ತ್ರಿಪಾಠಿ, ಅಯ್ಯರ್ ಅಬ್ಬರ ಕೆಕೆಆರ್ ಗೆ ಗೆಲುವಿನ ಸಿಂಚನ

ಅಬುಧಾಬಿ, ಸೆ.23-ರಾಹುಲ್ ತ್ರಿಪಾಠಿ ಹಾಗೂ ವೆಂಕಟೇಶ್ ಅಯ್ಯರ್ ಅವರ‌ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಐಪಿಎಲ್ ಟೂರ್ನಿಯಲ್ಲಿಂದು 34ನೇ ಪಂದ್ಯದಲ್ಲಿ ಮುಂಬೈ ವಿರುದ್ದ ಕೆಕೆಆರ್ ಏಳು ವಿಕೆಟ್ ಗಳಿಂದ ಗೆಲುವು ಸಾಧಿಸಿತು.


ಗೆಲುವಿಗೆ ಬೇಕಾಗಿದ್ದ 156 ರನ್ ಗಳನ್ನು ಕೇವಲ ಮೂರು ವಿಕೆಟ್ ಕಳೆದುಕೊಂಡು ಕೆಕೆಆರ್ ಗೆದ್ದು ಪ್ಲೇ ಆಫ್ ಹಂತವನ್ನು ಜೀವಂತವಾಗಿರಿಸಿಕೊಂಡಿದೆ.
ತಂಡ 40 ರನ್ ಗಳಿಸಿದ್ದಾಗ ಶುಭ್ ಮನ್ ಗಿಲ್ 13 ರನ್ ಗಳಿಸಿ ನಿರ್ಗಮಿಸಿದರು. ಈ ಹಂತದಲ್ಲಿ ಜತೆಗೂಡಿದ ತ್ರಿಪಾಠಿ ಮತ್ತು ಅಯ್ಯರ್ ಕೆಕೆಆರ್ ಬೌಲಿಂಗ್ ದಾಳಿಯನ್ನು ದೂಳಿಪಟ ಮಾಡಿದರು. ಅಯ್ಯರ್ 30 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್ ಗಳ ನೆರವಿನಿಂದ 53 ರನ್ ಗಳಿಸಿದರು.
ಇಯಾನ್ ಮೋರ್ಗನ್ ಏಳು ರನ್ ಗಳಿಸಿ ನಿರ್ಗಮಿಸಿದರು. ರಾಹುಲ್ ತ್ರಿಪಾಠಿ 42 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ಮೂರು ಸಿಕ್ಸರ್ ಬಾರಿಸಿ ಅಜೇಯ 74 ರನ್ ಗಳಿಸಿದರು. ನಿತೀಶ್ ರಾಣಾ 5 ರನ್ ಗಳಿಸಿ ಅಜೇಯ ರಾಗುಳಿದರು. ಅಂತಿಮವಾಗಿ ಕೆಕೆಅರ್ 15.1 ಓವರ್ ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು 159 ರನ್ ಗಳಿಸಿ ಗೆಲುವು ಸಾಧಿಸಿತು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಆರು ವಿಕೆಟ್ ಕಳೆದುಕೊಂಡು 155 ರನ್ ಗಳಿಸಿತು.
ಕ್ವಿಂಟನ್ ಡಿ ಕಾಕ್ 55 ರನ್ ಗಳಿಸಿ ತಂಡದ ಮೊತ್ತವನ್ನು 150 ರ ಗಡಿ ದಾಟಿಸಲು ಪ್ರಮುಖ ಪಾತ್ರ ವಹಿಸಿದರು.
ನಾಯಕ‌ ರೋಹಿತ್ ಶರ್ಮಾ 33 ರನ್ ಗಳಿಸಿದರೆ, ಕೀರನ್ ಪೋಲಾರ್ಡ್ ಉಪಯುಕ್ತ 21 ರನ್ ಗಳಿಸಿದರು.

ಇಂಡಿಯನ್ ಪ್ರೀಮಿಯರ್ ಲೀಗ್ ನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ವಿನೂತನ ದಾಖಲೆ ಬರೆದ ಕೀರ್ತಿಗೆ ಭಾಜನರಾಗಿದ್ದಾರೆ.
ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ 1,000 ರನ್ ಗಳಿಸಿದ ದಾಖಲೆಗೆ ಆಕ್ರಮಣಕಾರಿ ಆಟಗಾರ ಎನಿಸಿದ್ದಾರೆ ರೋಹಿತ್ ಶರ್ಮಾ.

ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ತಂಡವೊಂದರ ವಿರುದ್ಧ 1,000 ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಆಗಿ‌ ಹೊರಹೊಮ್ಮಿದ್ದಾರೆ.ಅಬುಧಾಬಿಯಲ್ಲಿ ಕೆಕೆಆರ್ ವಿರುದ್ಧ ನಡೆದ ಪಂದ್ಯದಲ್ಲಿ ರೋಹಿತ್ ಈ ಸಾಧನೆ ಮಾಡಿದ್ದಾರೆ.