ತ್ರಿಬ್ಬಲ್ ರೈಡಿಂಗ್ ಹೊರಟ ರಚನಾ

  • ಚಿಕ್ಕನೆಟಕುಂಟೆ ಜಿ,ರಮೇಶ್

“ಲವ್ ಮಾಕ್‍ಟೈಲ್” ಬಳಿಕ “ಹರಿಕಥೆ ಅಲ್ಲ ಗಿರಿಕಥೆ”ಎಂದು ಹಾಡುತ್ತಿದ್ದ ನಟಿ ರಚನಾ ಇಂದರ್ ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ “ತ್ರಿಬ್ಬಲ್ ರೈಡಿಂಗ್” ಹೊರಟಿದ್ದಾರೆ. ಈ ಚಿತ್ರವನ್ನು ಮಹೇಶ್ ಗೌಡ ನಿರ್ದೇಶನ ಮಾಡುತ್ತಿದ್ದಾರೆ.
“ತ್ರಿಬ್ಬಲ್ ರೈಡಿಂಗ್”ನಲ್ಲಿ ಈಗಾಗಲೇ ಮೇಘಾ ಶೆಟ್ಟಿ, ಅದಿತಿ ಪ್ರಭುದೇವ ನಾಯಕಿಯರಾಗಿದ್ದು ಅವರ ಸಾಲಿಗೆ ರಚನಾ ಸೇರಿಕೊಂಡಿದ್ದಾರೆ.
ಮಾಲೂರು ಶ್ರೀನಿವಾಸ್ ಅವರ ನವರಸನ ನಟನಾ ಸಂಸ್ಥೆಯ ವಿದ್ಯಾರ್ಥಿಯಾಗಿರುವ ರಚನಾ,ಸಿಕ್ಕಿರುವ ಮೂರು ಚಿತ್ರಗಳಲ್ಲಿ ಒಂದಕ್ಕಿಂತ ಒಂದು ವಿಭಿನ್ನ ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರಗಳ ಬಗ್ಗೆ ಮಾಹಿತಿ ಹಂಚಿಕೊಂಡ ನಟಿ ರಚನಾ ಇಂದರ್, ಕಾಲೇಜಿನಲ್ಲಿ ಓದುತ್ತಿರುವ ಸಮಯದಲ್ಲಿ ನವರಸನ ನಟನಾ ಸಂಸ್ಥೆ ಸೇರಿಕೊಂಡಿದ್ದೆ, ಆರಂಭದಲ್ಲಿ ನಾಲ್ಕು ತರಗತಿ ಮಾತ್ರ ಹಾಜರಾಗಿದ್ದೆ. ಈ ವೇಳೆ ಲವ್‍ಮಾಕ್‍ಟೈಲ್‍ನಲ್ಲಿ ಆಡಿಷನ್‍ಗೆ ಮಾಲೂರು ಶ್ರೀನಿವಾಸ್ ಕಳುಹಿಸಿಕೊಟ್ಟರು. ಚಿತ್ರಕ್ಕೆ ಆಯ್ಕೆಯಾದೆ. ಚಿತ್ರವೂ ಯಶಸ್ವಿಯಾಯಿತು ಇದು ನನ್ನಲ್ಲಿ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚು ಮಾಡಿದೆ.
ಇದರ ಬೆನ್ನಲ್ಲೇ ‘ಹರಿಕಥೆ ಅಲ್ಲ ಗಿರಿಕಥೆ’ಚಿತ್ರದಲ್ಲಿ ಅವಕಾಶ ಸಿಕ್ಕಿತು. ಇದರಲ್ಲಿ ಇಬ್ಬರು ನಾಯಕಿಯರಲ್ಲಿ ನಾನೂ ಒಬ್ಬಳು. ಒಳ್ಳೆಯ ಪಾತ್ರ ಸಿಕ್ಕಿದೆ.ಅದೇ ರೀತಿ “್ರಬ್ಬಲ್ ರೈಡಿಂಗ್” ಚಿತ್ರದಲ್ಲಿ ಮೂವರು ನಾಯಕಿಯರಲ್ಲಿ ನನ್ನದೂ ಪ್ರಮುಖ ಪಾತ್ರ. ನಟ ಗಣೇಶ್ ಅವರ ಜೊತೆ ನಟಿಸುವ ಅವಕಾಶ ಸಿಕ್ಕಿದೆ. ಇದು ಖುಷಿಯ ಸಂಗತಿ ಎಂದು ಹೇಳಿಕೊಂಡರು.
ಮೂರು ಚಿತ್ರದಲ್ಲಿ ಒಂದಕ್ಕಿಂತ ಒಂದು ವಿಭಿನ್ನ ಪಾತ್ರ ಸಿಕ್ಕಿದೆ. ಆರಂಭದಲ್ಲಿ ಈ ರೀತಿಯ ಪಾತ್ರ ಖುಷಿಕೊಟ್ಟಿದೆ. ಭವಿಷ್ಯದಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳುವ ಆಸೆ ಇದೆ. ಯಾವುದೇ ಪಾತ್ರ ನೀಡಿದರೂ ಈಕೆ ಮಾಡಬಲ್ಲಳು ಎನ್ನುವ ಮಟ್ಟಿಗೆ ಹೆಸರು ಪಡೆಯಬೇಕು ಎನ್ನುವ ಕನಸು ಕಂಡಿದ್ದಾರೆ.

ಕೊಡಗಿನ ಕುವರಿ
ಅಪ್ಪನ ಊರು ಕೊಡಗಿನ ಭಾಗಮಂಡಲ.ನಾನು ಹುಟ್ಟಿ ಬೆಳೆದಿದ್ದಲ್ಲಾ ಬೆಂಗಳೂರು,ಇನ್ನೂ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ತ್ರರಂಗದಲ್ಲಿ ಉತ್ತಮ ಹೆಸರು ಪಡೆಯಬೇಕು ಎನ್ನುವ ಹಂಬಲ ಇದೆ ಎನ್ನುತ್ತಾರೆ ಕೊಡಗಿನ ಕುವರಿ
.

ಅಪ್ಪನ ಹೆಸರು ಸೇರ್ಪಡೆ
ಅಪ್ಪನ ಹೆಸರು ಇಂದ್ರಕುಮಾರ್.ಹೀಗಾಗಿ ಅಪ್ಪನ ಹೆಸರಿನ ಇಂದರ್ ನನ್ನ ಹೆಸರಿನ ಜೊತೆ ಸೇರಿಸಿಕೊಂಡಿದ್ದೇನೆ ಎನ್ನುವ ವಿವರಣೆ ಅವರದು.