ತ್ಯಾಜ್ಯ ಸಂಗ್ರಹ ಕೇಂದ್ರ ಉದ್ಘಾಟನೆ

ಇಂಡಿ:ಮೇ.22:ಪುರಸಭೆ ವತಿಯಿಂದ ನನ್ನ ಜೀವನ ನನ್ನ ಸ್ವಚ್ಚ ನಗರ ಕಾರ್ಯಕ್ರಮ ಹಮ್ಮಿಕೊಂಡಿದ್ದು,ಪಟ್ಟಣದ ನಾಗರಿಕರು ತ್ಯಾಜ್ಯ ನಿರ್ವಹಣೆ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಪುರಸಭೆಯೊಂದಿಗೆ ಕೈಜೊಡಿಸಬೇಕು.ತ್ಯಾಜ್ಯಾದ ಪ್ರಮಾಣ ಕಡಿಮೆ ಮಾಡುವುದು,ತ್ಯಾಜ್ಯದ ಮರುಬಳಕೆ,ತ್ಯಾಜ್ಯದ ಮರು ಉಪಯೋಗ ಆರ್‍ಆರ್‍ಆರ್ ಅಂದೋಲನದ ಮುಖ್ಯ ಉದ್ದೇಶವಾಗಿದ್ದು, ಸಾರ್ವಜನಿಕರು ಪುರಸಭೆಯಿಂದ ಸ್ಥಾಪಿಸಲಾಗಿರುವ ಆರ್‍ಆರ್‍ಆರ್ ಕೇಂದ್ರದಲ್ಲಿ ತ್ಯಾಜ್ಯವನ್ನು ನೀಡಿ ಸ್ವಚ್ಚ ನಗರವಾಗಲು ಸಹಕಾರಿಸಬೇಕು ಎಂದು ಪುರಸಭೆ ಮುಖ್ಯಾ„ಕಾರಿ ಲಕ್ಷ್ಮೀಶ ಹೇಳಿದರು.

ಅವರು ಶನಿವಾರ ಪಟ್ಟಣದಲ್ಲಿ ಪುರಸಭೆ ವತಿಯಿಂದ ನನ್ನ ಜೀವನ ನನ್ನ ಸ್ವಚ್ಚ ನಗರ ಕಾರ್ಯಕ್ರಮ ಕುರಿತು ಹಮ್ಮಿಕೊಂಡ ಆರ್‍ಆರ್‍ಆರ್ ಅಂದೋಲನದ ಆರ್‍ಆರ್‍ಆರ್ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

ತ್ಯಾಜ್ಯದ ಸಾಮಗ್ರಿಗಳನ್ನು ಸಂಗ್ರಹಿಸಿಲು ಪುರಸಭೆ ವತಿಯಿಂದ ಆರ್‍ಆರ್‍ಆರ್ ಕೇಂದ್ರವನ್ನು ಪುರಸಭೆಯ ಕಾರ್ಯಾಲಯದ ಆವರಣ,ಶ್ರೀ ಜಗಜ್ಯೋತಿ ಬಸವೇಶ್ವರ ಮಂಗಲ ಕಾರ್ಯಾಲಯದಲ್ಲಿ ತೆರೆಯಲಾಗಿದ್ದು,ಪಟ್ಟಣದ ನಾಗರಿಕರು ,ಸಾರ್ವಜನಿಕರು,ಸಂಘ,ಸಂಸ್ಥೆಗಳು ಲೇಖನ ಸಾಮಗ್ರಿ,ಬಟ್ಟೆ ಚೀಲ,ಎಲೆಕ್ಟ್ರೀಕಲ್ ವಸ್ತುಗಳು,ಉಪಯೋಗಿಸಿದ ಪ್ಲಾಸ್ಟೀಕ್ ಸಾಮಗ್ರಿಗಳು,ಪ್ಲಾಸ್ಟೀಕ್ ಕ್ಯಾರಿಬ್ಯಾಗ್,ಬಟ್ಟೆಗಳು,ಹಳೇ ಜೀನ್ಸ,ಯುನಿಫಾರಂ ಸೀರೆಗಳು,ಹಳೆ ಬಟ್ಟೆಗಳು,ಚಪ್ಪಲಿ,ಶೂಗಳು,ನ್ಯೂಸ್ ಪೇಪರ,ಹಳೆ ಪುಸ್ತಕಗಳು ಕೇಂದ್ರಗಳಿಗೆ ನೀಡಿದರೆ ಡಿಜಿಟಲ್ ಪ್ರಮಾಣ ಪತ್ರ ನೀಡಲಾಗುತ್ತದೆ.ಈ ಕಾರ್ಯಕ್ರಮದ ಅಂದೋಲನ ಮೇ.20 ರಿಂದ ಜೂನ್ 5 ವರೆಗೆ ಇದ್ದು, ಸಾರ್ವಜನಿಕರು ತ್ಯಾಜ್ಯ ವಸ್ತುಗಳನ್ನು ಕೇಂದ್ರಗಳಲ್ಲಿ ನೀಡಬೇಕು ಎಂದು ಹೇಳಿದರು.

ಕಿರಿಯ ಆರೋಗ್ಯ ನಿರೀಕ್ಷಕ ಎಲ್.ಎಸ್.ಸೋಮನಾಯಕ,ಚಂದು ಕಾಲೇಬಾಗ,ಶ್ರೀಶೈಲ ಹಾದಿಮನಿ,ಎಸ್.ಎಸ್.ಗುಗದಡಿ,ವೈ.ಎಸ್.ಸಿಂಗೆ ಸೇರಿದಂತೆ ಪೌರಕಾರ್ಮಿಕರು ಈ ಸಂದರ್ಭದಲ್ಲಿ ಇದ್ದರು.