ ವರ್ಗೀಕರಣ, ತ್ರಿಕೋನದ ಒಳಕೋನಗಳ ಮೊತ್ತ, ತ್ರಿಕೋನಕ್ಕೆ ಸಂಬಂಧಿಸಿದ ಪ್ರಮೇಯಗಳು, ಪೈಥಾಗೋರಸ್‍ನ ತ್ರಿವಳಿಗಳು, ಪೈಥಾಗೋರಸ್ ಅವಿಭಾಜ್ಯ ಸಂಖ್ಯೆಗಳು, ತ್ರಿಭುಜ ಸರ್ವಸಮತೆಯ ನಿಬಂಧನೆಗಳು, ಸಮರೂಪ ತ್ರಿಭುಜಗಳು, ಸಮಮಿತಿ, ಸಮದ್ವಿಬಾಹು ತ್ರಿಭುಜದ ಕೆಲವು ಲಕ್ಷಣಗಳು, ವಿವಿಧ ತ್ರಿಭುಜಗಳ ರಚನೆಗಳು, ತ್ರಿಭುಜದ ಕೆಲವು ವಿಶೇಷ ಗುಣಲಕ್ಷಣಗಳು, ಪಾರಿಭಾಷಿಕ ಪದಗಳು ಸವಿವರವಾದ ಮಾಹಿತಿಯನ್ನು ನೀಡಿದ್ದಾರೆ ಎಂದು ಹೇಳಿದರು.