ತ್ರಿಭಾಷೆಯಲ್ಲಿ ಸೀತಾಯಣ ಅಕ್ಷಿತ್ ಗೆ ಶಿವಣ್ಣ ಹಾರೈಕೆ

ಹಿರಿಯ ನಟ ಸುಪ್ರೀಂ‌ಹಿರೋ ಶಶಿಕುಮಾರ್ ಪುತ್ರ ಅಕ್ಷಿತ್‌ಶಶಿಕುಮಾರ್ ನಾಯಕನಾಗಿ ಚಿತ್ರರಂಗಕ್ಕೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಅಪ್ಪನ ಹಾಗೆ ಚಿತ್ರರಂಗದಲ್ಲಿ ಹೆಸರು ಮಾಡುವ ಆಸೆ ಗೊತ್ತಿರುವ ಅಕ್ಷಿತ್ ನಟಿಸುತ್ತಿರುವ ಮೊದಲ ಚಿತ್ರ ಸೀತಾಯಣದ ಟೀಸರ್ ಅನ್ನು ಹಿರಿಯ ನಟ ಶಿವರಾಜ್ ಕುಮಾರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ
ಕನ್ನಡ, ತೆಲುಗು ಮತ್ತು ತಮಿಳು ಭಾಷೆಯ ’ಸೀತಾಯಣ’ ಚಿತ್ರ ತಯಾರಾಗಿದೆ. ಟೀಸರ್‌ ಬಿಡುಗಡೆ ಮಾಡಿದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಸುಪ್ರೀಂ ಹೀರೋ ಶಶಿಕುಮಾರ್ ಸೋದರನಿದ್ದಂತೆ. ಅವರ ಮಗ ಮೂರು ಭಾಷೆಯಲ್ಲಿ ನಾಯಕನಾಗಿ ಪರಿಚಯವಾಗುತ್ತಿರುವುದು ನಿಜವಾಗಿ ಗೌರವ ಪಡುವಂತದ್ದಾಗಿದೆ. ಬೇರೆ ಯಾವ ನಟನಿಗೂ ಸಿಗದಂತ ಗೌರವವಿದು. ಟೀಸರ್ ನನ್ನ ಕೈಲಿಂದ ಬಿಡುಗಡೆ ಮಾಡಿದ್ದು ತುಂಬ ಸಂತಸ ಉಂಟು ಮಾಡಿದೆ. ಸಿನಿಮಾ ಕೂಡ ಖಂಡಿತ ಹಿಟ್ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಿಕ್ಸಡ್ ಕಾಂಟೆಂಪರರಿ ಕಂಟೆಂಟ್ ಆಗಿದ್ದು, ಹಾಡುಗಳು, ಸಂದೇಶ ಕೂಡ ವಿಭಿನ್ನವಾಗಿದೆ. ಮೂರು ಭಾಷೆಗಳಲ್ಲಿ ಕನ್ನಡ ಹುಡುಗನನ್ನು ಹಾಕಿಕೊಂಡು ನಿರ್ಮಾಣ ಮಾಡಿರುವ ನಿರ್ಮಾಪಕರಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ರಾಮಾಯಣದಂತೆ ಸಿನಿಮಾ ಎಲ್ಲಾ ಭಾಷೆಯಲ್ಲಿ ಚರಿತ್ರೆ ಸೃಷ್ಟಿಸಲಿ. ಅಕ್ಷಿತ್ ಕೂಡ ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಪ್ರತಿಭೆ, ಸುಂದರವಾಗಿದ್ದಾರೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಶಿವರಾಜ್‌ಕುಮಾರ್ ಶುಭ ಹಾರೈಸಿದರು. ನಿರ್ಮಾಪಕಿ ಲಲಿತಾರಾಜಲಕ್ಷೀ ಮಾತನಾಡಿ ಟೀಸರ್ ಬಿಡುಗಡೆ ಮಾಡಿದ ಡಾ.ಶಿವರಾಜ್‌ಕುಮಾರ್ ಅವರಿಗೆ ದನ್ಯವಾದ ಎಂದ ಅವರು ,ಸೀತಾಯಣ ಸಿನಿಮಾ ಮಹಿಳೆಯರಿಗೆ ಗೌರವ ಕೊಡಿ ಎಂದು ಹೇಳುವ ವಿಷಯವಿದೆ. ಅತಿ ಶೀಘ್ರದಲ್ಲೇ ತೆರೆಗೆ ತರುವ ಯೋಜನೆ ಇದೆ ಎಂದರು.
ಅಕ್ಷಿತ್‌ಶಶಿಕುಮಾರ್‌ಗೆ ಜೋಡಿಯಾಗಿ ಅನಹಿತಾಭೂಷಣ್ ಉಳಿದಂತೆ ಅಜೆಯ್‌ಘೋಷ್, ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್, ಮಧುಸುಧನ್, ವಿಕ್ರಂಶರ್ಮ, ಮೇಘನಾಗೌಡ, ಬೇಬಿ ತ್ರಿಯುಕ್ತ, ವಿದ್ಯಲೇಖರಾಮನ್ ಮುಂತಾದವರು ನಟಿಸಿದ್ದಾರೆ. ನಿರ್ದೇಶನ ಪ್ರಭಾಕರ್‌ಆರಿಪ್ಕಾ, ಸಂಗೀತ ಪದ್ಮನಾಭಭಾರದ್ವಾಜ್, ಹಾಗು ದುರ್ಗಾಪ್ರಸಾದ್‌ಕೊಲ್ಲಿ ಛಾಯಾಗ್ರಹಣವಿದೆ.

ಮತ್ತೊಂದು ಕುಡಿ ಆಗಮನ

ಕನ್ನಡ ಚಿತ್ರರಂಗಕ್ಕೆ ಚಿತ್ರರಂಗದ ಹಿನ್ನೆಲೆ ಇರುವ ಕುಟುಂಬಗಳ ಮಕ್ಕಳು ಒಬ್ಬರ ಹಿಂದೆ ಒಬ್ಬರು ಆಗಮಿಸುತ್ತಿದ್ದಾರೆ ಕನ್ನಡಚಿತ್ರರಂಗ ಕಂಡ ಸುರದ್ರೂಪಿ ನಟ ಸುಪ್ರೀಂ ಹೀರೋ ಶಶಿಕುಮಾರ್ ಅವರ ಪುತ್ರ ಅಕ್ಷಿತ್ ಶಶಿಕುಮಾರ್ “ಸೀತಾಯಣ” ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಮೊದಲ ಪ್ರಯತ್ನದಲ್ಲೇ ಚಿತ್ರ ಕನ್ನಡ ,ತೆಲುಗು ಮತ್ತು ತಮಿಳಿನಲ್ಲಿ ಹೊರಬರುತ್ತಿದೆ ಹೀಗಾಗಿ ಸಹಜವಾಗಿಯೇ ಕುತೂಹಲ ಕೆರಳಿಸಿದೆ.


ಶೀಘ್ರ ತೆರೆಗೆ
ಎಲ್ಲಾ ಅಂದುಕೊಂಡಂತೆ ಆದರೆ ಸೀತಾಯಣ ಚಿತ್ರ ಶೀಘ್ರದಲ್ಲೇ ತೆರೆಗೆ ಬರುವ ಸಾಧ್ಯತೆಗಳಿವೆ. ಬಹುತೇಕ ಹೊಸ ಕಲಾವಿದರು ಚಿತ್ರದಲ್ಲಿದ್ದಾರೆ