ತ್ಯಾಗ ಮತ್ತು ಸೇವೆ ದೇಶದ ಅವಳಿ ಆದರ್ಶಗಳು:ಸಂತೋಷ ಬಂಡೆ

ಇಂಡಿ:ಜ.13:ಶಿಕ್ಷಣವೆಂದರೆ ‘ಮಾನವೀಯತೆಯ ವಿಕಾಸ, ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ. ಮನುಷ್ಯನ ವ್ಯಕ್ತಿತ್ವ ಶಿಕ್ಷಣದಿಂದ ಬಯಲಿಗೆ ಬರುತ್ತದೆ ಎಂದು ಹೇಳುತ್ತಿದ್ದ ವಿವೇಕಾನಂದರು ‘ಭಾರತದ ಎಲ್ಲ ಸಮಸ್ಯೆಗಳಿಗೂ ಶಿಕ್ಷಣ ಒಂದೇ ಪರಿಹಾರ’ ಎಂದು ನಂಬಿದ್ದ ವಿವೇಕಾನಂದರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ಇಂದು ತಾಲೂಕಿನ ನಾದ ಕೆ ಡಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಜರುಗಿದ ರಾಷ್ಟ್ರೀಯ ಯುವ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಸ್ವಾಮಿ ವಿವೇಕಾನಂದರು ಆಧುನಿಕ ವಿಚಾರಶಕ್ತಿಯುಳ್ಳ ವಿಶೇಷ ವ್ಯಕ್ತಿ.ಜ್ಞಾನದ ಅನ್ವೆ?ಷಣೆ ಮತ್ತು ಜೀವನದ ಉದ್ದೆ?ಶವನ್ನು ಕಂಡುಕೊಳ್ಳುವ ಕುತೂಹಲವೇ ಅವರನ್ನು ಚಿಂತನಾಶೀಲರನ್ನಾಗಿಸಿತು ಎಂದು ಹೇಳಿದರು.
ಮುಖ್ಯಶಿಕ್ಷಕ ಸಿ ಎಂ ಬಂಡಗರ ಅಧ್ಯಕ್ಷತೆ ವಹಿಸಿ ಮಾತನಾಡಿ,ದೃಢ ಮನಸ್ಸಿನ, ನಿರ್ಣಾಯಕ ಶಕ್ತಿ ಇರುವ, ಏಕಮಾತ್ರ ಗುರಿ ಇರುವ ವ್ಯಕ್ತಿಯ ಶಕ್ತಿಯನ್ನು ಯುವಜನರಿಗೆ ತೋರಿಸಲು ವಿವೇಕಾನಂದರು ನಿರಂತರವಾಗಿ ಶ್ರಮಿಸುತ್ತಿದ್ದರು. ಅವರ ಪೆÇ್ರ?ತ್ಸಾಹಕ ನುಡಿಗಳು ಎಂದೆಂದಿಗೂ ಸಾಂತ್ವನ ಮತ್ತು ಶಕ್ತಿಯನ್ನು ನೀಡುತ್ತವೆ ಎಂದು ಹೇಳಿದರು.
ಶಿಕ್ಷಣ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕು. ಅದು ಧೈರ್ಯ ತುಂಬುವಂತೆ ಇರಬೇಕು. ಜೀವನದ ಗಹನ ಸವಾಲುಗಳನ್ನು ಎದುರಿಸಬಲ್ಲ ಶಕ್ತಿಯಾಗಬೇಕು. ಶಿಕ್ಷಣ ಹೆದರಿಕೆಯನ್ನು ತೊಲಗಿಸಬೇಕು.ಇವು ವಿವೇಕಾನಂದರ ಕನಸುಗಳಾಗಿದ್ದವು. ಶತಶತಮಾನಗಳಿಂದಲೂ ಇಂತಹ ಶಿಕ್ಷಣದಿಂದ ವಂಚಿತರಾದವರಿಗೆ ಸುಶೀಕ್ಷಿತರು ಮಾರ್ಗದರ್ಶಿಯಾಗಬೇಕಾಗಿದೆ ಎಂದು ಹೇಳಿದರು.
ಆರು ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಕುರಿತು ಮಾತನಾಡಿದರು. ಶಿಕ್ಷಕರಾದ ರಾಮಚಂದ್ರ ಬಿರಾದಾರ,ಎ ಬಿ ಗೂಗದಡ್ಡಿ,ಎಸ್ ಎಸ್ ಹಚಡದ,
ಎಂ ವೈ ಬಿರಾದಾರ, ಸಂತೋಷ ಬಿರಾದಾರ,ಅನಿತಾ,
ಶಿವಾನಂದ ಸಂದಿಮನಿ,ಆಂಜನೇಯ ಸ್ವಾಮಿ,
ಮದರಶಾ ಮಕಾನದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಮಕ್ಕಳು ಕಾರ್ಯಕ್ರಮ ನಿರ್ವಹಿಸಿದರು.