ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಲೋಕಾಯುಕ್ತ ಎಸ್‍ಪಿ ದಿಢೀರ್ ಭೇಟಿ

ಕಲಬುರಗಿ,ಜೂ.11-ಇತ್ತೀಚೆಗೆ ಭಾರೀ ಬಿರುಗಾಳಿಗೆ ಮುರಿದು ಬಿದ್ದ ನಗರ ಹೊರವಲಯದ ಉದನೂರು ಸಮೀಪದಲ್ಲಿರುವ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಲೋಕಾಯುಕ್ತ ಎಸ್.ಪಿ.ಜಾನ್ ಆಂಟೋನಿ ಅವರು ದಿಢೀರನೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಿರುಗಾಳಿ ಜೋರಾಗಿ ಬಿಸಿದ ಪರಿಣಾಮ ಮುಂದೆ ಕಸದ ಗುಡ್ಡೆ ಇದ್ದ ಕಾರಣ ಗಾಳಿ ಅಲ್ಲಿಂದ ಸಾಗದೆ ಹಿಂದೆ ಒತ್ತಡ ಹೆಚ್ಚಿದ್ದರಿಂದ ತ್ಯಾಜ್ಯ ಸಂಸ್ಕರಣ ಘಟಕದ ಕಂಬಗಳು ಮುರಿದು ಘಟಕ ಕುಸಿದಿದೆ ಎಂದು ಮಹಾನಗರ ಪಾಲಿಕೆ ಅಧಿಕಾರಿ ಆರ್.ಪಿ.ಜಾಧವ್ ಅವರು ಲೋಕಾಯುಕ್ತ ಎಸ್.ಪಿ.ಅವರಿಗೆ ಮಾಹಿತಿ ನೀಡಿದರು.
ಪಿಐ ರಾಜಶೇಖರ ಹಳಿಗೋಧಿ, ಪಾಲಿಕೆ ಅಧಿಕಾರಿ ಆರ್.ಪಿ.ಜಾಧವ್, ಸಿದ್ದರಾಮ, ಯಮನೂರಪ್ಪ, ಬಸವರಾಜ ಗರಗಪಳ್ಳಿ, ಶರಣು ಮತ್ತು ಪೊಲೀಸ್ ಸಿಬ್ಬಂದಿಗಳು ಇದ್ದರು.