ತ್ಯಾಗದಿಂದ ಶಾಂತಿ ಸಹನೆ ತಾಳ್ಮೆ ನೆಮ್ಮದಿ ಸಮಾಧಾನ : ವೈಜಿನಾಥ ಮಹಾರಾಜರು

ಭಾಲ್ಕಿ:ಜ.30: ಪೂಜ್ಯ ಶ್ರೀ ದಿವ್ಯಯೋಗಿ ಶ್ರೀ ಕಂಠಯ್ಯ ಸ್ವಾಮಿಗಳ 57ನೆಯ ಮಾಸಿಕ ಶಿವಾನುಭವ ಗೋಷ್ಠಿ ಕಾರ್ಯಕ್ರಮವು ಉಚ್ಚ ಗ್ರಾಮದ ಪೂಜ್ಯ ಶ್ರೀ ದಿವ್ಯಯೋಗಿ ಶ್ರೀಕಂಠಯ್ಯ ಸ್ವಾಮಿಗಳ ಲಿಂಗಯೋಗ ಧ್ಯಾನ ಮಂದಿರದಲ್ಲಿ ದಿನಾಂಕ 28-01-2024 ರಂದು ಜರುಗಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ವೈಜಿನಾಥ ಮಹಾರಾಜರು ವಹಿಸಿದ್ದರು. ಬಳಿಕ ಮಾತನಾಡಿದ ಮಹಾರಾಜರು ತ್ಯಾಗ ನಮ್ಮ ಜೀವನದಲ್ಲಿ ಅತ್ಯಂತ ಪ್ರಮುಖ ಅಂಶವಾಗಿದೆ. ಇದು ಶಾಂತಿ, ಸಹನೆ, ತಾಳ್ಮೆ, ನೆಮ್ಮದಿ ಹಾಗೂ ಸಮಾಧಾನದ ಹಾದಿಯನ್ನು ಚಿತ್ರಿಸಲು ಅನುವಾಗಬಹುದು. ನಿಮ್ಮ ಮನಸ್ಸನ್ನು ಶುದ್ಧಗೊಳಿಸಿ, ಅಸಂಪರ್ಕ ಮತ್ತು ಅನಾವಶ್ಯಕ ಚಿಂತನೆಗಳನ್ನು ಕಡಿಮೆಗೊಳಿಸಿ ಧ್ಯಾನ ಮತ್ತು ಮಾನಸಿಕ ಶಾಂತಿಯ ಅಭ್ಯಾಸವನ್ನು ಜೀವನದಲ್ಲಿ ಹಾಸುಹೊಕ್ಕಾಗಲು ಸಹಾಯಕಾರಿಯಾಗುತ್ತದೆ. ತ್ಯಾಗದಿಂದ ಶಾಂತಿ ಸಹನೆ ತಾಳ್ಮೆ ನೆಮ್ಮದಿ ಸಮಾಧಾನ ದೊರೆಯುವುದು. ಕ್ರಿಯಾಶೀಲ ಚಟುವಟಿಕೆಗಳ ಮೂಲಕ ತ್ಯಾಗದ ಸಾಧನೆಯನ್ನು ಹೊಂದಲು ದಿನನಿತ್ಯದಲ್ಲಿ ಅಳವಡಿಸಿ. ಸ್ವಸ್ಥ ಶಾರೀರಿಕ ಚಟುವಟಿಕೆಗಳು ನಿಮ್ಮ ಮನಸ್ಸನ್ನು ಶಾಂತಗೊಳಿಸಬಹುದು. ಇತರರಿಗೆ ಸಹಾನುಭೂತಿ ತೋರುವುದು ಮತ್ತು ಅವರ ನೋವನ್ನು ಹಂಚಿಕೊಳ್ಳುವುದು ಶಾಂತಿಗೆ ಒಯ್ಯುವ ಒಂದು ಅದ್ವಿತೀಯ ಮಾರ್ಗ ಎಂದು ಹೇಳಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಾಂತಾಬಾಯಿ ವೈಜಿನಾಥ ಕುಂಬಾರ ಭಾಲ್ಕಿ ಅವರು ಆಗಮಿಸಿದ್ದರು. ಶ್ರೀ ಜೈಪ್ರಕಾಶ ಕುಂಬಾರ ಭಾಲ್ಕಿ ಅವರು ಗೌರವ ಉಪಸ್ಥಿತಿ ವಹಿಸಿದ್ದರು. ಪಾರ್ವತಿ ಗುರುಬಸಪ್ಪ ಜೈನಾಪುರೆ ಬಸವಗುರು ಪೂಜೆಯನ್ನು ನೆರವೇರಿಸಿದರು. ಶಿವಯೋಗಿ ಸ್ವಾಮಿ ಸ್ವಾಗತಿಸಿದರು. ಶರಣು ಸಮರ್ಪಣೆಯನ್ನು ಚಂದನಾ ಸ್ವಾಮಿ ಅವರು ನೆರವೇರಿಸಿದರು. ಕವನ ಸ್ವಾಮಿ ವಚನ ಗಾಯನವನ್ನು ಮಾಡಿದರು. ಶ್ರೀದೇವಿ ಸ್ವಾಮಿ ಭಕ್ತಿಗೀತೆಯನ್ನು ಹಾಡಿದರು. ಸಿದ್ದಲಿಂಗ ಸ್ವಾಮಿ ನಿರೂಪಿಸಿದರು. ಸುನಿತಾ ಸ್ವಾಮಿ, ಸುಧಾರಾಣಿ ಸ್ವಾಮಿ, ಚಂದನಾ ಸ್ವಾಮಿ, ಮಹಾದೇವಿ, ಚೇತನ ಶಿವಕುಮಾರ್ ಜೈನಾಪುರೆ, ಕಾವ್ಯಂಜಲಿ, ಅಮರ ಸ್ವಾಮಿ, ಕಲಾವತಿ ಸ್ವಾಮಿ ಇತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶ್ರೀ ವೈಜಿನಾಥ ಮಹಾರಾಜರಿಗೆ, ಚೇತನ ಶಿವಕುಮಾರ್ ಜೈನಾಪುರೆ, ಶಾಂತಾಬಾಯಿ ವೈಜಿನಾಥ ಕುಂಬಾರ ದಂಪತಿಗಳಿಗೆ, ಜೈಹಿಂದ ಕುಂಬಾರ ದಂಪತಿಗಳಿಗೆ ಗೌರವ ಸನ್ಮಾನ ಜರುಗಿತು. ಭಜನೆ ಕೀರ್ತನೆ ಭಕ್ತಿಗೀತೆಗಳು ಜರುಗಿದವು. ಭಕ್ತಿ ದಾಸೋಹವನ್ನು ಸರಸ್ವತಿ ಶಿವಕುಮಾರ ಜೈನಾಪುರೆ ವಹಿಸಿದ್ದರು. ಮಂಗಲ ಹಾಗೂ ಪ್ರಸಾದದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು ಎಂದು ಶ್ರೀ ಶಾಂತಯ್ಯಾ ಸ್ವಾಮಿ ತಿಳಿಸಿದರು.