ತ್ಯಾಗ ಬಲಿದಾನಗಳನ್ನು ಸ್ಮರಿಸಿಕೊಂಡು ಪ್ರಗತಿಯ ಹಾದಿಯಲ್ಲಿ ಸಾಗೋಣ

ಸಂಜೆವಾಣಿ ವಾರ್ತೆಸಂಡೂರು:ಅ:16:  ದೇಶಕ್ಕೆ ಸ್ವಾತಂತ್ಯ ಬಂದಾಗ ದೇಶಬಡರಾಷ್ಟ್ರವಾಗಿತ್ತು, ಆಹಾರದ ಸಮಸ್ಯೆ ಹೆಚ್ಚಾಗಿತ್ತು, ಅದರೆ ನೆಹರೂ ಅವರು ಅಪಾರವಾದ ಕೈಗಾರಿಕೆಗಳ ಅಭಿವೃದ್ಧಿ, ಡ್ಯಾಂಗಳ ನಿರ್ಮಾಣ, ಹಸಿರುಕ್ರಾಂತಿಯನ್ನು ಮಾಡುವ ಮೂಲಕ ಉತ್ತಮ ಭಾರತ ನಿರ್ಮಾಣಕ್ಕೆ ನಾಂದಿಯಾಡಿದರು, ಅದರ ಫಲವಾಗಿ ಇಂದು ನಾವು ಸ್ವಾತಂತ್ರ್ಯ ಸಂಗ್ರಾಮವನ್ನು ಅವರ ಸ್ಮರಣೆಯಿಂದ ಆಚರಿಸೋಣ ಎಂದು ಶಾಸಕ ಈ.ತುಕರಾಂ ತಿಳಿಸಿದರು.    ಅವರು ಪಟ್ಟಣದ ಶ್ರೀ ಛತ್ರಪತಿ ಶಿವಾಜಿ ವಿದ್ಯಾಮಂದಿರದಲ್ಲಿ ತಾಲೂಕು ಆಡಳಿತಹಮ್ಮಿಕೊಂಡಿದ್ದ 77ನೇ ಸ್ವಾತಂತ್ರ್ಯ ದಿನೋತ್ಸವ ಕಾರ್ಯಕ್ರಮದಲ್ಲಿ ಧ್ವಜವಂದನೆ ಸ್ವೀಕರಿಸಿ ಮಾತನಾಡಿ ನಾನು ಓದಿದ ಶಾಲೆಯಲ್ಲಿಯೇ ಇಂದು ಹೆಮ್ಮೆಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿರುವುದು ಸಂತಸವಾಗಿದೆ, ಪ್ರತಿಯೊಂದು ಮಗುವೂ ಸಹ ಶಿಕ್ಷಣ ಪಡೆಯುವ ಮೂಲಕ, ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿ ಸಾಧನೆ ಮಾಡಬೇಕು, ಅಂದು ದೇಶದ ಪ್ರಗತಿಗೆ ಚರಣ್‍ಸಿಂಗ್, ಮನಮಹೋನ್ ಸಿಂಗ್, ಇಂದಿರಾಗಾಂಧಿಯವರ ನಿರಂತರ ಶ್ರಮವಾಗಿ ದೇಶದ 53ನೇ ಸ್ಥಾನಕ್ಕೇರಿತ್ತು, ಇಂದು ಶಿಕ್ಷಣ ನೀಡಿಕೆಯಲ್ಲಿ ಸಂಡೂರು ಹಿಂದುಳಿದಿತ್ತು ಅದರೆ ಮುಂದಿನ ದಿನಗಳಲ್ಲಿ ಪ್ರಥಮಸ್ಥಾನಕ್ಕೆ ಏರಿಸಲು 175 ಶಾಲೆಗಳಿಗೆ ಸ್ಮಾರ್ಟ ಕ್ಲಾಸ್ ಪ್ರಾರಂಭ, 25 ಪ್ರೌಢಶಾಲೆಗಳಿಗೆ ಎಲ್ಲಾ ಸೌಲಭ್ಯ, ನೂತನವಾಗಿ ಇಂದಿರಾಗಾಂಧಿ ವಸತಿಶಾಲೆ, 180 ಕೋಟಿ ವೆಚ್ಚದಲ್ಲಿ ನೂತನ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ, ತಾಲೂಕಿನ 5 ಕಡೆಗಳಲ್ಲಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ, ಕುಡುತಿನಿಗೆ 30 ಬೆಡ್ ಹೊಸ ಅಸ್ಪತ್ರೆ ಪ್ರಾರಂಭಿಸಲಾಗುವುದು, ತಾಲೂಕಿನಾದ್ಯಂತ ಕೊರೆತೆ ಇರುವ 406 ಶಿಕ್ಷಕರಲ್ಲಿ 170 ಅತಿಥಿ ಶಿಕ್ಷಕರ ನೇಮಕಾತಿ, ಮುಂದಿನ ಹಂತದಲ್ಲಿ ಸರ್ಕಾರ 15 ಸಾವಿರ ಶಿಕ್ಷಕರ ನೇಮಕಾತಿ ಮಾಡಲಿದೆ, 1 ಕೋಟಿ 40 ಲಕ್ಷ ಅನ್ನಭಾಗ್ಯ ಯೋಜನೆಗೆ ವಿನಿಯೋಗ ಗೃಹಲಕ್ಷ್ಮೀ ಯೋಜನೆ, ಯುವನಿಧಿಗೆ 2 ಸಾವಿರ ಮತ್ತು ಡಿ.ಎಂ.