ತ್ಯಾಜ್ಯ ಆಹಾರ ತಿಂದು ೭ ಹಸುಗಳು ಸಾವು

ರಾಯಚೂರು,ಮಾ.೧೬- ಬಿಜೆಪಿಯ ವಿಜಯಸಂಕಲ್ಪ ಯಾತ್ರೆಯ ತ್ಯಾಜ್ಯ ಆಹಾರ ಸೇವಿಸಿ ೭ಕ್ಕೂ ಹೆಚ್ಚು ಹಸುಗಳು ಸಾವಿಗಿಡಾದ ಘಟನೆ ರಾಯಚೂರು ಹೊರವಲಯದ ಗುಂಜಳ್ಳಿ ಗ್ರಾಮದಲ್ಲಿ ನಡೆದಿದೆ.
ಕಳೆದ ೧೦ನೇ ತಾರಿಕನೊಂದು ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆದಿತ್ತು, ತಿಪ್ಪರಾಜು ಹವಾಲ್ದಾರ್ ಪರ ಬಿಜೆಪಿ ನಾಯಕರು ಪ್ರಚಾರ ನಡೆಸಿದ್ದರು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿ ಶ್ರೀರಾಮುಲು ಸಹ ಭಾಗಿಯಾಗಿದ್ದರು ಗುಂಜಳ್ಳಿ ಗ್ರಾಮದಲ್ಲಿ ಕಾರ್ಯಕರ್ತರಿಗಾಗಿ ಭೋಜನ ವ್ಯವಸ್ಥೆ ಮಾಡಲಾಗಿತ್ತು ಸುಮಾರು ಒಂದು ಸಾವಿರಕ್ಕಿಂತ ಹೆಚ್ಚಿನ ಕಾರ್ಯಕರ್ತರಿಗೆ ಭೋಜನ ನೀಡಲಾಗಿದ್ದು ಕಾರ್ಯಕರ್ತರ ಭೋಜನ ಬಳಿಕ ಉಳಿದ ಆಹಾರ ಒಂದೆಡೆ ರಾಶಿ ಹಾಕಲಾಗಿತ್ತು.
ಈ ತ್ಯಾಜ್ಯ ಆಹಾರ ತಿಂದು ೭ ಹಸುಗಳು ಸಾವಿಗೀಡಾಗಿದ್ದು, ಇನ್ನೂ ಎಂಟು ಹಸುಗಳು ಅಸ್ವಸ್ಥಗೊಂಡಿವೆ, ಹೊಟ್ಟೆ ಹುಬ್ಬರಿಸಿಕೊಂಡು ಸರಣಿಯಾಗಿ ಸವನ್ನಪ್ಪಿವೆ,ಈ ಹಸುಗಳ ಮಾಲೀಕರು ಯಾತ್ರೆ ಆಯೋಜಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ,ಇಷ್ಟಾದ್ರೂ ಬಿಜೆಪಿ ನಾಯಕರು ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಿಲ್ಲ, ಇನ್ನೊಂದಡೆ ಪಶುವೈದ್ಯಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡದೆ ನಿರ್ಲಕ್ಷತನ ವಹಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.