
ರಾಯಚೂರು,ಮೇ.೨೪-
ಸರ್ಕಾರವು ತಂದಿರುವ ಆರ್‌ಆರ್‌ಆರ್ ಕಾರ್ಯಕ್ರಮ ಯಶಸ್ವಿ ಆಗಬೇಕಾದರೆ ರಾಯಚೂರು ನಗರದ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಮತ್ತು ಸಾರ್ವಜನಿಕರ ಸಹಕಾರ ಅತ್ಯವಶ್ಯಕವೆಂದು ಇಂದು ರಾಯಚೂರಿನ ಪಬ್ಲಿಕ್ ಗಾರ್ಡನ್‌ನಲ್ಲಿ ನಡೆದ ತ್ರಿಬಲ್ ಆರ್ ಕಾರ್ಯ ಯೋಜನೆಯ ಕುರಿತು ಸಂಘ-ಸಂಸ್ಥೆಗಳ ನಡೆದ ಸಂಯೋಜನೆ ಸಭೆಯಲ್ಲಿ ನಗರಸಭೆಯ ಪೌರ ಆಯುಕ್ತರಾದ ಡಾ ಗುರುಲಿಂಗಪನವರು ಮಾತನಾಡಿದರು.
ಅವರು ಮುಂದುವರೆದು ಮಾತನಾಡುತ್ತಾ, ಯೋಜನೆ ಬಹಳ ಮಹತ್ವದ್ದಾಗಿದ್ದು ಈಗಾಗಲೇ ರಾಯಚೂರು ನಗರದಲ್ಲಿ ಐದು ಕೇಂದ್ರಗಳನ್ನು ಸ್ಥಾಪನೆ ಮಾಡಿದ್ದೇವೆ ನಿಮ್ಮ ಮನೆಯಲ್ಲಿ ಇರುವಂತ ವಸ್ತುಗಳನ್ನ ಪುನರ್ ಬಳಕೆ ಮಾಡ ವ ಅಂತ ವಸ್ತುಗಳನ್ನು ಬಟ್ಟೆ ಆಗಿರಬಹುದು. ಎಲೆಕ್ಟ್ರಿಕಲ್ ಸಾಮಾನಗಳಿರಬಹುದು. ಪ್ಲಾಸ್ಟಿಕ್ ವಸ್ತುಗಳಾಗಿರಬಹುದು ಈ ವಸ್ತುಗಳನ್ನ ನಮ್ಮ ಕೇಂದ್ರಗಳಿಗೆ ಕೊಡಬೇಕು.
ಈ ಯೋಜನೆಯ ವಿಚಾರವನ್ನು ಪ್ರತಿಯೊಬ್ಬರಿಗೆ ಮುಟ್ಟಿಸುವಂತಹ ಹಿನ್ನೆಲೆಯಲ್ಲಿ ಸಂಘ ಸಂಸ್ಥೆಗಳ ಪದಾಧಿಕಾರಿಗಳು ತಮ್ಮ ಸಂಘದ ಎಲ್ಲಾ ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ ಸುತ್ತಮುತ್ತಲಿನ ಎಲ್ಲಾ ಜನರಿಗೆ ತಿಳಿಸುವುದರ ಮೂಲಕ ಹೆಚ್ಚು ಪ್ರಚಾರವನ್ನು ಮಾಡಬೇಕು ಈ ತಿಂಗಳ ೨೦ ರಿಂದ ಪ್ರಾರಂಭವಾಗಿರುವಂತ. ಈ ಕಾರ್ಯಕ್ರಮ ಬಹಳ ಅರ್ಥಪೂರ್ಣವಾಗಿದ್ದು ಮತ್ತು ಪರಿಸರ ಸ್ನೇಹಿ ಸಮಾಜವನ್ನು ನಿರ್ಮಾಣ ಮಾಡಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ ಜಿಲ್ಲಾ ಸಂಚಾಲಕರಾದ ಡಾ.