ತ್ಯಾಗ-ಬಲಿದಾನದ ಶಿಲಾಫಲಕ ಅನಾವರಣ

ಚನ್ನಮ್ಮನ ಕಿತ್ತೂರ,ಆ 16: ಇಂದಿನ ಯುಪಿಳಿಗೆಗೆ ತ್ಯಾಗ ಬಲಿದಾನದ ಅರಿವು ಮೂಡಿಸಬೇಕಾಗಿದೆಯೆಂದು ತಹಶೀಲ್ದಾರ ರವೀಂದ್ರ ಹಾದಿಮನಿ ಹೇಳಿದರು.
ಪ.ಪಂ. ಆವರಣದಲ್ಲಿ ಪ.ಪಂ ಅಧಿಕಾರಿಗಳ ಜೊತೆಗೂಡಿ 77ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೇರವೇರಿಸಿ ಪ್ರತಿಜ್ಞಾ ಶಿಲಾಫಲಕ ಅನಾವರಣಗೊಳಿಸಿ ಪ್ರತಿಜ್ಞಾವಿಧಿ ಭೋದಿಸಿ ಅವರು ಮಾತನಾಡಿದರು.
ಕೇಂದ್ರ-ರಾಜ್ಯ ಸರ್ಕಾರಗಳು ಇದು ಇಲ್ಲಿಗೆ ನಿಲ್ಲಬಾರದೆಂದು ತಿಳಿದು ಶಿಲಾಫಲಕಗಳ ಮೇಲೆ ಕೆತ್ತಿಸಿ ಯುವಪಿಳಿಗೆಗೆ ಅರಿವು ಮೂಡಿಸುವ ಉದ್ದೇಶ ಸರ್ಕಾರದ್ದಾಗಿದೆ ಎಂದರು.
ಈ ವೇಳೆ ಅಧ್ಯಕ್ಷರಾಗಿ ಶಾಸಕ ಬಾಬಾಸಾಹೇಬ ಪಾಟೀಲ, ಪ.ಪಂ.ಮುಖ್ಯಾಧಿಕಾರಿ ಪ್ರಭಾಕರ ದೊಡಮನಿ, ಪ.ಪಂ. ಕಿರಿಯ ಅಭಿಯಂತರ ವೆಂಕಟಪ್ಪ ಕಾಮಣ್ಣವರ, ಪ್ರಥಮ ದರ್ಜೆ ಸಹಾಯಕ ಶಿವಪ್ಪ ಮ್ಯಾಗೇರಿ, ಸಮುದಾಯ ಸಂಘಟಕರು ಸುರೇಶ ದೊಡ್ಡಗೌಡರ, ಕಂದಾಯ ನಿರೀಕ್ಷಕರು ಭಾಗಪ್ಪ ಸಾಣಿಕೊಪ್ಪ, ಕಛೇರಿ ಸಹಾಯಕರುಗಳಾದ ಮಂಜು ಚಿನ್ನಣ್ಣವರ, ಬಸು ಸೇರಿದಂತೆ ಪ.ಪಂ.ಸರ್ವ ಸದಸ್ಯರು , ಸಿಬ್ಬಂದಿ, ಸಾರ್ವಜನಿಕರಿದ್ದರು.