ತೋರಿಕೆಯ ಹೋರಾಟ ಬಿಟ್ಟು ಸತ್ಯ ಹೋರಾಟ ನಡೆದಾಗ ಮಾತ್ರ ಕನ್ನಡ ಉಳಿಯಲು ಸಾಧ್ಯ : ಬಿರಾದಾರ

ಔರಾದ : ನ.2:ಕನ್ನಡ ಉಳಿಸಿ ಬೆಳೆಸುವಲ್ಲಿ ನಮ್ಮ ಸರ್ಕಾರ ಎಡವುತ್ತಿರುವ ಕಾರಣ ನಾವು ಕನ್ನಡಿಗರು ತಮ್ಮ ಪ್ರಭುತ್ವ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದೇವೆ ಸತ್ಯ ಹೋರಾಟ ಮಾಡಿದಾಗ ಮಾತ್ರ ಕನ್ನಡ ಉಳಿಯಲು ಸಾಧ್ಯ ಎಂದು ರಮೇಶ ಬಿರಾದಾರ ಅಭಿಪ್ರಾಯಪಟ್ಟರು.

ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಿದ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ನಾವು ನಮ್ಮ ಕನ್ನಡಿಗರು ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೋಡಗಬೇಕು, ನಮ್ಮ ರಾಜ್ಯ ಸರ್ಕಾರಕ್ಕೆ ನಮ್ಮ ಪ್ರಭುತ್ವದ ಮೇಲೆ ಅಭಿಮಾನ ಇಲ್ಲ, ಪಾಶ್ಚಾತ್ಯ ಸಂಸ್ಕøತಿಯ ಮೇಲೆ ನಾವು ಅವಲಂಬಿತವಾಗಿದ್ದೇವೆ. ಗಡಿಭಾಗದಲ್ಲಿ ಕನ್ನಡ ಬೆಳೆಸಲು ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದರು.

ಸ್ವಹಿತಕ್ಕಾಗಿ ಹೋರಾಟ ಮಾಡುವ ಬದಲು, ಕನ್ನಡಕ್ಕಾಗಿ ಕನ್ನಡದ ಉಳಿವಿಗೆ ಹೋರಾಟ ಮಾಡಬೇಕು, ನಾವು ಒಬ್ಬ ಶ್ರೀಮಂತರಿಗೆ, ದೊಡ್ಡ ದೊಡ್ಡ ಗುತ್ತಿಗೆದಾರರಿಗೆ ಮಣೆ ಹಾಕುತ್ತಿದ್ದೇವೆ. ಅವರ ಶ್ರೀಮಂತಿಕೆಗೆ ಮಣೆ ಹಾಕುವುದನ್ನು ಬಿಟ್ಟು ನಿಜವಾದ ಸಾಧಕರಿಗೆ ಗುರುತಿಸಿ ಸನ್ಮಾನ ಮಾಡಬೇಕು. ಬಾಯಿಯಲ್ಲಿ ಕನ್ನಡ ಮಾತನಾಡುವ, ಕನ್ನಡ ಧ್ವಜ ಹಿಡಿದು ಕನ್ನಡ ಹೋರಾಟಗಾರ ಎಂದು ಹೇಳಿಕೊಳ್ಳುವ ವರು ಇವತ್ತು ತನ್ನ ಮಕ್ಕಳಿಗೆ ಆಂಗ್ಲ ಮಾಧ್ಯಮದ ಶಾಲೆಗೆ ಕಲಿಸುವರು ಹೀಗಾದರೆ ಎಲ್ಲಿ ಕನ್ನಡ ಉಳಿಯುತ್ತದೆ ಸ್ವಾಮಿ ಎಂದು ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಕನ್ನಡಾಂಬೆ ವೃತ್ತದಲ್ಲಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ತಹಸೀಲ್ದಾರ ಅರುಣಕುಮಾರ ಕುಲಕರ್ಣಿ ಚಾಲನೆ ನೀಡಿದರು, ಮೆರವಣಿಗೆಯು ಕನ್ನಡಾಂಬೆ ವೃತ್ತದಿಂದ ಬಸ್ ನಿಲ್ದಾಣ, ಬಸವೇಶ್ವರ ವೃತ್ತ, ಸರ್ಕಾರಿ ಆಸ್ಪತ್ರೆ, ಪ್ರವಾಸಿ ಮಂದಿರ ಮೂಲಕ ಮಿನಿ ವಿಧಾನಸೌಧ ತಲುಪಿತು.

ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷೆ ಅಂಬಿಕಾ ಕೇರಬಾ ಪವಾರ, ಕೃಷಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ರಘುನಾಥ ಬಿರಾದಾರ, ಪ.ಪಂ ಮುಖ್ಯಾಧಿಕಾರಿ ಶಿವಕುಮಾರ ಘಾಟೆ, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಬಿರೇಂದ್ರ ಸಿಂಗ್ ಠಾಕೂರ, ಕ್ಷೇತ್ರ ಶಿಕ್ಷಣಾಧಿಕಾರಿ ಮಕಸೂದ ಅಹ್ಮದ, ಕಸಾಪ ಅಧ್ಯಕ್ಷ ಶಾಲಿವಾನ ಉದಗೀರೆ, ಗ್ರೇಡ್-2 ತಹಸೀಲ್ದಾರ ಮಲಶೆಟ್ಟಿ ಚಿದ್ರೆ, ವಿವಿಧ ಕನ್ನಡಪರ ಸಂಘಟನೆಯ ಪದಾಧಿಕಾರಿಗಳು, ಶಾಲಾ ಮಕ್ಕಳು, ಕನ್ನಡ ಪ್ರೇಮಿಗಳು, ತಾಲೂಕಿನ ಅಧಿಕಾರಿಗಳು ಉಪಸ್ಥಿತರಿದ್ದರು.


ಹೊರಗಡೆ ಉರ್ದು ಬೋರ್ಡ ಹಾಕಿ ಒಳಗಡೆ ಕನ್ನಡ ಕಲಿಸಿದ ಶ್ರೇಯಸ್ಸು ಚನ್ನಬಸವ ಪಟ್ಟದೇವರಿಗೆ ಸಲ್ಲುತ್ತದೆ
ಕನ್ನಡದ ಮಠ ಎಂದು ಪ್ರಖ್ಯಾತಿ ಹೊಂದಿದ ಭಾಲ್ಕಿ ಮಠ, ಇಂದು ಆಂಗ್ಲಮಯವಾಗಿ ಬದಲಾಗುತ್ತಿರುವುದು ಶೋಚನೀಯ ಸಂಗತಿ.

ರಮೇಶ ಬಿರಾದಾರ,