ತ್ಯಾಜ್ಯ ನಿರ್ವಹಣೆ ವಸತಿಯುತ ತರಬೇತಿ

ಬಾಗಲಕೋಟೆ, ನ. ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ, ಬೆಂಗಳೂರು, ಗ್ರಾಮೀಣ ಪರಿಸರ ಸಮುದಾಯ ಜಾಗೃತಿ ಸಂಸ್ಥೆ (ರೀಚ್) ಬಾಗಲಕೋಟೆ ಹಾಗೂ ಜಿಲ್ಲಾ ಪಂಚಾಯತಿ, ಬಾಗಲಕೋಟೆ ಇವರ ಸಂಯುಕ್ತಾಶ್ರಯದಲ್ಲಿ ಗ್ರಾಮ ಪಂಚಾಯತ ಸಂಜೀವಿನಿ ಒಕ್ಕೂಟದ ಮಹಿಳೆಯರಿಗಾಗಿ ಘನ ತ್ಯಾಜ್ಯ ನಿರ್ವಹಣೆಯ ಕುರಿತು 5 ದಿನದ ವಸತಿಯುತ ತರಬೇತಿ ಕಾರ್ಯಗಾರವನ್ನು ದಿ.8 ರಿಂದ 12 ರವರೆಗೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿಧ್ಯಾಲಯಯಲ್ಲಿ ಹಮ್ಮಿಕೊಳ್ಳಲಾಗಿದೆ.

ಪ್ರಾಸ್ತಾವಿಕವಾಗಿ ಕಾರ್ಯಗಾರದ ಕುರಿತು ಜಿ.ಎನ್.ಸಿಂಹ, ನಿರ್ದೇಶಕರು, ರೀಚ್ ಸಂಸ್ಥೆ ಇವರು ಮಾತನಾಡುತ್ತಾ ರೀಚ್ ಸಂಸ್ಥೆಯ ಕಿರು ಪರಿಚಯದ ಜೊತೆಗೆ ಮಹಿಳೆಯರಿಗೆ ಘನ ತ್ಯಾಜ್ಯದ ನಿರ್ವಹಣೆ ಮತ್ತು ಪರಿಸರ ಸಂರಕ್ಷಣೆಯ ಕುರಿತು ತಿಳಿಸುತ್ತಾ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು ಅದನ್ನು ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಿದೆ. ಇಂದು ಮಾನವ ಎಲ್ಲಾ ರಂಗದಲ್ಲಿ ಪರಿಸರವನ್ನು ಮಲೀನ ಮಾಡುತ್ತಾ ಬಂದಿದ್ದು. ಪರಿಸರದ ಮೇಲೆ ನಿರಂತರವಾಗಿ ದಬ್ಬಾಳಿಕೆ ಮಾಡುತ್ತಾ ಬರುತ್ತಿದ್ದು ಅದನ್ನು ತಡೆಗಟ್ಟುವುದು ಎಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳು : ಡಾ|| ಶಶಿಕುಮಾರ ಎಸ್, ಪ್ರಾಧ್ಯಾಪಕರು, ಕೃಷಿ ವಿಸ್ತರಣೆ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿಧ್ಯಾಲಯ ಇವರು ಘನತ್ಯಾಜ್ಯ ನಿರ್ವಹಣೆ 5 ದಿನದಲ್ಲಿ ಮುಗಿಯುವ ತರಬೇತಿಯಲ್ಲಿ ಈ ತರಬೇತಿಗೆ 10 ದಿನವಾದರೂ ಸಾಕಾಗುವುದಿಲ್ಲ ಆದರೂ ಕೂಡ 5 ದಿನದಲ್ಲಿ ನಮ್ಮ ಕೃಷಿ ವಿಶ್ವವಿದ್ಯಾಲಯದಲ್ಲಿ ಕೂಡ ಹಲವಾರು ರೀತಿಯ ಸಾವಯವ ಗೊಬ್ಬರಗಳ ತಯಾರಿಕೆ ಬಗ್ಗೆ ಮಾಹಿತಿ ಸಿಗುತ್ತದೆ ಮತ್ತು ಎರೆಹುಳು ಗೊಬ್ಬರ ಯಾವ ತರಹ ತಯಾರಿ ಮಾಡಬೇಕು ಅದರ ಲಾಭ ಮಹತ್ವದ ಬಗ್ಗೆ ಪೂರ್ಣವಾಗಿ ನಮ್ಮ ನಮ್ಮ ವಿಜ್ಞಾನಿಗಳ ನಿಮಗೆ ಮಾಹಿತಿಯನ್ನು ಕೊಡುತ್ತಾರೆ ಒಟ್ಟಾರೆ 5 ದಿನ ಮಹಿಳೆಯರು ಸಂಪೂರ್ಣವಾದ ಮಾಹಿತಿಯನ್ನು ತೆಗೆದುಕೊಂಡು ತಮ್ಮ ಗ್ರಾಮದಲ್ಲಿ ಹೋಗಿ ನಾಲ್ಕು ಜನರಿಗೆ ಹೇಳುವುದರ ನೀವು ಮಾಹಿತಿಯನ್ನು ತಿಳಿದುಕೊಂಡು ನಿಮ್ಮ ಗ್ರಾಮದಲ್ಲಿ ಘನತ್ಯಾಜ್ಯ ನಿರ್ವಹಣೆ ಘಟಕವನ್ನು ನಿರ್ಮಾಣ ಮಾಡಿಕೊಂಡು ನೀವೇ ಸಂಘದ ಮಹಿಳೆ ಘಟಕವನ್ನು ನಿರ್ವಹಿಸಿಕೊಂಡು ಹೋದರೆ ಆರ್ಥಿಕವಾಗಿ ಸಬಲರಾಗಲು ಕಂಡಿತ ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಎಸ್.ಜೆ.ಎಸ್.ವೈ ಯೊಜನೆ ಯಿಂದ ಹಿಡಿದು ಎನ್.,ಆರ್.ಎಲ್.ಎಮ್ ರವರೆಗೂ ಸ್ವ ಸಹಾಯ ಸಂಘಗಳ ಆದಾಯ ಉತ್ಪನ್ನಗಳ ಕುರಿತು ವಿವಿರಿಸುತ್ತಾ ಈ ಹೈನುಗಾರಿಕೆ ಅಭಿವೃದ್ದಿ ಯಿಂದ ಹಾಲಿನಿಂದ ಮಾತ್ರ ಆಲ್ಲ ಸಗಣಿ ಬಿಸಾಕುವ ಕಸ ಎಲ್ಲವೂ ಆದಾಯ ತರವಂತಹದ್ದು ಎಂದು ತಿಳಿಸಿದರು.

ವೇದಿಕೆಯಲ್ಲಿ ಡಾ|| ಶ್ರೀಪಾದ ವಿಶ್ವೇಶ್ವರಯ್ಯ, ನೀಲಮ್ಮ ಮೋತಿ ಇದ್ದರು. ನಿರೂಪಣೆ ರೇಖಾ ಬಡಿಗೇರ ವಂದನೆಗಳನ್ನು ಬಸವರಾಜ ಚಳಗೇರಿ ಮಾಡಿದರು.