ತ್ರಿಪೂರಾ ಮಸೀದಿ ದಾಳಿ ಖಂಡಿಸಿ ಪ್ರತಿಭಟನೆ

ವಾಡಿ: ನ.8:ತ್ರೀಪೂರಾ ರಾಜ್ಯದ ವಿವಿಧೆಡೆ ಮುಸ್ಲಿಂ ಧಾರ್ಮಿಕ ಸ್ಥಳಗಳ ಮೇಲೆ ದಾಳಿ ಹಾಗೂ ಅಲ್ಪಸಂಖ್ಯಾತರ ಮೇಲೆ ಉದ್ದೇಶ ಪೂರ್ವಕವಾಗಿ ಮಾಡಲಾಗುತ್ತಿರುವ ಹಲ್ಲೇಯನ್ನು ಖಂಡಿಸಿ ಎಐಎಂಐಎಮ್ ಪಕ್ಷ ವತಿಯಂದ ರವಿವಾರ ಮಧ್ಯಾಹ್ನ ಪ್ರತಿಭಟನೆ ಮಾಡಲಾಯಿತ್ತು.

ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಲ್ಲಿ ಆಲ್ ಇಂಡಿಯಾ ಮಜಲಿಸೇ ಇತ್ತೆಹಾದ ಮುಸ್ಲಿಂ ಪಕ್ಷದಿಂದ ಅಧ್ಯಕ್ಷ ಜಹೂರ್‍ಖಾನ ನೇತೃತ್ವದಲ್ಲಿ ತ್ರೀಪೂರಾ ರಾಜ್ಯದ ಮಸಜೀದ ಅಂಗಡಿ ಹಾಗೂ ಮನೆಗಳ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿಲಾಯಿತ್ತು.

ಹಿಂದೂ ಧಾರ್ಮಿಕ ಸಂಘಟನೆಗಳಾದ ಆರ್‍ಎಸ್‍ಎಸ್, ವಿಶ್ವ ಹಿಂದೂ ಪರಿಷತ್ತು, ಹಿಂದೂ ಜಾಗರಣಾ ವೇದಿಕೆಯಂತಹ ಭಯಾನಕ ಸಂಘಟನೆಗಳನ್ನು ದೇಶದಲ್ಲಿ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನಾಕಾರರು ಬಿಜೆಪಿ ಹಾಗೂ ಆರ್‍ಎಸ್‍ಎಸ್ ವಿರುದ್ದ ಕೀಡಿಕಾರಿದರು.

ರಾಜ್ಯಪಾಲರಿಗೆ ಬರೆದ ಮನವಿಪತ್ರವನ್ನು ಉಪತಹಸೀಲ್ದಾರ್ ಲಕ್ಷ್ಮೀನಾರಾಯಣ ಅವರಿಗೆ ಸಲ್ಲಿಸಲಾಯಿತ್ತು. ಪಿಎಸ್‍ಐ ವಿಜಯಕುಮಾರ ಬಾವಗಿ, ಕ್ರೈಂ ಪಿಎಸ್‍ಐ ತಿರುಮಲ್ಲೇಶ, ವಿಶೇಷ ಪೇದೆ ಲಕ್ಷ್ಮಣ, ದತ್ತು ಜಾನೆ ಬಂದೋಬಸ್ತ ಏರ್ಪಡಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಮಶಾಖ ಪಟೇಲ್, ಯುಸುಫ ಕೊಂಡಜಾ, ಮೋಸಿನಪಾಶಾ, ಶೇಖ ಹುಸೇನ್, ರಫೀಕ ಪಟೇಲ್, ಶೇಖ ರಫೀಕ, ತೋಸೀಫ ಅಹ್ಮದ, ಇರ್ಫಾನ್, ಫೈಸಾಲ್, ಅಮೀರ, ಉಮರ ಬಿಲಾಲ್, ಅಜಮತ, ಸೋಹೇಲ್ ಸೇರಿದಂತೆ ಅನೇಕರು ಇದ್ದರು.