ತೋರಣಗಲ್ಲು ವ್ಯಾಪ್ತಿಯ ಆಶಾ ಸುಗಮಕಾರರ ಆಯ್ಕೆ ಪ್ರಕ್ರಿಯೆ,


ಸಂಜೆವಾಣಿ ವಾರ್ತೆ
 ಸಂಡೂರು:ಜ:12: ತಾಲೂಕಿನ ತಾರಾನಗರ ಪ್ರಾಥಮಿಕ ಅರೋಗ್ಯ ಕೇಂದ್ರದ ವ್ಯಾಪ್ತಿಯ ತೋರಣಗಲ್ಲು, ವಡ್ಡು,  ರೈಲ್ವೆ ನಿಲ್ದಾಣ ಮತ್ತು ಕುರೇಕುಪ್ಪ ಗ್ರಾಮಗಳ 42 ಆಶಾ ಕಾರ್ಯಕರ್ತೆಯರ ಕೆಲಸ ಕಾರ್ಯಗಳನ್ನು ಸುಲಭಗೊಳಿಸಲು ಇನ್ನೊಬ್ಬ ಆಶಾ ಸುಲಭಗಾರರ ಅವಶ್ಯಕತೆ ಇದ್ದು  ತಾರಾನಗರ ಆಡಳಿತ ವೈದ್ಯಾಧಿಕಾರಿ ಡಾ.ಸುನಿತಾ ಅವರ ಅಧ್ಯಕ್ಷತೆಯಲ್ಲಿ  ಆಯ್ಕೆ ಪ್ರಕ್ರಿಯೆಯು ನಡೆಯಿತು, ನಾಲ್ಕು ಜನ ತೋರಣಗಲ್ಲು ಗ್ರಾಮದ ದೇವಮ್ಮ,ಹನುಮಂತಮ್ಮ,ಎರ್ರಮ್ಮ, ಮತ್ತು ವಡ್ಡು ಗ್ರಾಮದ ಶಾಂತಮ್ಮ ಇವರುಗಳಲ್ಲಿ ವಿದ್ಯಾ ಅರ್ಹತೆ, ಮತ್ತು ಕಮ್ಯುನಿಕೇಶನ್ಸ್ ಸ್ಕಿಲ್ಸ್ ಗಳನ್ನು ಪರಿಗಣಿಸಿ ಆಯ್ಕೆ ಪ್ರಕ್ರಿಯೆ ನಡೆಯಿತು, ನಾಲ್ವರಲ್ಲಿ ತೋರಣಗಲ್ಲು ಗ್ರಾಮದ ಎರ್ರಮ್ಮ ಆಯ್ಕೆಯಾದರು, 
 ಈ ಸಂದರ್ಭದಲ್ಲಿ ಪ್ರಭಾರ ತಾಲೂಕು ಆರೋಗ್ಯಾಧಿಕಾರಿಗಳಾದ ಡಾ. ಕುಶಾಲ್ ರಾಜ್ ಉಪಸ್ಥಿತರಿದ್ದು  ಯಾವ ರೀತಿ ತಪ್ಪುಗಳಾಗದಂತೆ ಪ್ರಕ್ರಿಯೆಯನ್ನು ಮುಕ್ತಾಯ ಮಾಡಿ ಆಯ್ಕೆಯನ್ನು ಆರ್.ಸಿ.ಹೆಚ್.ಓ ಅವರಿಗೆ ಕಳಿಸಿ ಕೊಡುವುದಾಗಿ ತಿಳಿಸಿದರು,
 ಈ ಸಂದರ್ಭದಲ್ಲಿ ಡಾ.ಗೋಪಾಲ್ ರಾವ್, ಡಾ.ಸಾದಿಯಾ, ಬಿ.ಹೆಚ್.ಇ.ಓ  ಶಿವಪ್ಪ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು