
ಬೀದರ:ಎ.8: ಜಗತ್ತಿನ ಪಾಲಿಗೆ ಇಂದು ತ್ಯಾಗ,ಬಲಿದಾನ, ಕ್ಷಮಾ ಗುಣಗಳ ಸಾರುವ ಮತ್ತು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಒಂದು ಪವಿತ್ರ ಶುಭ ಶುಕ್ರವಾರದ ಗಳಿಗೆ.ದೇಹ ,ಮನಸ್ಸು,ಆಲೋಚನೆ ಮತು ಕ್ರಿಯೆಗಳ ಶುದ್ಧೀಕರಣದ ಸಂದರ್ಭವಾಗಿದೆ. ಮದ್ಯಾಹ್ನ ಹನ್ನೆರಡು ಗಂಟೆಯಿಂದ ಮೂರು ಗಂಟೆಯವರೆಗೆ ಯೇಸು ಕ್ರಿಸ್ತರು ಶಿಲುಬೆಯ ಮೇಲೆ ಕೊನೆಯದಾಗಿ ಆಡಿದ ಏಳು ಮಾತುಗಳನ್ನು ಇಂದು ಏಳು ಜನ ಸಭಾ ಸೇವಕರು ಮಾತಾಡಿದರು. ರೆ.ಧೂಳಪ್ಪ ಸಹಾಯಕ ಸಭಾಪಾಲಕರು ಮೆಥೋಡಿಸ್ಟ್ ಕೇಂದ್ರ ಸಭೆ ಮಂಗಲಪೇಟ ಬೀದರ. ಇವರೊಂದಿಗೆ ರೆ. ರೂಬೇನ್ ಲಕ್ಷ್ಮಯ್ಯ,ರೆ.ಪುನೀತಕುಮಾರ, ರೆ.ಇಮ್ಮಾನುವೇಲ್ ಪ್ರದೀಪ,ರೇಣುಕಾ ಸುಮಿತ್ರಾ,ಮಿಸ್ ಕ್ರಿಸ್ಟಿನಾ ಪೌಲ್,ರೆ.ನೆಲ್ಸನ್ ಸುಮಿತ್ರಾ ಜಿಲ್ಲಾ ಮೇಲ್ವಿಚಾರಕರು ದೇವರ ಸಂದೇಶ ಸಾರಿದರು.
ಪ್ರೀತಿ ಬದುಕಿಗೆ ಸುಂದರ ದಿವ್ಯೌಷಧವಾಗಿದೆ.ಅದನ್ನೇ ಸಾರಲು ಯೇಸು ಕ್ರಿಸ್ತರು ಈ ಭೂಮಿಗೆ ನರಾವತಾರವಾಗಿ ಬಂದರು.ನಿಮ್ಮವರನ್ನಲ್ಲದೆ ನಿಮ್ಮ ವೈರಿಗಳನ್ನೂ ಕ್ಷಮಿಸಿರಿ.ರೆವರೆಂಡ್ ಧೂಳಪ್ಪ ಸಹಾಯಕ ಸಭಾ ಪಾಲಕರು ಮೆಥೋಡಿಸ್ಟ್ ಕೇಂದ್ರ ಸಭೆ ಮಂಗಲಪೇಟ. ಪಾಪಿಗಳೂ ಕೂಡ ಪಶ್ಚಾತಾಪದಿಂದ ತಮ್ಮ ತಪ್ಪುಗಳನ್ನು ಒಪ್ಪಿಕೊಂಡರೆ, ಅಂಥವರಿಗೂ ದೇವರ ಸನ್ನಿಧಾನದಲ್ಲಿ ಸ್ಥಳವಿದೆ.ಮಕ್ಕಳಾದವರು ತನ್ನ ತಂದೆ ತಾಯಿಗಳಗೆ ಗೌರವಿಸಿದರೆ ದೇವರಿಗೆ ಗೌರವಿಸಿದಂತೆ. ಜಗದ್ದ್ರಕ್ಷಕನಾದ ಯೇಸು ಕ್ರಿಸ್ತರಿಗೇ ಜನ್ಮ ನೀಡಿದ ಮರಿಯಳು ಇಡೀ ಜಗತ್ತಿಗೆ ಮಾದರಿಯಾದ ತಾಯಿ. ಅಂತಹ ತಾಯಿಯೂ ಕೂಡ ತನ್ನ ಮಗನ ಕೊನೆಯ ಕ್ಷಣಗಳನ್ನು ಮೂಕ ಪ್ರೇಕ್ಷಕರಂತೆ ನೋಡುತ್ತ ನಿಂತಿರುವಂತಹ ಹೃದಯ ವಿದ್ರಾವಕ ದೃಶ್ಯ ಎಂಥವರಿಗೂ ದಿಗ್ಭಾಂತಗೊಳಿಸುತ್ತದೆ.ತಾಯಿಯೊಬ್ಬಳು ತನ್ನ ಕಣ್ಣೆದುರಿನಲ್ಲೇ ಪ್ರಾಣ ತ್ಯಾಗ ಮಾಡುವುದನ್ನು ನೋಡುವ ದೃಶ್ಯ ಜಗತ್ತಿನಲ್ಲಿಯೇ ಅಪರೂಪದ್ದಾಗಿದೆ.ಸತ್ಯ,ಅಹಿಂಸೆ,ಪ್ರಾಮಾಣಿಕತೆಗೆ ಈ ಭೂಜನ ಕೊಡುವ ಕಾಣಿಕೆಯೇ ಹಿಂಸೆ,ತೊಂದರೆ ಮತ್ತು ಅಪಹಾಸ್ಯದಿಂದ ಕೂಡಿದ ನೋವು.