ತ್ಯಾಗ, ಬಲಿದಾನದ ಸಂಕೇತವಾಗಿ ಆಚರಿಸುವ ಹಬ್ಬ ಬಕ್ರೀದ್

ಸಂಜೆವಾಣಿ ವಾರ್ತ
ಸಂಡೂರು: :ಜು: 30: ತ್ಯಾಗ ಮತ್ತು ಬಲಿದಾನದ ಸಂಕೇತವಾಗಿ ಆಚರಿಸುವ ಹಬ್ಬ ಇದಾಗಿದ್ದು ಪ್ರತಿಯೊಬ್ಬರೂ ಸಹ ತ್ಯಾಗ ಮಾಡುವ ಮೂಲಕ ಹಬ್ಬವನ್ನು ಆಚರಿಸೋಣ ಎಂದು ಮೊಹ್ಮದ್ ಅಜಿಂ ಧರ್ಮಗುರುಗಳು ತಿಳಿಸಿದರು.
ಅವರು ಇಂದು ಪಟ್ಟಣದ ಸುಭಾಷನಗರದಲ್ಲಿಯ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಯ ನಂತರ ಮಾತನಾಡಿ ಪ್ರವಾದಿ ಹಜರತ್ ಇಬ್ರಾಹಿಂ ಅವರ ತ್ಯಾಗ, ಬಲಿದಾನ, ಅಚಲ ದೈವಭಕ್ತಿ ಹಾಗೂ ಅವರ ಪುತ್ರ ಹಜರತ್ ಇಸ್ಮಾಯಿಲ್ ಅವರ ದೈವಭಕ್ತಿಯನ್ನು ಸಾಂಕೇತಿಕರಿಸುವ ಹಬ್ಬ ಬಕ್ರೀದ್ . ಈ ಹಬ್ಬದ ಶುಭ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ಪವಿತ್ರ ಹಜ್ ಯಾತ್ರೆಯನ್ನು ನೆರವೇರಿಸುತ್ತಾರೆ.ಉಳಿದ ದಿನಗಳಲ್ಲಿ ಪವಿತ್ರ ಮೆಕ್ಕಾ-ಮದೀನಾಗಳನ್ನು ಸಂದರ್ಶಿಸುವುದು `ಉಮರಾ’ ಎಂದು ಕರೆಯಿಸಿಕೊಂಡರೆ, ಬಕ್ರೀದ್ ಸಂದರ್ಭದಲ್ಲಿ ಈ ಪವಿತ್ರ ಕ್ಷೇತ್ರಗಳ ದರ್ಶನ ಹಜ್ ಎನಿಸಿಕೊಳ್ಳುತ್ತದೆ. ಇಸ್ಲಾಂ ಧರ್ಮದ ಐದು ಕರ್ತವ್ಯಗಳಲ್ಲಿ, ಸ್ಥಿತಿವಂತ ಮುಸ್ಲಿಂರಿಗೆ ಕಡ್ಡಾಯವಾಗಿರುವ ಐದನೇಯ ಕರ್ತವ್ಯ ಹಜ್ ಆಗಿದೆ. ಅಗಿದೆ, ಪ್ರವಾದಿ ಇಬ್ರಾಹಿಂರು ಇರಾಕ್ ದೇಶದಲ್ಲಿ ಜನಿಸಿದರು. ಅವರ ತಂದೆ ಮೂರ್ತಿಗಳನ್ನು ತಯಾರಿಸಿ ಮಾರುವ ಪ್ರಖ್ಯಾತ ಉದ್ಯೋಗಿಯಾಗಿದ್ದರು. ನಮ್ರೂದ್ ರಾಜನ ಆಸ್ಥಾನದಲ್ಲಿ ಪ್ರತಿಷ್ಟಿತ ಸ್ಥಾನ ಪಡೆದಿದ್ದರು. ತನ್ನ ಮುಂದೆಯೇ ತಯಾರಾಗುತ್ತಿದ್ದ ವಿವಿಧ ಮೂರ್ತಿಗಳನ್ನು ಕಂಡು ಇಬ್ರಾಹಿಂರು ಆಕ್ಷೇಪಿಸಿದ್ದರು, ಆಗ ತಂದೆಯು ನೀನು ನನ್ನ ನಂತರ ನನ್ನ ಈ ಸ್ವತ್ತು ಸಂಪತ್ತು, ಐಶ್ವರ್ಯಗಳ ಒಡೆಯನಾಗಲಾರೆಯೋ ಎಂದು ಪ್ರವಾದಿ ಇಬ್ರಾಹಿಂ ಅವರನ್ನು ಹೊರಗೆ ಕಳುಹಿಸುತ್ತಾರೆ. ಏಕದೇವೋಪಾಸನೆಗಾಗಿ ಸಮಸ್ತ ಐಶ್ವರ್ಯವನ್ನು ಹಜರತ್ ಇಬ್ರಾಹಿಂರು ತ್ಯಾಗ ಮಾಡುತ್ತಾರೆ, ಏಕದೇವೋಪಾಸನೆಯ ಕರೆಯನ್ನು ಮೊಳಗಿಸುತ್ತಾ ಸಾಗುತ್ತಾರೆ. ಎಂದರು.
ಈ ಸಂದರ್ಭದಲ್ಲಿ ಅಜುಂಮಾನ್ ಅಧ್ಯಕ್ಷರು ಸಿ.ಹಸೇನ್, ಮಾಜಿ ವಾಡಾ ಅಧ್ಯಕ್ಷ ರೋಷನ್ ಜಮೀರ್, ಮಾಜಿ ಶಾಸಕರು ಸಿರಾಜ್ ಶೇಖ್, ಮುಖಂಡರು ನಾಜಿಂಶೇಖ್, ಜಿಲಾನ್ ಸಾಬ್, ಸಾಗರ್ ಜಮೀರ್ ಸಾಬ್, ತಾಜ್‍ಫಕೃದ್ದೀನ್,  ಕಾರ್ಯದರ್ಶಿಎಂ.ನಬಿಸಾಬ್, ಉಪಾಧ್ಯಕ್ಷ ಕೆ.ಇಲಿಯಾಜ್, ಜಂಟಿ ಕಾರ್ಯದರ್ಶಿ ಮಹ್ಮದ್ ರಫಿ, ಖಜಾಂಚಿ ಜಮೀರ್‍ಸಾಬ್, ಇಲಿಯಾಜ್‍ಸಾಬ್, ಯಾದಾಗಾರ ಹುಲ್ಲಾ, ಕಾಸಿಂಪೀರಾ ಸಾಬ್, ಟಿ., ಮುಸ್ತಾಫ್, ಉಪಸ್ಥಿತರಿದ್ದರು.,