ಔರಾದ :ಜೂ.29: ತ್ಯಾಗ, ಬಲಿದಾನಗಳ ಸಂಕೇತವಾದ ಬಕ್ರೀದ್ ಹಬ್ಬವನ್ನು ತಾಲ್ಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಿದರು, ತಾಲೂಕಿನ ಕೊಳ್ಳೂರ ಗ್ರಾಮದಲ್ಲಿ ಮುಸ್ಲಿಂ ಭಾಂದವರು ಶ್ರದ್ದೆ ಭಕ್ತಿಯಿಂದ ವಿಶೇಷ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭ ಕೋರಿದರು.
ಈ ಸಂದರ್ಭದಲ್ಲಿ ಮೌಲಾನಾ ಹಾಫಿಜ್ ಸಮಿಉರ್ ರಹಮಾನ್ ಮಾತನಾಡಿ, ಬಡವರ ಹೃದಯ ಗೆದ್ದರೆ ಅಲ್ಲಾಹ ಸಂತುಷ್ಟನಾಗುತ್ತಾನೆ ಎಂದು ಪ್ರವಾದಿ ಮೊಹ್ಮದ್ ಪೈಗಂಬರ್ ಸಾರಿದ್ದಾರೆ. ಹೀಗಾಗಿ ನಾವು ಬಡವರ ಹೃದಯ ಗೆಲ್ಲುವ ಮೂಲಕ ಅಲ್ಲಾಹನ ಪ್ರೀತಿ, ಅನುಗ್ರಹಕ್ಕೆ ಪಾತ್ರರಾಗಬೇಕು, ಬಡವರ ಸೇವೆಯನ್ನು ನಮ್ಮ ಜೀವನ ಧ್ಯೇಯವಾಗಿಸಿಕೊಳ್ಳಬೇಕು ಎಂದರು.
ಬಕ್ರೀದ್ ಹಬ್ಬ ತ್ಯಾಗ, ಬಲಿದಾನದ ಸಂಕೇತವಾಗಿದೆ, ಹಜರತ್ ಇಬ್ರಾಹಿಂ ಅವರ ತ್ಯಾಗ, ಔದಾರ್ಯವನ್ನು ಈ ಹಬ್ಬ ಸಾರುತ್ತದೆ, ಭಗವಂತನ ಆದೇಶ ಬಂದಾಗ ತಮ್ಮ ಜೀವಕ್ಕಿಂತ ಅಮೂಲ್ಯವಾದ ಮಗನನ್ನು ತ್ಯಾಗ ಮಾಡಲು ಅವರು ಹಿಂದೇಟು ಹಾಕಲಿಲ್ಲ ಎಂದರು.
ಭಾರತಭವ್ಯ ಸಂಸ್ಕøತಿ, ವಿಚಾರಗಳ ದೇಶ. ನಾವೆಲ್ಲರೂ ಭಾರತೀಯರು, ಹಿಂದೂ-ಮುಸ್ಲಿಮರು ಸಹೋದರರಿದ್ದಂತೆ, ಆದರೆ, ಈ ಸಹೋದರರಲ್ಲಿ ಒಡಕು ಮೂಡಿಸುವ ಕೆಲಸವನ್ನು ದುಷ್ಟಶಕ್ತಿಗಳು ಮಾಡುತ್ತಿವೆ, ಇದಕ್ಕೆ ಬಲಿಯಾಗದೇ ಸೌಹಾರ್ದತೆ, ಸಹೋದರತೆ ಮೈಗೂಡಿಸಿಕೊಂಡು ದೇಶವನ್ನು ಕಟ್ಟುವ ಕೆಲಸ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಾಬುಮಿಯ್ಯಾ, ಘುಡುಸಾಬ, ಹುಸೇನಸಾಬ, ಫತ್ರುಸಾಬ, ಶರಿಫೆÇೀದ್ದಿನ್, ನಜೀರಸಾಬ, ಚಿನ್ನುಮಿಯ್ಯಾ, ಖುದುಬುದ್ದಿನ, ಮೌಲಾನಸಾಬ, ಇಬ್ರಾಹಿಂಸಾಬ, ರಸಿದಸಾಬ, ನಯುಮ ಸೌದಾಗರ, ತೋಫಿಕ್, ಸಲಿಮಪಾಶಾ, ಅನ್ವರ, ಎಂ. ಡಿ. ಫಯಾಜ್, ಆರಿಫ ಬಿಲಾಲ್, ಅಸದ ಸೌದಾಗರ, ಹುಸೇನ್, ಆಫೆÇ್ರೀಜ, ಸೋಹೇಲ ಸೇರಿದಂತೆ ಇತರರು ಇದ್ದರು.