ಎಫ್ ನಿಧಿಯಲ್ಲಿ ವಿಶೇಷ ಕೌಶಲ್ಯ ತರಬೇತಿಗೆ 3 ಸಾವಿರ ಒಟ್ಟು 6 ಸಾವಿರ ನೀಡುವ ಯೋಜನೆ ತರಲಾಗುವುದು, 260 ಮಾದರಿ ಅಂಗನವಾಡಿಗಳ ನಿರ್ಮಾಣ ಮಾಡುವ ಮೂಲಕ ಇಡೀ ತಾಲೂಕಿನ ಸಮಗ್ರ ಅಭಿವೃದ್ದಿಯನ್ನು ಮಾಡಲಾಗುವುದು ಪ್ರತಿಯೊಬ್ಬರೂ ಅದರ ಸದುಪಯೋಗ ಪಡೆಯುವ ಮೂಲಕ ಪ್ರಗತಿಗೆ ನಾಂದಿಯಾಡೋಣ, ಮಾತಿಗಿಂತ ಕೃತಿ ಮುಖ್ಯವಾದುದು, ರಾಜಕೀಯಕ್ಕೆ ಬಂದಾಗ ಸಿದ್ದರಾಮಯ್ಯನವರ ಆದರ್ಶಗಳು ನಮ್ಮಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮ ಸಮಾಜ ನಿರ್ಮಾಣ ಮಾಡಲು ಕಂಕಣ ಬದ್ದರಾಗಿ ಕಾರ್ಯನಿರ್ವಹಿಸಲಾಗುವುದು ಎಂದರು.ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಹಬ್ಬಗಳ ಅಧ್ಯಕ್ಷರಾದ ತಹಶೀಲ್ದಾರ್ ಅನಿಲ್‍ಕುಮಾರ ಮಾತನಾಡಿ ಸ್ವಾತಂತ್ರ್ಯ ನಮಗೆ ಹಿರಿಯರು ಮಾಡಿದ ತ್ಯಾಗ, ಬಲಿದಾನಗಳ ಫಲವಾಗಿ ಸಿಕ್ಕಿದೆ, ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಅಡಿಯಲ್ಲಿ ನಾವೆಲ್ಲರೂ ಸಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಹೆಮ್ಮೆಯ 77ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದ್ದೆವೆ ಅದಕ್ಕೆ ಇಂದು ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುವಂತಹ ಮಹತ್ತರ ಕಾರ್ಯ ನಡೆಯುತ್ತಿದ್ದು ಅದರ ಪೂರ್ಣ ಸದುಪಯೋಗ ಪಡೆದುಕೊಲ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ತಾಲೂಕಿನ ತಾಲೂಕು ಪಂಚಾಯಿತಿ ಕಾರ್ಯಾನಿರ್ವಾಹಕ ಅಧಿಕಾರಿ ಷಡಾಕ್ಷರಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎನ್.ಕೆ. ವೆಂಕಟೇಶ್, ಮಂಜುನಾಥರೆಡ್ಡಿ, ಸತೀಶ್ ಗೌಡ ಸಿ.ಪಿ.ಐ., ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಅರ್. ಅಕ್ಕಿ, ಪುರಸಭೆಯ ಸದಸ್ಯರು, ಮಾಜಿ ಅಧ್ಯಕ್ಷರುಗಳು, ವಿವಿಧ ಸಂಘಟೆನೆಗಳ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು ಎಲ್ಲಾ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು, ಎನ್.ಸಿ.ಸಿ. ಗೃºರಕ್ಷಕ ದಳ, ಸ್ಕೌಟ್ಸ್, ಗೈಡ್, ಪೋಲಿಸ್ ಇಲಾಖೆಯಿಂದ ಕವಾಯತ್ತು ಪ್ರದರ್ಶನ ವಾಯಿತು, ಧ್ವಜವಂದನೆಯನ್ನು ಶಾಸಕ ಈ.ತುಕರಾಂ ಸ್ವೀಕರಿಸಿದರು. ರಾಬಕ್ಕಿ ನಾಗರಾಜ, ಧರ್ಮನಾಯ್ಕ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದವರಿಗೆ ಸನ್ಮಾನಿಸಿದರು.ತಹಶೀಲ್ದಾರ್ ಅನಿಲ್ ಕುಮಾರ ಧ್ವಜಾರೋಹಣ, ಪೋಲಿಸ್ ಗೃಹರಕ್ಷಕದಳ, ಎನ್.ಸಿ.ಸಿ. ಸ್ಕೌಟ್ಸ್, ಗೈಡ್, ಮತ್ತು 20 ಶಾಲೆಗಳಿಂದ ಪಥ ಸಂಚಲನ, ಡಾ.ಐ.ಅರ್.ಅಕ್ಕಿ ಸ್ವಾಗತಿಸಿದರು, ಇ.ಸಿ.ಓ ಬಸವರಾಜ ನಿರೂಪಿಸಿದರು, ಬಿ.ನಾಗೇಂದ್ರ ಚಂದ್ರಶೇಖರ್ ಪಾಟೀಲ್, ವೈ.ಎಂ. ಸತೀಶ್ ಅವರ ಸಂದೇಶ ಕಳುಹಿಸಿದ್ದರು. ನಾಡಗೀತೆ, ರೈತಗೀತೆ ವಿಜಯುಕುಮಾರ ತಿರುಮಲ ತಂಡದವರು ನಡೆಸಿಕೊಟ್ಟರು.