ತ್ರಿಬಲ್ ರೈಡ್, ಮಕ್ಕಳಿಂದ ದ್ವಿಚಕ್ರ ವಾಹನ ಚಾಲನೆ ತಡೆಗೆ ಸ್ಪೇಷಲ್ ಡ್ರೈವ್

ಕಲಬುರಗಿ,ಅ.28-ನಗರದಲ್ಲಿ ಹೆಚ್ಚುತ್ತಿರುವ ದ್ವಿಚಕ್ರ ವಾಹನ ತ್ರಿಬಲ್ ರೈಡಿಂಗ್, ಅತಿ ಶಬ್ದದಿಂದ ವಾಹನ ಓಡಿಸುವಿಕೆ ಹಾಗೂ ವನ್ ವೇದಲ್ಲಿ ಚಾಲನೆ ತಡೆಯಲು ಸ್ಪೆಷಲ್ ಡ್ರೈವ್ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಮಹಾನಗರ ಪೆÇಲೀಸ್ ಆಯುಕ್ತ ಆರ್ ಚೇತನ ತಿಳಿಸಿದರು.
ದ್ವಿಚಕ್ರ ವಾಹನಗಳ ಸಂಚಾರ ನಿಯಮಗಳ ಉಲ್ಲಂಘನೆಯಿಂದ ಸಾರ್ವಜನಿಕವಾಗಿ ತೊಂದರೆಯಾಗುತ್ತಿದೆಯಲ್ಲದೇ ಅಪಘಾತಗಳಿಗೂ ಕಾರಣವಾಗುತ್ತಿದೆ. ಹೀಗಾಗಿ ತಡೆಯಲು ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪಾಲಕರು ಇನ್ನೂ 18 ವರ್ಷವಾಗದ ಹಾಗೂ ಡ್ರೈವಿಂಗ್ ಲೈಸೆನ್ಸ್ ಇಲ್ಲದ ಮಕ್ಕಳ ಕೈಗೆ ದ್ವಿಚಕ್ರ ವಾಹನ ಕೊಡಬಾರದು. ಇಷ್ಟೂ ಮೀರಿ ಸಂಚಾರ ನಿಯಮಗಳನ್ನು ಗಾಳಿಗೆ ತೂರಿ ಉಲ್ಲಂಘನೆ ಮಾಡಿದ್ದಲ್ಲಿ ಕ್ರಮ ಕೈಗೊಳ್ಳುವುದು ನಿಶ್ಚಿತ. ಸೈಲೆನ್ಸ್‍ರ್ ತೆಗೆದು ಶಬ್ಧ ಮಾಡುವುದನ್ನು ತಡೆಗಟ್ಟಲು ಮೆಕ್ಯಾನಿಕ್ ದವರಿಗೆ ತಿಳಿ ಹೇಳಲಾಗಿದೆಯಲ್ಲದೇ ಕೆಲ ಮೆಕ್ಯಾನಿಕ ವಿರುದ್ದ ಕ್ರಮ ಸಹ ಕೈಗೊಳ್ಳಲಾಗಿದೆ ಎಂದು ವಿವರಣೆ ನೀಡಿದರು.