ತೋರಣಗಲ್ಲಿನಲ್ಲಿ ಕ್ಯಾಲೆಂಡರ್ ಬಿಡುಗಡೆ


ಸಂಜೆವಾಣಿ ವಾರ್ತೆ
ಸಂಡೂರು, ಜ.02: ತಾಲೂಕು ತೋರಣಗಲ್ಲಿನ ವಿ ವಿ ನಗರದ  ಶ್ರೀ ಪವನ್ ಧಾಮ ದೇವಸ್ಥಾನದಲ್ಲಿ  ಸಂಡೂರು ತಾಲೂಕು ಆವೋಪ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಸಂಡೂರು ಆವೋಪ ಘಟಕ-ವಾಸವಿ ಫೌಂಡೇಶನ್ ಗಳ ನೂತನ ವರ್ಷ 2024ನೇ ಇಸ್ವಿಯ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ಹಾಗೂ ಸಂಡೂರು ತಾಲೂಕು ಆರ್ಯವೈಶ್ಯರ ಸಂಘಸಂಸ್ಥೆಗಳ ಗೌರವಾಧ್ಯಕ್ಷರ-ಅಧ್ಯಕ್ಷ -ಕಾರ್ಯದರ್ಶಿಯವರ ಪ್ರಪ್ರಥಮ ಸಮಾವೇಶ ಕಾರ್ಯಕ್ರಮಗಳನ್ನು ಅತಿಥೇಯರಾದ ಸಂಡೂರು ಆವೋಪ ಘಟಕ-ವಾಸವಿ ಫೌಂಡೇಶನ್ ಗಳ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಆವೋಪ ಘಟಕದ ಅಧ್ಯಕ್ಷರಾದ ಶ್ರೀಯುತ ಆಂಜನೇಯುಲು ಇವರು ವಹಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ (ಇಡೀ ಸಂಡೂರು ತಾಲೂಕಿನಾದ್ಯಂತ ಇರುವ ಆರ್ಯವೈಶ್ಯರ ಮನೆಗಳಿಗೆ ಉಚಿತವಾಗಿ ನೀಡುವ) 2024ರ ಕ್ಯಾಲೆಂಡರ್ ಗಳನ್ನ ಬಿಡುಗಡೆ ಮಾಡಿದ ಅವರು ಆರ್ಯವೈಶ್ಯರು ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸಲಹೆಗಳನ್ನು ನೀಡಿದರು.  ಮುಖ್ಯ ಅತಿಥಿಗಳಾಗಿ ತೋರಣಗಲ್ಲಿನ ಆರ್ಯವೈಶ್ಯ ಸಂಘದ ಅಧ್ಯಕ್ಷರಾದ ಶ್ರೀಯುತ ರಾಮಕೃಷ್ಣ ಶೆಟ್ರು, ಸಂಡೂರಿನ ವಾಸವಿ ಫೌಂಡೇಶನ್ ನ ಅಧ್ಯಕ್ಷರಾದ ಶ್ರೀಯುತ ಎ ನಾಗರಾಜ್, ಆವೋಪ ಘಟಕದ ಉಪಾಧ್ಯಕ್ಷರಾದ ಡಾ. ರಾಜೇಶ್ ಹಾಗೂ ಸೋವೇನಹಳ್ಳಿಯ ಶ್ರೀ ರಾಮಶೆಟ್ರು ಆಗಮಿಸಿ; ನಮ್ಮನ್ನು ನಾವು ಇನ್ನೂ ಶಿಕ್ಷಣ, ಬ್ಯಾಂಕಿಂಗ್ ಕ್ಷೇತ್ರದಲ್ಲೂ ಸೇವೆಗೈಯಲು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಂಡೂರು ತಾಲೂಕಿನಾದ್ಯಂತ ಇರುವ 10ಕ್ಕೂ ಹೆಚ್ಚು ಆರ್ಯವೈಶ್ಯರ ಸಂಘ-ಸಂಸ್ಥೆಗಳ ಗೌರವಾಧ್ಯಕ್ಷರು, ಅಧ್ಯಕ್ಷರು ಮತ್ತು ಕಾರ್ಯಾಧ್ಯಕ್ಷರುಗಳ ಪ್ರಪ್ರಥಮ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ನಂತರ ಸಂಡೂರು ತಾಲೂಕು ಘಟಕ ಆವೋಪ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಸಂಡೂರು ತಾಲೂಕು ಆರ್ಯವೈಶ್ಯರ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸಾಂಗವಾಗಿ ನೆರವೇರಿತು.
ಕಾರ್ಯಕ್ರಮಗಳ ಪ್ರಾರ್ಥನೆಯನ್ನು ಕುಮಾರಿ ಕಾವ್ಯ, ಪ್ರಾಸ್ತಾವಿಕ ನುಡಿಗಳನ್ನು ಶ್ರೀ ಉಪೇಂದ್ರ, ಪ್ರತಿಜ್ಞಾ ವಿಧಿಯನ್ನು ಶ್ರೀ ರಾಮಕೃಷ್ಣ ಶೆಟ್ರು, ವಂದನಾರ್ಪಣೆಯನ್ನು ಶ್ರೀಮತಿ ಶೀತಲ್ ಇವರು ನೆರವೇರಿಸಿದರು ಹಾಗೂ ನಿರೂಪಣೆಯನ್ನು  ಸಂಡೂರಿನ ವಕೀಲರಾದ ಶ್ರೀ ವಿಷ್ಣು ಕುಮಾರ್ ಆರ್ ವಿ ಇವರು ನೆರವೇರಿಸಿ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಸಂಪನ್ನಗೊಳಿಸಿದರು.