ತ್ಯಾಗ-ಬಲಿದಾನ ಸ್ಮರಿಸುವ ದಿನ

(ಸಂಜೆವಾಣಿ ವಾರ್ತೆ)
ಚನ್ನಮ್ಮನ ಕಿತ್ತೂರ,ಆ17: ಬೆಳಗಾವ ಜಿಲ್ಲೆ ಬೈಲಹೊಂಗಲ ತಾಲೂಕಿನ ರಾಯಣ್ಣನ ಜನ್ಮಸ್ಥಳವಾದ ಪುಣ್ಯಭೂಮಿ ಸಂಗೊಳ್ಳಿಯಲ್ಲಿ ಸ್ವಾಭಿಮಾನಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಭೀರಪ್ಪ ದೇಶನೂರ ಹಾಗೂ ಸಂಗಡಿಗರು ಧ್ವಜಾರೋಹಣ ನೆರವೇರಿಸಿ ರಾಯಣ್ಣನ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ನಂತರ ಅವರು ಮಾತನಾಡಿ ವೀರರಾಣಿ ಚನ್ನಮ್ಮನ ಬಲಗೈ ಬಂಟನಾಗಿ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಡಿದ ಅವರ ತ್ಯಾಗ-ಬಲಿದಾನ ಸ್ಮರಿಸುವ ದಿನವಿದು ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕಾದರೆ ಇಂದಿನ ಯುವಪಿಳಿಗೆಗೆ ಇವರ ಮಾರ್ಗದರ್ಶನ ಅವಶ್ಯವಿದೆ ಎಂದರು.
ಈ ವೇಳೆ ಎಸ್.ಎಂ.ಕೆ. ಪ್ರೌಢಶಾಲೆ ಅಧ್ಯಕ್ಷ ಸಿದ್ದಲಿಂಗಯ್ಯಾ ಹಿರೇಮಠ, ಸ್ವಾಭಿಮಾನಿ ರಾಜ್ಯ ರೈತ ಸಂಘದ ಅಧ್ಯಕ್ಷ ಶಿವನಸಿಂಗ ಮೊಕಾಶಿ, ಪ್ರಶಾಂತ ರಜಪೂತ, ರಮೇಶ ಪಾಟೀಲ, ಮಲ್ಲಿಕಾರ್ಜುನ ಕೊಡೊಳ್ಳಿ, ಮಲ್ಲಪ್ಪ ಪಣತಿ, ಹಿರೇಮಠ ಸೇರಿದಂತೆ ಶಾಲಾ ಮಕ್ಕಳು, ಗಣ್ಯರು, ಗ್ರಾ.ಪಂ, ಶಾಲಾ ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.