ತ್ಯಾಗ ಬಲಿದಾನದ ಪವಿತ್ರ ಹಬ್ಬ ಬಕ್ರೀದ್ ಆಚರಣೆ

ಸಿರವಾರ.ಆ.2- ಮುಸ್ಲಿಂರ ತ್ಯಾಗ ಬಲಿದಾನದ ಹಬ್ಬವಾದ ಬಕ್ರೀದ್ ಹಬ್ಬವನ್ನು ಮಸ್ಜಿದಿಗಳಲ್ಲಿ ಸಾಮಾಜಿಕ ಅಂತರ ಕಾಪಾಡುವ ಮೂಲಕ ಪ್ರಾರ್ಥನೆ ಮಾಡಿ ಆಚರಣೆ ಮಾಡಲಾಯಿತು.
ದೇಶದಲ್ಲಿ ಕೋವಿಡ್-19 ವೈರಸ್ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಎಲ್ಲಾ ಜಾತಿ, ಧರ್ಮದವರ ಆಚರಣೆ ಮಾಡುವ ಹಬ್ಬಗಳನ್ನು, ಪೂಜೆಗಳನ್ನು, ಪ್ರಾರ್ಥನೆಗಳನ್ನು ನಿಷೇಧ ಮಾಡಲಾಗಿತು. ಯುಗಾದಿ, ರಂಜಾನ್ ಹಬ್ಬಗಳಲ್ಲಿ ಸಹ ಪ್ರಾರ್ಥನೆ, ಸಾಮೂಹಿಕವಾಗಿ ಆಚರಣೆ ನಿಷೇಧ ಮಾಡಲಾಗಿತು. ಈದ್ಗಾ ಮೈದಾನ ಹೊರತು ಪಡಿಸಿ ಕಳೆದ ವಾರ ಬಕ್ರೀದ್ ಹಬ್ಬಕ್ಕೆ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಲಾಗಿರುವ ಹಿನ್ನಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿ ಪ್ರಾರ್ಥನೆ ಮಾಡಿದರು.
ಪಟ್ಟಣದ ೬ ಮಸ್ಜಿದಿಗಳಲ್ಲಿ, ತಾಲೂಕಿನ ಗ್ರಾಮಗಳಲ್ಲಿರುವ ಮಸ್ಜಿದಿಗಳಲ್ಲಿ ಒಂದು ಬಾರಿಗೆ 50 ಜನರಿಗೆ ಪ್ರಾರ್ಥನೆ ಮಾಡಿದರು. ಮಸ್ಜೀದ್‌ಗಳಲ್ಲಿ ವಯೋವೃದ್ದರಿಗೆ, ಚಿಕ್ಕಮಕ್ಕಳಿಗೆ ಅವಕಾಶ ನಿರಾಕರಿಸಲಾಗಿತು. ನಮಾಜ್ ಮಾಡುವದಕ್ಕೆ ಬರುವವರಿಗೆ ಉಷ್ಟಾಂಶವನ್ನು ತಪಾಸಣೆ ಮಾಡಿ, ಸ್ಯಾನಿಟೈಜರ್‌ನಿಂದ ಕೈ ತೊಳೆಯಲಾಗುತ್ತಿತು. ನಮಾಜ ನಂತರ ಪರಸ್ಪರ ಅಪ್ಪಕೊಂಡು ಶುಭಾಷಯಗಳನ್ನು ವಿನಿಮಯ ಮಾಡದೆ ಸರಳವಾಗಿ ಆಚರಣೆ ಮಾಡಲಾಯಿತು.