ತ್ರಿಜಲ ಸಂಗಮ’ ಪ್ರಶಸ್ತಿ ಸ್ವೀಕರಿಸಿದ ಎಂ.ಪಿ.ಲತಾ ಮಲ್ಲಿಕಾರ್ಜುನ್


ಹರಪನಹಳ್ಳಿ.ಡಿ.೧;  ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಸ್ಪೇಸ್ ಮೀಡಿಯಾ ಸಂಸ್ಥೆವತಿಯಿಂದ ಈಚೆಗೆ ನಡೆದ ಮರಳಿ ಸಂಸ್ಕೃತಿ-3ರ ನಿಮ್ಮ ನಡಿಗೆ ಸಾಂಸ್ಕೃತಿಕ ಕಡೆಗೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಎಂ.ಪಿ.ಲತಾ ಮಲ್ಲಿಕಾರ್ಜುನ್ ಅವರು ‘ತ್ರಿಜಲ ಸಂಗಮ’ ಪ್ರಶಸ್ತಿ ಸ್ವೀಕರಿಸಿದ್ದಾರೆ. ಉಪ್ಪಾರ ಭಗೀರಥ ಪೀಠದ ಶ್ರೀಗಳು, ಆದಿಚುಂಚನಗಿರಿ ಶ್ರೀಗಳ ಪರವಾಗಿ ಭಾಗವಹಿಸಿದ್ದ ಹಾಸನ ಮತ್ತು ರಾಮನಗರ ಪೀಠದ ಶ್ರೀಗಳ ಸಾನಿಧ್ಯದಲ್ಲಿ ಸಾಮಾಜಿಕವಾಗಿ, ಸಾಂಸ್ಕ್ರಿತಿಕವಾಗಿ, ಧಾರ್ಮಿಕವಾಗಿ, ದೇಶ, ನಾಡು-ನುಡಿ ಜನರ ಅಭಿವೃದ್ಧಿಗಾಗಿ ಅವಿರತ ಶ್ರಮಿಸುತ್ತಿರುವ 15 ಜನ ಸಾಧಕರಿಗೆ 2020-21ನೇ ಸಾಲಿನ ತ್ರಿಜಲ ಸಂಗಮ ಪ್ರಶಸ್ತಿ ನೀಡಿ ಗೌರವಿಸಲಾಗಿದ್ದು, ಮಾಜಿ ಉಪಮುಖ್ಯಮಂತ್ರಿ ದಿ.ಎಂ.ಪಿ.ಪ್ರಕಾಶ್ ಅವರ ಹಿರಿಯ ಪುತ್ರಿ, ಹರಪನಹಳ್ಳಿ ಮಾಜಿ ಶಾಸಕ ದಿ.ಎಂ.ರವೀAದ್ರ ಅವರ ಹಿರಿಯ ಸಹೋದರಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಅವರು ಹರಪನಹಳ್ಳಿ ಕ್ಷೇತ್ರದಲ್ಲಿ ಕೈಗೊಂಡ ಸಾಮಾಜಿಕ ಕಾರ್ಯಗಳನ್ನು ಗುರುತಿಸಿ ಅವರಿಗೆ ‘ತ್ರಿಜಲ ಸಂಗಮ’ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಮಾಜಿ ಸಚಿವ ಯು.ಟಿ.ಖಾದರ್,ಯಲಹಂಕ ಶಾಸಕ ವಿಶ್ವನಾಥ್ ಅವರ ಪತ್ನಿ, ಜಿಲ್ಲಾ ಪಂಚಾಯತಿ ಸದಸ್ಯೆ ಡಾ.ವಾಣಿ, ಡಿ.ಎಸ್.ಮ್ಯಾಕ್ಸ್ ಡೆವಲಪರ್ ದಯಾನಂದ್ ಸೇರಿದಂತೆ ಅನೇಕ ಸಾಧಕರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಾರ್ಯಕ್ರಮದಲ್ಲಿ ಉಪ್ಪಾರ ಭಗೀರಥ ಪೀಠದ ಶ್ರೀಗಳು, ಆದಿಚುಂಚನಗಿರಿ ಶ್ರೀಗಳ ಪರವಾಗಿ ಹಾಸನ ಮತ್ತು ರಾಮನಗರ ಪೀಠದ ಶ್ರೀಗಳು ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಧರ್ಮಸ್ಥಳದ ವೀರೇಂದ್ರ ಹೆಗಡೆಯವರ ಸಹೋದರ ಸುರೇಂದ್ರ ಕುಮಾರ್, ವಿಜ್ಞಾನಿ ಕೆ.ಪಿ.ಜೆ.ರೆಡ್ಡಿ ಅವರು ಮಾತನಾಡಿದರು. 
ಕಳೆದ ಎರಡು ವರ್ಷಗಳಿಂದ ಹರಪನಹಳ್ಳಿ ಕ್ಷೇತ್ರದಲ್ಲಿ ಸಹೋದರ ಎಂ.ಪಿ.ರವೀAದ್ರ ಅವರ ಸಮಾಜಮುಖಿ ಕಾರ್ಯಗಳನ್ನು ಮುಂದುವರೆಸಿಕೊAಡು ಹೋಗುವುದರ ಜೊತೆಗೆ ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಬಡಜನರಿಗೆ ನೆರವಾಗಿದ್ದೇನೆ. ಆಹಾರ ಕಿಟ್ ವಿತರಣೆ, ಮಾಸ್ಕ್ ವಿತರಣೆ ಸೇರಿದಂತೆ ಹಲವು ವರ್ಗದ ಜನರಿಗೆ ಅರ್ಥಿಕ ನೆರವು ಕಲ್ಪಿಸುವ ಮೂಲಕ ಅವರ ಕಷ್ಟದಲ್ಲಿ ಭಾಗಿಯಾಗಿದ್ದೇನೆ. ಚಳಗೇರೆ ಮಠದಿಂದ ‘ಸಮಾಜ ಸೇವಾಸಿರಿ’, ಮಾನಿಹಳ್ಳಿ ಮಠದಿಂದ ‘ಪ್ರಜಾ ಸಿರಿ’, ಇದೀಗ ‘ತ್ರಿಜಲ ಸಂಗಮ’ ಪ್ರಶಸ್ತಿಗಳನ್ನು ಸ್ವೀಕರಿಸುತ್ತಿರುವುದು ಇನ್ನಷ್ಟು ಜವಾಬ್ಬಾರಿ ಹೆಚ್ಚಿಸಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಎಂ.ಪಿ.ಲತಾ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.