ಅಂತಹ ನೋವು ನಮಗಾಗಿ ಕ್ರಿಸ್ತರು ತಾಳಿದರು.ಆ ನೋವು ಇಂದು ಸ್ಮರಿಸುವ, ಧ್ಯಾನಿಸುವ ಮತ್ತು ಅವರು ತೋರಿದ ಮಾರ್ಗದಲ್ಲಿ ನಡೆಯಬೇಕು.ಸುಮಾರು ನೂರಾ ಮುವತ್ತಾರು ಕೆಜಿಯಷ್ಟಿದ್ದ ಶಿಲುಬೆಯನ್ನು ಹೊತ್ತು 600 ಮೀಟರಗಳಷ್ಟು ದೂರ ಗೊಲ್ಗೊತ್ತಾ ಶಿಖರಕ್ಕೆ ಹೊತ್ತೋಯ್ದ ಯೇಸುವು ಬಳಲಿ ಶಿಲುಬೆ ಮೇಲೆ ನೇತಾಡುವ ಸಂದರ್ಭದಲ್ಲಿ ಬಾಯಾರಿಕೆಯಿಂದ ಕುಡಿಯಲು ನೀರು ಕೇಳಿದಾಗ ಹುಳಿ ತುಂಬಿದ ರಸದ ಸ್ಪಂಜನ್ನು ಇಸೋಫ್ ಮರದ ಕಟ್ಟಿಗೆಯಿಂದ ತುಟಿಗಳಿಗೆ ನೆಕ್ಕಿಸಿ ,ಈಟಿಯಿಂದ ಪಕ್ಕೆಯಲ್ಲಿ ತಿವಿದರು.ಕೊರಡೆಗಳಿಂದ ಮನ ಬಂದಂತೆ ಹೊಡೆದರು.ಮುಖದ ಮೇಲೆ ಉಗುಳಿದರು.ಅವರ ಮೈ ಮೇಲಿನ ಬಟ್ಟೆಗಳನ್ನು ತಂತಮ್ಮೊಳಗೆ ಚೀಟು ಹಾಕಿ ಹಂಚಿಕೊಂಡರು.ಕ್ರಿಸ್ತರು ನಮಗಾಗಿ ಕೊಟ್ಟ ಪ್ರಾಣಕ್ಕಾಗಿ,ನಿರಂತರ ನನ್ನೊಂದಿಗಿರುವ ದೇವರ ಕೃಪೆಗಾಗಿ ಅನುದಿನವೂ ಪ್ರಾರ್ಥಿಸುವುದರ ಜೊತೆಗೆ ನಮ್ಮ ಆತ್ಮಗಳನ್ನು ದೇವರಿಗೆ ಒಪ್ಪಿಸಿಕೊಡಬೇಕು. ಈ ಹಿಂದಿನ ಸಂಪ್ರದಾಯದ ಜಡತ್ವ ಬದುಕಿನ ಬಗ್ಗೆ ಜನರು ಹೊಂದಿದ ಮೂಢನಂಬಿಕೆಗಳನ್ನು ಹೋಗಲಾಡಿಸಲು ದೇವಕುಮಾರನು ಮನುಷ್ಯನ ರೂಪ ಧರಿಸಿ ಧರೆಗಿಳಿದು ಬಂದು, ಧರೆಯ ಜೀವ ಸಂಕುಲ ಪರಸ್ಪರ ಪ್ರೀತಿ, ಪ್ರೇಮ,ಜೀವ ಕಾರುಣ್ಯ,ದಯೆ ಮುಂತಾದ ಮಾನವೀಯ ಮೌಲ್ಯಗಳನ್ನೊಳಗೊಂಡು ಹೇಗ ಬದುಕಬೇಕೆನ್ನುವ ಸರಳ ಬದುಕಿನ ಸೂತ್ರ ತೋರಿಸಿಕೊಟ್ಟು ಮತ್ತೆ ತಿರುಗಿ ಬರುವ ಖಚಿತ ಭರವಸೆಯೊಂದಿಗೆ ತಂದೆಯೇ ನನ್ನಾತ್ಮವನ್ನು ನಿನ್ನ ಕೈಗೆ ಅರ್ಪಿಸಿಕೊಡುತ್ತೇನೆಂದು ಮಹಾ ಧ್ವನಿಯಿಂದ ಕೂಗಿ ಶಿಲುಬೆ ಮೇಲೆ ಪ್ರಾಣ ಬಿಟ್ಟರೆಂದು ಮಂಗಲಪೇಟನ ಮೆಥೋಡಿಸ್ಟ್ ಕೇಂದ್ರ ಸಭೆಯ ಜಿಲ್ಲಾ ಮೇಲ್ವಿಚಾರಕರಾದ ದೈವ ಸಂದೇಶ ಸಾರಿದರು. ಅಪಾರ ಸಂಖ್ಯೆಯ ಕ್ರೈಸ್ತರು ಸಭಾಪಾಲನಾ ಸಮಿತಿಯ ಸದಸ್ಯರು ಶುಭ ಶುಕ್ರವಾರದ ಪವಿತ್ರ ಆರಾಧನೆಯಲ್ಲಿ ಪಾಲ್ಗೊಂಡಿದ್ದರು. ದೈವಾರಾಧನೆಯನ್ನು ಮೆಥೋಡಿಸ್ಟ್ ಕೇಂದ್ರ ಸಭೆಯ ಕಾರ್ಯದರ್ಶಿ ಬಿ.ಕೆ.ಸುಂದರರಾಜ ನಿರೂಪಿಸಿದರು.