ತ್ಯಾವನಹಳ್ಳಿಗೆ ಶುದ್ದ ನೀರಿನ ಘಟಕ- ವರ್ತೂರು

ಕೋಲಾರ,ಜ,೧೨- ಈ ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲದೆ ನಾಲ್ಕು ವರ್ಷಗಳಿಂದ ನರಕ ಯಾತನೆ ಅನುಭವಿಸುತ್ತಿದ್ದೀರಾ ನಾನು ಬಂದ ಹೋದ ಮಾತ್ರಕ್ಕೆ ನಿಮ್ಮ ಗ್ರಾಮಕ್ಕೆ ರಸ್ತೆ ಉದ್ಘಾಟನೆಯಾಗಿದೆ ಎಂದು ಮಾಜಿ ಸಚಿವ ಆರ್.ವರ್ತೂರ್ ಪ್ರಕಾಶ್ ತಿಳಿಸಿದರು
ತಾಲೂಕಿನ ತ್ಯಾವನಹಳ್ಳಿ ಗ್ರಾಮದಲ್ಲಿ ಕುಂದು ಕೊರತೆ ಸಭೆ ಆಯೋಜಿಸಿ ಅವರು ಮಾತನಾಡಿ ಇನ್ನು ಒಂದರಿಂದ ಎರಡು ತಿಂಗಳಲ್ಲಿ ನಿಮ್ಮ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಸಿಸಿ ರಸ್ತೆಗಳನ್ನು ಕೇಳಿದ್ದೀರಾ ಅವುಗಳನ್ನು ಮಾಡಿಕೊಡುತ್ತೇನೆ ಶೀಘ್ರದಲ್ಲೇ ಇನ್ನು ಒಂದು ತಿಂಗಳಲ್ಲಿ ಶುದ್ಧ ನೀರಿನ ಘಟಕ ಉದ್ಘಾಟಿಸಿ ನಿಮ್ಮ ಬಳಿ ಮತ ಕೇಳುತ್ತೇನೆ ಎಂದರು,
ನಾನು ಗ್ರಾಮವನ್ನು ಅಭಿವೃದ್ಧಿಪಡಿಸುತ್ತೇನೆ ನನಗೆ ಮತ ಕೊಡಿ ಎಂದು ಕೇಳುವನಲ್ಲ ನಿಮ್ಮ ಗ್ರಾಮವನ್ನು ಅಭಿವೃದ್ಧಿಪಡಿಸಿ ಮತ ಕೇಳುವನು ನಾನು ನಿಮ್ಮ ಗ್ರಾಮಕ್ಕೆ ಇಂದು ಬಂದಿರುವುದು ಗ್ರಾಮದಲ್ಲಿರುವ ಕುಂದು ಕೊರತೆಗಳನ್ನ ಕಣ್ಣಾರೆ ಕಂಡು ನಿಮ್ಮ ಕಷ್ಟ ಸುಖಗಳಲ್ಲಿ ಭಾಗಿಯಾಗುವುದಕ್ಕೆ ಬಂದಿದ್ದೇನೆ ಎಂದು ಹೇಳಿದರು.
ನಿಮ್ಮ ಗ್ರಾಮಕ್ಕೆ ನಾನು ಶಾಸಕನಿದ್ದ ವೇಳೆ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ನಾನು ಸೋತ ನಂತರ ನಿಮ್ಮ ಗ್ರಾಮದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳು ಆಗಿಲ್ಲ ಶಾಸಕರಿಗೆ ನಿಮ್ಮೂರಿನ ರಸ್ತೆಯು ಗೊತ್ತಿಲ್ಲ ನಿಮ್ಮೂರಿನ ಹೆಸರೇ ಗೊತ್ತಿಲ್ಲ ಅಂತವರಿಗೆ ನಿಮ್ಮ ಗ್ರಾಮದಲ್ಲಿ ಮತ ಕೊಟ್ಟಿದ್ದೀರಾ ಎಂದು ಬೇಸರ ವ್ಯಕ್ತ ಪಡೆಸಿದರು,
ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮಸ್ಥರು ಇನ್ನು ಮುಂದೆ ಬೇರೆ ಪಕ್ಷಕ್ಕೆ ಮತ ನೀಡಿದರೆ ಚೌಡೇಶ್ವರಿ ದೇವಿ ನಮಗೆ ಶಿಕ್ಷೆ ನೀಡಲಿ ಎಂದು ಪ್ರಮಾಣ ಮಾಡಿ ಮುಂದೆ ಬರಲಿರುವ ಚುನಾವಣೆಯಲ್ಲಿ ನಮ್ಮ ಗ್ರಾಮದಿಂದ ನಾಲಕ್ಕನೂರು ಹೆಚ್ಚು ಮತಗಳನ್ನು ನೀಡುತ್ತೇವೆ ಎಂದು ಶಪಥ ಮಾಡಿದರು
ಈ ಸಂದರ್ಭದಲ್ಲಿ ಬಿಗ್ಲಿ ಸೂರ್ಯ ಪ್ರಕಾಶ್. ಬಂಕ್ ಮಂಜುನಾಥ್. ಗ್ರಾಮದ ಹಿರಿಯ ಮುಖಂಡರಾದ ನಾರಾಯಣಪ್ಪ. ಗ್ರಾಮ ಪಂಚಾಯತಿ ಸದಸ್ಯ ಮುನಿರಾಜ್ ಹಾಗೂ ಉಪಸ್ಥಿತರಿದ್ದರು