
ಬೀದರ:ಮಾ.28: ಜೀವನ ಎನ್ನುವುದು ದೇವರು ಕೊಟ್ಟ ದೈವದತ್ತ ದೇಣಿಗೆ.ಅದನ್ನು ನಾವು ಸಾರ್ಥಕವಾಗಿ ಬಳಸಿಕೊಳ್ಳಬೇಕು. ವಿಪರ್ಯಾಸವೆಂದರೆ ಇವತ್ತಿನ ತರುಣ ಜನಾಂಗ ತಮ್ಮ ಬದುಕನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದೆ.. ಆಸ್ತಿ ಅಂತಸ್ತು ಇನ್ನೆಲ್ಲವೂ ತಮ್ಮ ಜೀವನದ ವೈಭವೀಕರಣಕ್ಕೆ ತಮ್ಮ ಬೆಲೆ ಬಾಳುವ ಕ್ಷಣಗಳನ್ನು ಹಾಳು ಮಾಡುತ್ತಿದ್ದಾರೆ. ಹೀಗೆ ಮಾಡುವುದರಿಂದ ಏನು ಪ್ರಯೋಜನ! ಅದನ್ನು ಇನ್ನೊಬ್ಬರ ಹಿತಕ್ಕೆ ಅಥವಾ ಒಳತಿಗಾಗಿ ಬಳಿಸಿದಾಗ ಅದೊಂದು ಅತ್ಯುತ್ತಮ ಬದುಕು ಎನಿಸಿಕೊಳ್ಳತ್ತದೆ. ಅಂತಹ ಸಾರ್ಥಕ ಬದುಕು ಡಾ. ಎಂ.ಜಿ. ದೇಶ್ಪಾಂಡೆ ಅವರದು .ಇವರು ತಮ್ಮ ಪ್ರತಿ ವರ್ಷದ ಜನ್ಮದಿನದಂದು ಸಮಾಜದ ವಿವಿಧ ಕ್ಷೇತ್ರದ ಸಾಹಿತ್ಯ ಸಂಗೀತ ಶಿಕ್ಷಣ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆಗಳು ಮಾಡಿದ ಸಾಧಕರಿಗೆ ಗುರುತಿಸಿ ನೂರಾರು ಜನರಿಗೆ ಪ್ರಶಸ್ತಿಗಳನ್ನು ಕೊಟ್ಟು ಗೌರವಿಸುತ್ತಿದ್ದಾರೆ. ಜೊತೆಗೆ ಇವರು ತಮ್ಮ ಸಂಪತ್ತನ್ನು ಇತರ ಒಳಿತಿಗಾಗಿ ತ್ಯಾಗ ಮಾಡುತ್ತಿರುವುದು ನಿಜವಾಗಿಯೂ ಅವರದು ಅಪರೂಪ ವ್ಯಕ್ತಿತ್ವ ಎಂದು ಹೇಳಬಹುದು. ಎಂದು ಖ್ಯಾತ ಸಾಹಿತಿ ಬೆಂಗಳೂರಿನ ಡಾಕ್ಟರ್. ಎಂ ಆರ್ ನಾಗರಾಜ್ ರಾವ್ ಅವರು ನುಡಿದರು. ಇವರು ಅಂಬೇಡ್ಕರ ವೃತದ ಹತ್ತಿರದಲ್ಲಿರುವ ಕರ್ನಾಟಕ ಸಾಹಿತ್ಯ ಸಂಘ ಸಾಂಸ್ಕøತಿಕ ಭವನದಲ್ಲಿ ಮಂದಾರ ಕಲಾವಿದರ ವೇದಿಕೆ ವತಿಯಿಂದ ಏರ್ಪಡಿಸಿದ ಡಾ. ಎಂ.ಜಿ.