ತೋವಿವಿಯ 10ನೇ ಘಟಿಕೋತ್ಸವ ಬಿಎಸ್‍ಸಿ ತೋಟಗಾರಿಕೆಯಲ್ಲಿ ಪ್ರಶಾಂತಗೆ 14 ಚಿನ್ನದ ಪದಕ


ಬಾಗಲಕೋಟೆ: ಏಪ್ರೀಲ್ 7 : ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕುನೂರ ಗ್ರಾಮದ ಯುವಕ ಪ್ರಶಾಂತ ವಿ. ಬಿಎಸ್‍ಸ್ಸಿ ತೋಟಗಾರಿಕೆ ಪದವಿಯಲ್ಲಿ ಒಟ್ಟು 14 ಚಿನ್ನದ ಪದಕಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿದ್ದಾರೆ.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಜರುಗಿದ 10ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ತೋಟಗಾರಿಕೆ ಹಾಗೂ ರೇಷ್ಮೆ ಸಚಿವರಾದ ಆರ್.ಶಂಕರ ಅವರಿಂದ ಚಿನ್ನದ ಪದಕಗಳನ್ನು ಪಡೆದುಕೊಂಡgರು. ಇದೇ ಸಂದರ್ಭದಲ್ಲಿ ಚಿನ್ನದ ಪದಕ ಪಡೆದ ಪ್ರಶಾಂತ ಮಾತನಾಡಿ ಮೂಲತಃ ರೈತ ಕುಟುಂಬದವನಾಗಿದ್ದು, ತಮ್ಮದೇಯಾದ ಜಮೀನಿನಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುವದರ ಜೊತೆಗೆ ಕೃಷಿ ವಿಜ್ಞಾನಿಯಾಗಿ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡುತ್ತೇನೆ ಎಂದರು.
ಅದೇ ರೀತಿ ದಾವಣಗೇರೆ ಜಿಲ್ಲೆಯ ಹೊನ್ನಳ್ಳಿ ತಾಲೂಕಿನ ಹಾರಲಹಳ್ಳಿ ಗ್ರಾಮದ ಬಿಎಸ್‍ಸಿ ಸ್ನಾತಕೋತ್ತರ ವಿದ್ಯಾರ್ಥಿ ಪುಷ್ಪಾ ಎಚ್.ಎ 4 ಚಿನ್ನದ ಪದಕ ಪಡೆದರೆ, ಕೊಡಗು ಜಿಲ್ಲೆಯ ಕುಶಾಲನಗರದ ವೀಣಾ ಸಿ.ಡಿ ಎಂ.ಎಸ್‍ಸಿ ಸ್ನಾಕತೋತ್ತರದಲ್ಲಿ 4, ಚಿಕ್ಕಬಳ್ಳಾಪೂರ ಜಿಲ್ಲೆ ಶಿಡ್ಲಗಟ್ಟ ತಾಲೂಕಿನ ಜಂಗಮಕೋಟೆ ಗ್ರಾಮದ ಪೃತ್ವಿ ಬಸವರಾಜ ಎಂ.ಎಸ್.ಸಿ ತೋಟಗಾರಿಕೆಯಲ್ಲಿ 4, ಆಂದ್ರಪ್ರದೇಶದ ಚಿತ್ತೂರ ಜಿಲ್ಲೆಯ ಉಪ್ಪರಪಳ್ಳಿಯ ಕುರುಬಲಕೋಟಾ ಮಾಧವಿ ಎಂಎಸ್.ಸಿ ತೋಟಗಾರಿಕೆಯಲ್ಲಿ 3 ಹಾಗೂ ರಾಯಚೂರಿನ ಗೌತಮ ಎಂ.ಎಸ್.ಸಿ ತೋಟಗಾರಿಕೆಯಲ್ಲಿ 2 ಚಿನ್ನದ ಪದಕ ಪಡೆದುಕೊಂಡರು.
