ತ್ಯಾಗ ಬಲಿದಾನದ ಸಂಕೇತ ಬಕ್ರೀದ


ಮುನವಳ್ಳಿ,ಜೂ.25: ಪಟ್ಟಣದ ಪೊಲೀಸ ಉಪಠಾಣೇಯ ಆವರಣದಲ್ಲಿ ಬಕ್ರಿದ್ ಹಬ್ಬದ ಅಂಗವಾಗಿ ಕರೆದ ಶಾಂತಿ ಸಭೆಯಲ್ಲಿ ಮುಸ್ಲಿಂ ಸಮಾಜದ ಡಾ|| ಬಸಿರಅಹಮ್ಮದ ಬೈರಕದಾರ ಮಾತನಾಡಿ ತ್ಯಾಗ ಬಲಿದಾನದ ಸಂಖೆತ ಬಕ್ರಿದ ಹಬ್ಬವಾಗಿದೆ ಹಿಂದಿನ ಕಾಲದಲ್ಲಿ ಹಿಂದು ಮುಸ್ಲಿಮ ಎಲ್ಲರು ಸೇರಿ ಎಲ್ಲ ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದಾರೆ ಅದೆ ಪರಂಪರೆ ಪಟ್ಟಣದಲ್ಲಿ ಮುಂದು ವರೆದಿದೆ ಯುವಕರು ದುಶ್ಚಟಕ್ಕೆ ದಾಸರಾಗದೆ ಹಬ್ಬ ಹರಿದಿನಗಳ ಬಗ್ಗೆ ಅರ್ಥ ಮಾಡಿಕೊಳ್ಳಬೇಕು ಎಂದರು.
ಮುಸ್ಲಿಮ ಸಮಾಜದ ಹಿರಿಯರಾದ ಗರೀಬಸಾಬ ಮಕಾಂದಾರ, ಪಂಚಪ್ಪ ಹಣಸಿ, ಪುರಸಭೆ ಸದಸ್ಯ ಪ್ರಕಾಶ ನಲವಡೆ, ಪತ್ರಕರ್ತ ಟಿ.ಎನ್.ಮುರಂಕರ, ಮಾತನಾಡಿದರು. ಅಧ್ಯಕ್ಷತೆವಹಿಸಿದ ಡಿ.ವಾಯ್.ಎಸ್.ಪಿ ರಾಮನಗೌಡ ಹಟ್ಟಿ ಮಾತನಾಡಿ ಹಿಂದು ಮುಸ್ಲಿಮ ಬಾವೈಕತೆ ಮುನವಳ್ಳಿಯಲ್ಲಿದೆ ಎಂದರು.
ಕಾರ್ಯಕ್ರಮವನ್ನು ಸಿ.ಪಿ.ಐ ಕರುಣೇಶಗೌಡ ನಿರೂಪಿಸಿದರು, ನೂತನ ಪಿ.ಎಸ್.ಐ ಆನಂದ ಸ್ವಾಗತಿಸಿ ವಂದಿಸಿದರು, ಹಿಂದು ಮುಸ್ಲಿಮ ಸಮಾಜದ ಹಿರಿಯರು, ತಂಜಿಮ ಕಮಿಟಿಯ ಸರ್ವ ಸದಸ್ಯರು, ಪುರುಸಭೆ ಸದಸ್ಯರು, ಯುವಕರು, ಪೂಲಿಸ ಸಿಬ್ಬಂದಿ ಇತರರು ಉಪಸ್ಥಿತರಿದ್ದರು.