ದೇಶಪಾಂಡೆ ಯವರ 71ನೇ ಹುಟ್ಟುಹಬ್ಬದ ದಿನಾಚರಣೆ ನಿಮಿತ್ಯ ಹಮ್ಮಿಕೊಳ್ಳಲಾದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ “ನಾಗಾಭಿನಂದನೆ” ಹಾಗೂ “ಅನುಭವಾಮೃತ “ಗ್ರಂಥಗಳನ್ನು ಲೋಕಾರ್ಪಣೆ ಮತ್ತು ವಿವಿಧ ಸಾಧಕರಿಗೆ ಪ್ರಶಸ್ತಿ ಹಾಗೂ ಗ್ರಂಥ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇಂದಿನ ದಿನಗಳಲ್ಲಿ ಮೊಬೈಲ್ ಸಂಸ್ಕೃತಿ ದೂರವಿಟ್ಟು ನಮ್ಮ ತರುಣರು ಇಂತಹ ಅದ್ಭುತ ಕಾರ್ಯಕ್ರಮಗಳಿಗೆ ಪಾಲ್ಗೊಂಡು ಸಾಹಿತ್ಯ, ಸಂಸ್ಕಾರಗಳನ್ನು ಬೆಳೆಸಿಕೊಳ್ಳಬೇಕೆಂದು ಕರೆಯಿತ್ತರು. ನಾಗಾಭಿನಂದನೆ ಗ್ರಂಥವನ್ನು ಲೋಕಾರ್ಪಣೆ ಮಾಡಿದ ಮುಖ್ಯ ಅತಿಥಿಗಳಾಗಿದ್ದ ಮಾನ್ಯ ಶ್ರೀ ಬಸವ ಕುಮಾರ್ ಪಾಟೀಲ್ ಅವರು ಮಾತನಾಡಿ ಈ ಸಂಪಾದನೆ ಗ್ರಂಥ ಅದ್ಭುತವಾಗಿದೆ. ಈ ಗ್ರಂಥದ ಅಭಿನಂದನಾರ್ಹರಾದ ಡಾ. ಎಂ.ಆರ್ ನಾಗರಾಜರಾವ ತುಂಬ ಅನುಭವಿ ಉಳ್ಳವರು. ಗ್ರಂಥದ ಲೇಖನಗಳೆಲ್ಲ ಸತ್ವಪೂರ್ಣವಾಗಿವೆ ಜೊತೆಗೆ ಇಂದಿನ ತರುಣರಿಗೆ ಈ ಗ್ರಂಥ ಮಾರ್ಗಸೂಚಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾದ ಬೆಂಗಳೂರಿನ ಶ್ರೀ ರಾಜಾಚಾರ್ಯರು ನಾಗಾಭಿನಂದನೆ ಗ್ರಂಥದ ಬಗ್ಗೆ ಮಾತನಾಡಿ ಈ ಗ್ರಂಥ ಅನುಭವಗಳಿಂದ, ಪಕ್ಕುವಾದ ಲೇಖಗಳಿಂದ ಸಂಗ್ರಹವಾಗಿದೆ ಈ ಗ್ರಂಥದಲ್ಲಿರುವ ಲೇಖನಗಳು ಪ್ರತಿಯೊಬ್ಬರು ಓದಲೇಬೇಕು ಎಂದು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಇನ್ನೋರ್ವ ಮುಖ್ಯ ಅತಿಥಿಗಳಾದ ಡಾ. ರಘುಸದಂಖ ಭಾತಂಬ್ರಾ ರವರು ಮಾತನಾಡಿ ನಾಗಾಭಿನಂದನೆ ಗ್ರಂಥದ ಸೂಕ್ಷ್ಮಾವಲೋಕನೆ ಮಾಡಿ ಅದರ ವಿವರಗಳನ್ನು ವೇದಿಕೆಯಲ್ಲಿ ತೆರೆದಿಟ್ಟರು. ಜೊತೆಗೆ ಇದೊಂದು ಎಲ್ಲರಿಗೂ ಓದಲೇಬೇಕಾದ ಗ್ರಂಥವೆಂದು ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದರು. ಅನುಭವಾಮೃತ ಶ್ರೀ ಗಣಪತರಾವ ಖೂಬಾರವರು ಲೋಕಾರ್ಪಣೆ ಮಾಡಿದರು. ಈ ವೇದಿಕೆಯಲ್ಲಿ ಪೆÇ್ರಫೆಸರ್ ಶಿವಕುಮಾರ್ ಉಪ್ಪೆಯವರು ಅನುಭವ ಮೃತ ಕೃತಿಯ ಬಗ್ಗೆ ವಿಶ್ಲೇಷಣೆ ಮಾಡಿ ಇದೊಂದು ಅಪೂರ್ವದ ಗ್ರಂಥವಾಗಿದೆ ಎಲ್ಲರ ಮನೆಯಲ್ಲಿ ಇರಬೇಕಾದಂತ ಉತ್ತಮ ಗ್ರಂಥ ಎಲ್ಲರೂ ಇಲ್ಲಿನ ಅನೇಕ ಸಂದೇಶಗಳನ್ನು ಓದುವ ಮೂಲಕ ತಮ್ಮ ಜೀವನವನ್ನು ಹಾಸನಗೊಳಿಸಿಕೊಳ್ಳಬೇಕೆಂದು ಹೇಳಿದರು. ಈ ವೇದಿಕೆಯಲ್ಲಿ ಶ್ರೀಯುತ ಶಿವರಾಜ್ ಕಾಳಶಟ್ಟಿ ಅವರು ಸಂಪಾದಿಸಿದ ಅನುಭವಾಮೃತ ಕೃತಿಯ ಬಗ್ಗೆ ತಮ್ಮ ಅತ್ಯುತ್ತಮ ವಿಚಾರವನ್ನು ವ್ಯಕ್ತಪಡಿಸಿದರು . ಮುಖ್ಯ ಅತಿಥಿಗಳಾದ ಆರ್ ಎಸ್ ಬಿರಾದಾರ ಮಾತನಾಡಿದರು. ಡಾ.ಎಂ.ಜಿ ದೇಶಪಾಂಡೆ ಅವರು ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನು ಆಡುವ ಮೂಲಕ ಇವತ್ತಿನ ದಿನಮಾನಗಳಲ್ಲಿ ಯುವ ಜನಾಂಗ ಇಂತಹ ಸಾಹಿತ್ಯ ಚಟುವಟಿಗಳಲ್ಲಿ ಪಾಲ್ಗೊಂಡು ತ್ಯಾಗ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಜೊತೆಗೆ ಹಿರಿಯರಿಗೆ ಗೌರವಿಸುವ ತಾಯಿ ತಂದೆಯವರಿಗೆ ಪ್ರೀತಿಯಿಂದ ನೋಡಿಕೊಳ್ಳಬೇಕೆಂದು ಸಂದೇಶ uಟಿಜeಜಿiಟಿeಜಡುದರು. ಧನವನ್ನು ಸಂಚಯನೆ ಮಾಡುವುದಕ್ಕಿಂತ ಜನರ ಮನಸ್ಸುಗಳನ್ನು ಅರಳಿಸುವ ಕಾರ್ಯಬೇಕು ಎಂದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ 7 ಜನ ಮಹಿಳೆಯರಿಗೆ ಪ್ರಶಸ್ತಿಗಳ ನೀಡಿ ಗೌರವಿಸಲಾಯಿತು. ಭಾರತಿ ವಸ್ತ್ರದ , ಮಹೇಶ್ವರಿ ಹೇಡೆ, ಡಾ.ಶ್ರೇಯಾ ಮಹೀಂದ್ರಕರ್ , ಪುಣ್ಯವತಿ ವಿಸಾಜಿ, ಮಾಣಿಕಾದೇವಿ ಎಂ ಪಾಟೀಲ್, ಸಂಗೀತಾ ಆರ್, ಮಾಧುರಿ ಎಸ್ ಕೆ ಪ್ರಶಸ್ತಿಗಳಿಗೆ ಭಾಜನರಾದರು.
