
ನವದೆಹಲಿ,ಜ.೧- ಬಾಲಿವುಡ್ ನಟ ಮತ್ತು ಬಿಜೆಪಿ ಮುಖಂಡ ಮಿಥುನ್ ಚಕ್ರವರ್ತಿಗೆ ಬಿಜೆಪಿ ಹೈಕಮಾಂಡ್ ತ್ರಿಪುರಾ ವಿಧಾನಸಭೆ ಚುನಾವಣೆಯ ಪ್ರಚಾರದಲ್ಲಿ ತೊಡಗಿಸಿಕೊಳ್ಳುವಂತೆ ಸೂಚನೆ ನೀಡಿದೆ.
ಪಶ್ಚಿಮ ಬಂಗಾಳ ವಿಧಾನಸಭೆಗೂ ಮುನ್ನ ಬಿಜೆಪಿ ಸೇರಿದ್ದ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಮೋಡಿ ಮಾಡಲು ವಿಫಲರಾಗಿದ್ದರು.ಇದೀಗ ಬಿಜೆಪಿ ಹೈಕಮಾಡ್ ಈಶಾನ್ಯ ರಾಜ್ಯಗಳಲ್ಲಿ ಒಂದಾದ ತ್ರಿಪುರಾದಲ್ಲಿ ಪ್ರಚಾರಕ್ಕೆ ಬಳಸಿಕೊಳ್ಳಲು ಮುಂದಾಗಿದೆ.
ಮುಂದಿನ ತಿಂಗಳು ತ್ರಿಪುರಾ ವಿಧಾನಸಭೆಗೆ ಚುನಾವಣೆಯ ನಡೆಯಲಿರುವ ಹಿನ್ನೆಲೆಯಲ್ಲಿ ಮಿಥುನ್ ಚಕ್ರವರ್ತಿಯನ್ನೂ ಬಿಜೆಪಿ, ಈಗಿನಿಂದಲೇ ಚುನಾವಣಾ ಅಖಾಡಕ್ಕೆ ಇಳಿಸಿದೆ.
ಕಳೆದ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಮಿಥುನ್ ಚಕ್ರವರ್ತಿ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿದ್ದರು. ಆದರೆ ಹೆಚ್ಚಿನ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಈಗ, ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ನಟ ತ್ರಿಪುರಾ ವಿಧಾನಸಭೆಯ ಚುನಾವಣೆಯ ಜವಾಬ್ದಾರಿ ವಹಿಸಿದೆ.
ನಟ-ರಾಜಕಾರಣಿಯಾಗಿರುವ ಮಿಥುನ್ ಚಕ್ರವರ್ತಿ ಪಶ್ಚಿಮ ಬಂಗಾಳ ಬಿಜೆಪಿಯಲ್ಲಿ ರಾಜಕೀಯವಾಗಿ ಯಶಸ್ವಿಯಾಗದಿರಬಹುದು, ಆದರೆ ನೆರೆಯ ತ್ರಿಪುರಾದಲ್ಲಿ ಅವರ ಅಭಿಮಾನಿಗಳ ಸಂಖ್ಯೆ ಹಚ್ಚಿದ್ದು ಅದನ್ನು ಮತಗಳನ್ನಾಗಿ ಪರಿವರ್ತಿಸಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ.
ತ್ರಿಪುರಾದಲ್ಲಿ ತೆಲಿಯಮುರಾದಲ್ಲಿ ವಿಜಯ್ ಸಂಕಲ್ಪ್ ರ್ಯಾಲಿ ಉದ್ದೇಶಿಸಿ ಮಾತನಾಡಿ ರಾಜ್ಯದಲ್ಲಿ ಬಿಜೆಪಿಯನ್ನು ಬೆಂಬಲಿಸಿ ಮತ್ತೆ ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದ್ದಾರೆ. ಮಜ್ಲಿಶ್ಪುರ ಮಂಡಲದಲ್ಲಿ ನಡೆಯುತ್ತಿರುವ ಜನ ಬಿಶ್ವಾಸ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.
ಮುಂದಿನ ಒಂದರಡು ತಿಂಗಳು ಸಂಪೂರ್ಣವಾಗಿ ತ್ರಿಪುರಾ ವಿಧಾನಸಭೆಯ ಚುನಾವಣೆಯಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳಲಿದ್ದಾರೆ.