ದಂಡಪ್ಪ ಬಿರಾದಾರ್ ಮಾತನಾಡುತ್ತಾ, ನನ್ನ ಜೀವನ ನನ್ನ ನಗರ ಸ್ವಚ್ಛತೆ ಇದು ಮಹತ್ವದ ಕಾರ್ಯಕ್ರಮವಾಗಿದ್ದು, ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿ ನಿರುಪಕ್ತವಾದ ಮತ್ತು ಪುನರ್ ಬಳಕೆ ಮಾಡುವಂತಹ ವಸ್ತುಗಳು ಇರುತ್ತವೆ. ಅವುಗಳನ್ನ ಚರಂಡಿ ಆಗಲಿ ಅಥವಾ ಬೇರೆ ಕಡೆ ಎಸೆದು ಪರಿಸರವನ್ನ ಹಾನಿ ಮಾಡುವ ರೀತಿಯಲ್ಲಿ ವಸ್ತುಗಳನ್ನು ಬೀಸಾಡದೆ ನಗರಸಭೆ ಸ್ಥಾಪನೆ ಮಾಡಿರುವಂತ ತ್ರಿಬಲ್ ಆರ್ ಕೇಂದ್ರಗಳಿಗೆ ಕೊಡುವುದರ ಮೂಲಕ ಉತ್ತಮ ಪರಿಸರದ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಪ್ರತಿಯೊಬ್ಬ ನಾಗರಿಕರೆ ಕರ್ತವ್ಯ ಅತ್ಯಮೂಲ್ಯವಾದ ಎಂದು ಹೇಳಿದರು.
ನಂತರ ಉಸ್ಮಾನಿಯ ಮಾರುಕಟ್ಟೆಯ ಸಮಿತಿಯ ಮುಖ್ಯಸ್ಥರಾದ ಎನ್. ಮಾವೀರವರು ಇದು ಅತ್ಯಂತ ಮಹತ್ವದ್ದಾಗಿದ್ದು ವಿಶೇಷವಾಗಿ ಸ್ವಚ್ಛತೆಯ ಬಗ್ಗೆ ನಾನು ನಗರ ಸಭೆಯ ಸಿಬ್ಬಂದಿ ಸಂಗಡ ನಿರಂತರವಾಗಿ ಸಂಪರ್ಕದಲ್ಲಿ ಇರುತ್ತೇನೆ. ಅವರು ಈ ಕೈಗೊಳ್ಳುವಂತ ಕಾರ್ಯಕ್ಕೆ ತುಂಬಾ ಬೆಂಬಲವಿದೆ. ಸಾರ್ವಜನಿಕ ಇದಕ್ಕೆ ಬೆಂಬಲ ವ್ಯಕ್ತಪಡಿಸಿ ಈ ಯೋಜನೆ ಯಶಸ್ವಿಯಲ್ಲಿ ಕೈಜೋಡಿಸಬೇಕೆಂದು ಹೇಳಿದರು.
ಡಾ. ವರ್ಷ ಪಾದ್ಯ ಪವನ್ ಕುಮಾರ್ ಪಾಟೀಲ್, ಎಂ ಗಣೇಶ್, ಸರಸ್ವತಿ ಕಿಲಕಿಲೆ, ಮಲ್ಲಿಕಾರ್ಜುನ್, ಜಗದೀಶ್ ಪಾಟೀಲ್ ಹಲವರು ಈ ಕಾರ್ಯಕ್ರಮ ಕುರಿತು ಮಾತನಾಡಿದರು. ರಾಯಚೂರು ನಗರದ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗು ರವಿಕುಮಾರ್ ಎಂ.ಡಿ ರಪಿ, ಕೇಶವ ರೆಡ್ಡಿ, ಮಲ್ಲಿಕಾರ್ಜುನ್, ರಾಜುಗೌಡ, ನಗರ ಸಭೆಯ ಸಿಬ್ಬಂದಿಗಳಾದ ಶಕಿಲ, ಮೆಹಬೂಬ್ ಖಾನ್ ಸಾಬ್, ಅಮರೇಶ್, ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.
ನಗರ ಸಭೆಯ ಖಾನ್ ಸಾಬ್ ಕಾರ್ಯಕ್ರಮ ಸ್ವಾಗತ ಕೋರಿದರು. ವ್ಯವಸ್ಥಾಪಕರಾದ ರಾಜುರವರು ವಂದನಾಪ್ರಣೆ ಹೇಳಿದರು.