ನಾಗಾಭಿನಂದನೆ ಗ್ರಂಥಕ್ಕೆ ಲೇಖನ ಬರೆದ ಕವಿ ಸಾಹಿತಿಗಳಿಗೆ ಈ ಸಂದರ್ಭದಲ್ಲಿ ಗ್ರಂಥ ಸಮರ್ಪಣೆ ಮಾಡಿ ಗೌರವಿ ಗೌರವಿಸಲಾಯಿತು ಜೊತೆಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆಗೈದ ನೂರು ಸಾಧಕರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಗೌರವಿಸಲಾಯಿತು. ಮಹಾನಂದ ಮಡಿಕಿ,ಸುನಿತಾ ಕೂಡ್ಲಿಕರ್, ನಾಗೇಶ್ ಸ್ವಾಮಿ ಬಸವರಾಜ ಪಂಡಿತ್ , ಮಾಣಿಕ್ ನೇಳಗಿ, ಹಂಶ ಕವಿ, ಎಸ್ ಬಿ ಕುಚಬಾಳ, ಹೇಮಲತಾ ಜೋಶಿ, ಅಶೋಕ್ ಬೂದಿಹಾಳ, ಕಿರಣಮಹಾರಾಜ, ಕಲ್ಯಣರಾವ ಕಾಡವಾದ, ಪ್ರಕಾಶ ಕುಲಕರ್ಣಿ, ಡಾ. ನಿಜಲಿಂಗ ರಗಟೆ, ಮಾಣಿಕರಾವ ಬಿರಾದಾರ, ಗೋಪಾಲಕೃಷ್ಣ ವಂಡ್ಸೆ, ಸಾಧನಾ ರಂಜೋಳಕರ್ ಡಾ. ರಾಜಾಚಾರ್ಯ, ಎ. ಎನ ರಮೇಶ, ಕಾರವಾ, ಸಂದೀಪ ಶೆಟ್ಟಿ ಉಡುಪಿ ಮೋಹನ , ಅಮೋಘ ಚೈತ್ರ ಕಾರಂಜಿ, ತುಮಕುರು ಮೋಹನ ಪಾಟೀಲ ಹೈದರಾಬಾದ್, ಸೂರ್ಯಕಾಂತ ವಿಶ್ವಕರ್ಮ, ಸುನೀತಾ ಬಿರಾದಾರ, ಪುಷ್ಪಾ.ಜಿ.ಕನಕ, ಜಗದೇವಿ ದುಬುಲಗುಂಡೆ ಸೇರಿದಂತೆ ಹಲವಾರು ಸಾಧಕರು ಈ ಸಂದರ್ಭದಲ್ಲಿ ಪ್ರಶಸ್ತಿಗೆ ಭಾಜನರಾದರು. ಪ್ರಾರಂಭದಲ್ಲಿ ಶಿವಕುಮಾರ್ ಪಂಚಾಳ್ ಸಂಗೀತ ಕಲಾವಿದರು ಸಂಗೀತ ಗಾಯನವನ್ನು ನಡೆಸಿಕೊಟ್ಟರು. ಶ್ರೀಮತಿ ಉಷಾ ಪ್ರಭಾಕರ್ ತಂಡದಿಂದ ಮಕ್ಕಳ ನೃತ್ಯ ಪ್ರದರ್ಶನ ಮಾಡಲಾಯಿತು. ಶ್ರೀಮತಿ ತ್ರಿವೇಣಿ ರಮೇಶ್ ಕುಮಾರ್ ಕೊಳಾರ ಇವರು ನಾಡಗೀತೆಯನ್ನು ಹಾಡಿದರು. ಕಾರ್ಯಕ್ರಮದಲ್ಲಿ ಡಾ.ಶ್ರೇಯಾ ಮಹೀಂದ್ರಕರ್ ಸ್ವಾಗತವನ್ನು ಕೋರಿದರೆ ಶ್ರೀಯುತ ಯೋಗೇಂದ್ರ ಯದಲಾಪೂರೆ ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ಸಂಚಾಲನೆ ಮಾಡಿದರು. ಈ ಸಮಾರಂಭದಲ್ಲಿ ನೂರಾರು ಕಲಾವಿದರು, ಗಣ್ಯರು ಪಾಲ್ಗೊಂಡಿದ್ದರು ಇದೇ ಸಂದರ್ಭದಲ್ಲಿ ಡಾ. ಎಂಜಿ.ದೇಶಪಾಂಡೆ ಯವರ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಉಮಾಕಾಂತ ಮೀಸೆ ವಂದಿಸಿದರು.