ತ್ರಿಚಕ್ರ ವಾಹನ ವಿತರಣೆ

ಗದಗ, ಮಾ 28 : ನಗರದ ಜಿಲ್ಲಾಡಳಿತ ಭವನದ ಅವರಣದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ ಅವರು ವಿಕಲಚೇತನರ ಯಂತ್ರಚಾಲಿತ ತ್ರಿಚಕ್ರ ವಾಹನವನ್ನು ವಿತರಿಸಿದರು. ನಂತರ ಅವರು ಮಾತನಾಡಿ ವಿಕಲಚೇತನರ ಯಂತ್ರಚಾಲಿತ ತ್ರಿಚಕ್ರವಾಹನವನ್ನು ವಿಕಲಚೇತನರು ಸ್ವಾವಲಂಬಿ ಜೀವನ ನಡೆಸಲು ಉದ್ಯೋಗಕ್ಕಾಗಿ ಹಾಗೂ ಉನ್ನತ ಶಿಕ್ಷಣಕ್ಕಾಗಿ ಸದುಪಯೋಗ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.

     ಕರ್ನಾಟಕ ಶಾಸಕರ ಸ್ಥಳಿಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದಡಿ ಗದಗ ಜಿಲ್ಲೆಯ ಇಬ್ಬರು ವಿಕಲಚೇತನ ಫಲಾನುಭವಿಗಳಾದ ಕು.ರಾಜೇಶ್ವರಿ ವಿ ಜ್ಞಾನೋಪಂತರ ಸಾ. ಲಿಂಗದಾಳ ಹಾಗೂ  ಶಿವರಡ್ಡಿ ಜಗನ್ನಾಥ ಮೂಲಿಮನಿ ಸಾ. ಬಿಂಕದಕಟ್ಟಿ ಇವರಿಗೆ ವಿಕಲಚೇತನರ ಯಂತ್ರಚಾಲಿತ ತ್ರಿಚಕ್ರವಾಹನಗಳನ್ನು ವಿತರಿಸಲಾಯಿತು.  
   ಈ ಸಂದರ್ಭದಲ್ಲಿ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಕೆ. ಮಹಾಂತೇಶ, ಮುತ್ತಣ್ಣ ಲಿಂಗನಗೌಡ್ರ, ವಸಂತ ಮೇಟಿ,  ಗದಗ ತಾಲೂಕಾ ಎಂ.ಆರ್. ಡಬ್ಲ್ಯು, ಇಲಾಖೆಯ ಸಿಬ್ಬಂದಿ ಸೇರಿದಂತೆ ಮತ್ತಿತರರು ಹಾಜರಿದ್ದರು.