ಡಾಕ್ಟರಲ್ ಪದವಿಯಲ್ಲಿ ಸುಹಾಸಿನಿ ಚಿಕ್ಕಲಕಿ 2, ಅರ್ಷದ ಖಯೂಮ್ 1, ಎಂ.ಎಸ್‍ಸ್ಸಿ ತೋಟಗಾರಿಕೆಯಲ್ಲಿ ವಿಮಲಶ್ರೀ ಎಚ್, ರಂಜೀತ್ ಆರ್, ಚದಂಬರ ಟಿ.ಕೆ, ಶ್ರಾವಣಿ, ಗಾಯತ್ರಿ ಕುದರಿ, ಅಮೂಲ್ಯ ಎಸ್, ತಲಾ ಹಾಗೂ ಗೌತಮಿ ವೈ ಎರಡು ಚಿನ್ನದ ಪದಕ ಪಡೆದುಕೊಂಡರು. ಬಿ.ಎಸ್.ಸ್ಸಿ (ಹಾನ್ಸ್) ತೋಟಗಾರಿಕೆ/ಬಿ.ಟೆಕ್ (ಆಹಾರ ತಂತ್ರಜ್ಞಾನ)ದಲ್ಲಿ ಎಸ್.ರಾಜರಾಜೇಶ್ವರಿ, ರಶ್ಮಿತಾ ಜಿ, ನಿಖಿಲ್ ಗೌಡ, ಲಾವಣ್ಯ ಎಸ್.ಎಂ, ಕಾರ್ತಿಕ ಡಿ.ಆರ್, ಹರ್ಷದಾ ಮದಲಿ, ಅರುಣಾ, ದೀಪಾ ಹೊರಪೇಟ, ತಲಾ ಒಂದು, ಶಿವಾನಂದ ಕೋಟಿ, ಶಿಖಾ ಮನೋಹರನ್ ತಲಾ ಎರಡು, ದಿಯ ಜ್ಯೋತಿಸ್, ಯಶಸ್ವಿನಿ ಜೆ, ಕರುಣಾ ಅಪ್ಪುಗೋಳ, ಮೇಘರಾಣಿ ಟಿ ತಲಾ 3 ಚಿನ್ನದ ಪದಕ ಪಡೆದುಕೊಂಡರು.
ಘಟಿಕೋತ್ಸವದಲ್ಲಿ 468 ಬಿ.ಎಸ್ಸಿ (ಆನರ್ಸ್) ತೋಟಗಾರಿಕೆ ಮತ್ತು ತೋಟಗಾರಿಕೆ/ಬಿ.ಟೆಕ್ (ಆಹಾರ ತಂತ್ರಜ್ಞಾನ) ವಿದ್ಯಾರ್ಥಿಗಳು, ಎಂ.ಎಸ್ಸಿ (ತೋಟಗಾರಿಕೆ)ಪದವಿ ಕಾರ್ಯಕ್ರಮದಲ್ಲಿ ಬರುವ 10 ವಿಭಾಗಗಳಲ್ಲಿ 67 ಮತ್ತು ಪಿಎಚ್.ಡಿ 26 ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ 10ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪದವಿಗಳನ್ನು ಪ್ರದಾನ ಮಾಡಲಾಯಿತು. ಅಲ್ಲದೆ ಎಲ್ಲಾ ಮಹಾವಿದ್ಯಾಲಯಗಳಲ್ಲಿ ಉತ್ತಮ ಅಂಕಗಳನ್ನು ಪಡೆದ ಅರ್ಹ ಸ್ನಾತಕ ಪದವಿ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ಮತ್ತು ದಾನಿಗಳ ಚಿನ್ನದ ಪದಕಗಳÀನ್ನು ನೀಡಲಾಗುವುದು. ಅದರಂತೆ, ಸ್ನಾತಕೋತ್ತರ ಪದವಿಯಲ್ಲಿ ಆಯಾ ವಿಷಯಗಳಲ್ಲಿ ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ಮತ್ತು ವಿಶ್ವವಿದ್ಯಾಲಯದ 21 ಹಾಗೂ ದಾನಿಗಳ 43 ಚಿನ್ನದ ಪದಕಗಳನ್ನು ನೀಡಲಾಯಿತು. ಒಟ್ಟು 64 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು.