ತೋರಣಗಲ್ಲು ವಿದ್ಯಾರ್ಥಿಗಳು ಟೇಬಲ್ ಟನ್ನಿಸ್ ಪಂದ್ಯಾವಳಿಯಲ್ಲಿ ಸಾಧನೆ


ಸಂಜೆವಾಣಿ ವಾರ್ತೆ
ಸಂಡೂರು :ಸೆ:12  ಸಂಡೂರು ತಾಲ್ಲೂಕಿನ ಡೋಣಿಮಲೈ ಟೌನ್‍ಶಿಪ್‍ನಲ್ಲಿ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ತೋರಣಗಲ್ಲು ಸರ್ಕಾರಿ ಪ್ರೌಢಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗಿಯಾಗಿ ಬ್ಯಾಡ್ ಮಿಂಟನ್ ಮತ್ತು ಟೇಬಲ್ ಟೆನ್ನಿಸ್ ವಿಭಾಗದಲಿ 4 ಸುತ್ತಿನಲ್ಲಿ ವಿಜೇತರರಾಗಿದ್ದು, 2023-24ರ ಜಿಲ್ಲಾ ಮಟ್ಟದ ಕ್ರೀಡಾಕೂಟೆದಲ್ಲಿ ಅರ್ಹತೆ ಪಡೆದಿದ್ದಾರೆ. ವಿಜೇತ ತಂಡದಲ್ಲಿ ಕಾವ್ಯ ಕವಿತಾ, ಶೈಲಜಾ ವಿಜಯ್ ಕುಮಾರ್ ರುದ್ರೇಶ ನಂದ ಕುಮಾರ್ ಪ್ರಸನ್ನ ಸತೀಶ ವಿಶ್ವನಾಥ, ಪ್ರವೀಣ ವೆಂಕಟೇಶ್ ಚರಣರ, ಅರ್ಚನ,ರೇಣುಕಾ ಕೀರ್ತನಾ ವೀಣಾ ಇತರರು ಭಾಗಿ ಯಾಗಿದ್ದರು. ಶಾಲೆಯ ಪ್ರಭಾರಿ ಶಿಕ್ಷಕಿ ಅನಿಸ್ ಫಾತಿಮಾ ಮತ್ತು ತರಬೇತಿದಾರರು ಪ್ರಕಾಶ್ ವಿಜೇತ ತಂಡದವರನ್ನು ಅಭಿನಂದಿಸಿದ್ದಾರೆ.